ದೇವನಹಳ್ಳಿ: ಜನಸಾಮಾನ್ಯರಿಗೆ ಉಪಯೋಗ ವಾಗಲೆಂದು ಸರ್ಕಾರ ಜಾರಿಗೆ ತಂದಿರುವ ಜನರಿಕ್ ಔಷಧಗಳಿಂದ ಬಡ ಜನರಿಗೆ ಅನುಕೂಲವಾಗುತ್ತಿರುವುದು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕಂಡುಬರುತ್ತಿದೆ. ಜಿಲ್ಲೆಯ ನಾಲ್ಕೂ ತಾಲೂಕುಗಳ ಸರ್ಕಾರಿ ಆಸ್ಪತ್ರೆಗಳಲ್ಲಿ 8ಜನರಿಕ್ ಔಷಧ ಮಳಿಗೆಗಳನ್ನು ಪ್ರಾರಂಭಿಸಲಾಗಿದೆ. ದೇವನಹಳ್ಳಿ ಮತ್ತುವಿಜಯಪುರ, ದೊಡ್ಡಬಳ್ಳಾಪುರದ 2 ಕಡೆ ಗಳಲ್ಲಿ ಹಾಗೂ ನೆಲಮಂಗಲ ಮತ್ತು ತ್ಯಾಮಗೊಂಡ್ಲು, ಹೊಸಕೋಟೆ ಮತ್ತು ಸೂಲಿಬೆಲೆಯಲ್ಲಿ ಜನರಿಕ್ ಔಷಧ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.
ಶೇ.50ಕಡಿಮೆ ಬೆಲೆಗೆ ಔಷಧ: ಬಡಜನರು ದುಬಾರಿ ಬೆಲೆ ತೆತ್ತು ಖಾಸಗಿ ಔಷಧಿ ಮಳಿಗೆಗಳಲ್ಲಿ ಔಷಧ ಖರೀದಿಸಬೇಕಾಗಿತ್ತು.ಆದರೆ, ಖಾಸಗಿ ಔಷಧ ಮಳಿಗೆಗಳಲ್ಲಿ 30ರೂ.ಗೆ ಸಿಗುವ ಔಷಧ ಜನರಿಕ್ ಔಷಧ ಕೇಂದ್ರಗಳಲ್ಲಿ 15ರಿಂದ 20ರೂ.ಗೆ ಸಿಗುತ್ತಿರುವುದು ಬಹುದೊಡ್ಡ ಅನುಕೂಲವಾಗಿದೆ. ಜನರಿಕ್ ಔಷಧ ಮಳಿಗೆಗಳ ಗೋಡೆಗಳ ಮೇಲೆ ಕೊಟ್ಟಿರುವ ಮಾಹಿತಿಯಂತೆ ಕನಿಷ್ಠ ಶೇ.50ಕಡಿಮೆ ಬೆಲೆಗೆ ಔಷಧ ದೊರೆಯುತ್ತದೆ.
ಜನೌಷಧ ಕೇಂದ್ರ: ಜನರಿಕ್ ಔಷಧಗಳ ಮಳಿಗೆಗಿಂತ ಕೇಂದ್ರ ಸರ್ಕಾರದ ಮೂಲಕ ಸ್ಥಾಪನೆ ಆಗಿರುವ ಜನೌಷಧ ಕೇಂದ್ರದಲ್ಲಿ ಬಹಳಷ್ಟು ಅಗ್ಗದ ದರದಲ್ಲಿ ಔಷಧಗಳು ಸಿಗುತ್ತವೆ. ಉದಾಹರಣೆಗೆ ಮಧುಮೇಹಿಗಳು ಸೇವಿಸುವ ಗ್ಲೆ„ಕೋಮೆಟ್ ಜಿಪಿ ಒಂದುಮಾತ್ರೆಗೆ 6ರೂ.ಇದ್ದು, ಜನರಿಕ್ ಔಷಧ ಮಳಿಗೆಯಲ್ಲಿ ಅದು 3ರೂ.ಗೆ ಸಿಗುತ್ತದೆ.
ಎಲ್ಲಾ ರೀತಿಯ ಮಾತ್ರೆ ಸಿಗಬೇಕು:ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಜನರಿಕ್ ಔಷಧ ಸರಿಯಾಗಿ ನೀಡುತ್ತಿಲ್ಲ. ಸಕ್ಕರೆ ಖಾಯಿಲೆ ಮತ್ತು ರಕ್ತದೊತ್ತಡ ಮಾತ್ರೆ ಗಳು ಗ್ರಾಹಕರಿಗೆ ಹೆಚ್ಚಿನ ಅನುಕೂಲ ವಾಗುತ್ತಿವೆ. ನಗರಸಭೆ ಸಮೀಪ ಜನರಿಕ್‌ಔಷಧ ಮಳಿಗೆ ತಲೆಎತ್ತಿದ್ದು, ಸರಿಯಾದ ರೀತಿಯಲ್ಲಿ ಮಾತ್ರೆಗಳು ಸಿಗುತ್ತಿವೆ. ಇದು ಜನರಿಗೆ ಸಮಾಧಾನದ ಸಂಗತಿ. ಬೇರೆ ಖಾಯಿಲೆ ಗಳಿಗೂ ಹೆಚ್ಚಿನ ಮಾತ್ರೆ ಸಿಗಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಾರೆ.
ಸಮಸ್ಯೆ ಆಗದಂತೆ ನೋಡಿಕೊಳ್ಳಿ: ಜಿಲ್ಲೆ ಯಲ್ಲಿ ಯಾವುದೇ ಸಮಸ್ಯೆಯಿಲ್ಲದೇ ಜನ ರಿಕ್ ಔಷಧಗಳ ಕೇಂದ್ರಗಳು ನಡೆಯುತ್ತಿವೆ.ಖಾಸಗಿ ಔಷಧ ಅಂಗಡಿಗಳಲ್ಲಿ ಒಂದು ಲಕ್ಷ ಔಷಧಗಳು ಜನರಿಕ್ ಕೇಂದ್ರದಲ್ಲಿ 25 ಸಾವಿರ ರೂ.ಗೆ ಸಿಗುತ್ತಿರುವುದು ಶ್ಲಾಘನೀಯ ವಾಗಿದೆ. ಎಲ್ಲಾ ಔಷಧಗಳು ಮುಗಿಯುತ್ತಿ ದ್ದಂತೆ ನಿಗದಿತ ವೇಳೆಗೆ ಬೇಡಿಕೆಗೆ ಅನುಗುಣ ವಾಗಿ ಔಷಧಗಳನ್ನು ತರಿಸಬೇಕು. ಜನರಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳ ಬೇಕೆಂದು ಅಧಿಕಾರಿಗಳು ಔಷಧಾಲಯದ ಮೇಲ್ವಿ ಚಾರಕರಿಗೆ ಸೂಚಿಸಿದ್ದಾರೆ.
ಔಷಧಿಗೆ ಹೆಚ್ಚಿನ ಬೇಡಿಕೆ: ಜನರಿಕ್ ಔಷಧ ಕೇಂದ್ರದಲ್ಲಿ ಔಷಧ ಸಿಗದಿದ್ದಾಗ ಆಸ್ಪತ್ರೆ ಯಲ್ಲಿರುವ ಔಷಧಿ ನೀಡಬೇಕು. ಮುಗಿದ ತಕ್ಷಣ ಔಷಧಕ್ಕೆ ಬೇಡಿಕೆ ಸಲ್ಲಿಸಬೇಕು. ಈ ಕೇಂದ್ರಗಳಲ್ಲಿ ಬಡಜನರಿಗೆ ಔಷಧಗಳು ಕೈಗೆಟುಕುವ ದರದಲ್ಲಿ ಸಿಗುತ್ತಿರುವುದರಿಂದಔಷಧಿಗೆ ಹೆಚ್ಚಿನ ಬೇಡಿಕೆ ಇದೆ. ಗ್ರಾಹಕರ ಹೇಳಿಕೆ: ಖಾಸಗಿ ಔಷಧ ಅಂಗಡಿ ಗಳಲ್ಲಿ ಸಿಗುವಂತೆ ಎಲ್ಲಾ ಜನರಿಕ್ ಔಷಧ ಕೇಂದ್ರಗಳಲ್ಲೂ ಎಲ್ಲಾ ಔಷಧಗಳು ದೊರೆ ಯುವಂತಾಗಬೇಕು. ಜನರಿಕ್ ಔಷಧ ಕೇಂದ್ರದಿಂದ ಜನರಿಗೆ ಅನುಕೂಲವಾಗಿದೆಎಂದು ಗ್ರಾಹಕ ಶ್ರೀನಿವಾಸ್ ಹೇಳಿದರು.