ಕುಂದಾಪುರ : ಕುಂದಾಪುರ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಬುಧವಾರ (ಸೆ.28) ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹಾಗೂ ವಿಪಕ್ಷ ಸದಸ್ಯ ಚಂದ್ರಶೇಖರ ಖಾರ್ವಿ ಅವರ ನಡುವೆ ಮಾತಿನ ಜಟಾಪಟಿ ನಡೆಯಿತು.
ಇಬ್ಬರ ನಡುವಿನ ಜಟಾಪತಿ ಸಭಾತ್ಯಾಗ ಮಾಡುವವರೆಗೆ ಚರ್ಚೆಯಾಗಿ ಮುಂದುವರೆಯಿತು. ಈ ವೇಳೆ ಸಭೆ ಮುಂದುವರಿಸಿ ಎಂದು ಚಂದ್ರಶೇಖರ್ ಹೇಳಿದಾಗ ಸಭೆ ಮುಂದುವರಿಸಬೇಡಿ ಎಂದು ಶಾಸಕರು ಗಡುಸಾಗಿ ಹೇಳಿದರು.
ನೀವು ದೊಡ್ಡ ಜನ ಆಗಿರಬಹುದು , ವಿಪಕ್ಷ ನಾಯಕನಾಗಿರಬಹುದು ಎಂದು ಶಾಸಕರು ಚಂದ್ರಶೇಖರ್ ಬಳಿ ಹೇಳಿದರು. ಪುರಸಭೆ ವಿಚಾರ ಅಲ್ಲದಿದ್ದರೆ ಯಾಕೆ ಸುಮ್ಮನೆ ಚರ್ಚೆ ಮಾಡುವುದು, ಅಧಿಕಾರ ಇರುವುದು ಅಧ್ಯಕ್ಷರಿಗೆ ಎಂದು ಖಾರ್ವಿ ಹೇಳಿದರು.
ಇದನ್ನೂ ಓದಿ: ಗೋಹತ್ಯೆ ನಿಷೇಧ ಕಾಯ್ದೆ ಅನುಷ್ಠಾನವಾಗುವಲ್ಲಿ ಅಧಿಕಾರಿಗಳ ನಿರಾಸಕ್ತಿ ಸಲ್ಲದು
ನಾನೇ ಭಯಂಕರ ಎಂದು ಭಾವಿಸಬೇಡಿ, ನೀವು ಹೇಳಿದಂತೆ ಮುಂದುವರಿಸಲಾಗದು, ನೀವು ಮಾರ್ಗದರ್ಶನ ನೀಡುತ್ತೀರಾ ಎಂದು ಏರುಧ್ವನಿಯಲ್ಲಿ ಹೇಳಿದರು. ಈ ಸಭೆಯಲ್ಲಿ ನಾನಿರುವುದಿಲ್ಲ ಎಂದು ಚಂದ್ರಶೇಖರ್ ಹೊರಟರು. ನಾನೂ ಇರುವುದಿಲ್ಲ ಎಂದು ಶಾಸಕರೂ ಹೊರಡಲನುವಾದರು. ಕೊನೆಗೂ ಸಮಾಧಾನ ಆಗಿ ಸಭೆ ಮುಂದುವರಿಯಿತು.
ಶಾಸಕರಿಗೆ ಗೌರವ ನೀಡಿ, ಅವರೆಂದೂ ರಾಜಕೀಯ ತಾರತಮ್ಯ ಮಾಡಿಲ್ಲ ಎಂದು ಮೋಹನದಾಸ ಶೆಣೈ ಹೇಳಿದರು. ಇದಕ್ಕೆ ಆಡಳಿತ ಪಕ್ಷದವರು ಧ್ವನಿಗೂಡಿಸಿದರು.