Advertisement

ಹೇಗಿದೆ ಗೊತ್ತಾ ‘ಜಂಟಲ್ ಮನ್’ ಟ್ರೈಲರ್..?

10:15 AM Jan 07, 2020 | Nagendra Trasi |

ಬೆಂಗಳೂರು: ಹೊಸ ವರ್ಷಕ್ಕೆ ಕಾಲಿಟ್ಟಾಯ್ತು. ಈ ವರ್ಷ ಸ್ಯಾಂಡಲ್ ವುಡ್ ನಲ್ಲಂತೂ ಸಾಲು ಸಾಲು ಸಿನೆಮಾಗಳು ಬಿಡುಗಡೆಗೆ ರೆಡಿಯಾಗಿ ನಿಂತಿವೆ. ಅವುಗಳ ನಡುವೆ ‘ಜಂಟಲ್ ಮನ್’ ಸಹ ಎಂಟ್ರಿ ಕೊಡೋಕೆ ಸಜ್ಜಾಗ್ತಿದ್ದಾನೆ.

Advertisement

ಎಸ್.ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ ವಿಭಿನ್ನ ಕಥಾ ಹಂದರದ ‘ಜಂಟಲ್ ಮನ್’ ಶುರುವಾದಾಗಿನಿಂದಲೂ ಸದ್ದು ಮಾಡುತ್ತಿರುವ ಚಿತ್ರ. ಇಂದು ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು ಸಖತ್ ಇಂಟ್ರಸ್ಟಿಂಗ್ ಆಗಿದೆ. ದಿನದ 24 ಗಂಟೆಗಳಲ್ಲಿ 18 ಗಂಟೆ ನಿದ್ದೆಯಲ್ಲೇ ಕಳೆದು ಉಳಿದ 6 ಗಂಟೆಗಳು ನಾಯಕ ಏನೆಲ್ಲಾ ಮಾಡ್ತಾರೆ ಅನ್ನೋದೇ ಚಿತ್ರದ ಕಥೆ.

ಸ್ಲೀಪಿಂಗ್ ಬ್ಯೂಟಿ ಸಿಂಡ್ರೋಮ್ ನಿಂದ ಬಳಲುವ ನಾಯಕನ ಸುತ್ತ ಹೆಣೆದಿರೋ ಈ ಕಥೆಗೆ ಜಡೇಶ್ ಕುಮಾರ್ ಹಂಪಿ ನಿರ್ದೇಶನವಿದ್ದು, ಗುರುದೇಶ್ ಪಾಂಡೆ ಬಂಡವಾಳ ಹಾಕಿದ್ದಾರೆ. ಇನ್ನು ಚಿತ್ರದಲ್ಲಿ ಸಂಚಾರಿ ವಿಜಯ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಿಶ್ವಿಕಾ ನಾಯ್ಡು ಚಿತ್ರದ ನಾಯಕಿಯಾದ್ರೆ, ಬೇಬಿ ಆರಾಧ್ಯ, ಭರತ್ ಕಲ್ಯಾಣ್ ಸೇರಿದಂತೆ ಹಲವರ  ತಾರಾಬಳಗವಿದೆ.

ಟ್ರೈಲರ್ ನಲ್ಲಿ ನಾಯಕ  ದುಷ್ಟರ ಜಾಲಕ್ಕೆ ಬಲಿಯಾಗ್ತಿದ್ದ ತನ್ನ ಪ್ರೇಯಸಿ ಹಾಗೂ ಮಗುವನ್ನ, ಕಾಡುವ ಖಾಯಿಲೆಯಿಂದ ಹೊರಬಂದು ಹೇಗೆ ಕಾಪಾಡಿಕೋಳ್ತಾನೇ ಅನ್ನೋ ಸಣ್ಣ ಕ್ಲೂ ಬಿಟ್ಟುಕೊಡಲಾಗಿದೆ. ಇನ್ನು ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಹೆಚ್ಚು ವೀಕ್ಷಣೆ ಮೂಲಕ ಯೂ ಟ್ಯೂಬ್ ನಲ್ಲಿ ಹವಾ ಕ್ರಿಯೇಟ್ ಮಾಡಿ, ಜಂಟಲ್ ಮನ್ ಥಿಯೇಟರ್ ಗೆ ಬರೋದನ್ನ ಕಾಯುವಂತೆ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next