Advertisement

ಜನರ ಸಮಸ್ಯೆಗೆ ಸ್ಪಂದಿಸದಿದ್ದರೆ ಕ್ರಮ

02:56 PM Dec 09, 2020 | Suhan S |

ಸಿಂದಗಿ: ಪಟ್ಟಣದ ನಿವಾಸಿಗಳ ಸಮಸ್ಯೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿ ಶೀಘ್ರದಲ್ಲಿ ಪರಿಹಾರ ನೀಡುವ ವ್ಯವಸ್ಥೆ ಪುರಸಭೆ ಆಡಳಿತದಿಂದ ಜರಗುವಂತಾಗಬೇಕು. ಯಾರು ಕೆಲಸ ಮಾಡುವುದಿಲ್ಲವೋ ಅವರ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದು ಪುರಸಭೆ ಅಧ್ಯಕ್ಷ ಡಾ| ಶಾಂತವೀರ ಮನಗೂಳಿ ಅಧಿ ಕಾರಿಗಳಿಗೆ ಎಚ್ಚರಿಕೆ ನೀಡಿದರು.

Advertisement

ಪಟ್ಟಣದ ಪುರಸಭೆ ಸಭಾಭವನದಲ್ಲಿ ಜರುಗಿನಪ್ರಥಮ ಸಾಮಾನ್ಯ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪಟ್ಟಣದ ಅಭಿವೃದ್ಧಿ ಕಾರ್ಯಗಳಿಗೆ ಸರ್ವ ಸದಸ್ಯರ ಸಹಕಾರ ಅತ್ಯಗತ್ಯ. ಪುರಸಭೆಯಲ್ಲಿ ಸಿಬ್ಬಂದಿಯ ಕೊರತೆ ಇದೆ. ಇದಕ್ಕೆ ಸಂಬಂಧಿಸಿಸಿದಂತೆ ಜಿಲ್ಲಾ ಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದರಿಂದ 3 ಸಿಬ್ಬಂದಿಯನ್ನು ನಿಯೋಜನೆ ಮಾಡಿದ್ದಾರೆ ಮತ್ತೆ ಕೆಲ ಸಿಬ್ಬಂದಿಯನ್ನುನೀಡುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಜನಸಂಖ್ಯೆ ಆಧಾರದ ಮೇಲೆ ಪುರಸಭೆಯನ್ನು ಮೇಲ್ದರ್ಜೆಗೆ ಏರಿಸಬೇಕು ಎನ್ನುವ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗುವುದು. ಪ್ರತಿ ದಿನ ಪ್ರತಿ ವಾರ್ಡ್ ಗಳಿಗೆ ಖುದ್ದಾಗಿ ನಾವು ವೀಕ್ಷಣೆ ಮಾಡುತ್ತಿದ್ದೇವೆ. ಅಲ್ಲಿನ ಸಮಸ್ಯೆಗಳನ್ನು ಆಲಿಸುತ್ತಿದ್ದೇವೆ. ಹಂತ ಹಂತವಾಗಿ ಸಮಸ್ಯೆಗೆ ಪರಿಹಾರ ನಿಡುವಲ್ಲಿ ನಾವು ಮುಂದಾಗುತ್ತೇವೆ ಎನ್ನುತ್ತಿದ್ದಂತೆ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಭಾಷಾಸಾಬ ತಾಂಬೊಳಿ 2010 ಮತ್ತು 2017ರಲ್ಲಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರಕಾರದ ಮಟ್ಟದಲ್ಲಿ ಪ್ರಯತ್ನಿಸಬೇಕಾಗಿದೆ ಎಂದು ಹೇಳಿದರು.

ಸದಸ್ಯ ಭಾಷಾಸಾಬ ತಾಂತೋಳಿ ಮಾತನಾಡಿ, ಪಟ್ಟಣದ ಬಹುತೇಕ ವಾರ್ಡ್‌ಗಳಲ್ಲಿ ಮಹಿಳೆಯರಿಗೆ ಶೌಚಾಲಯದ ಸೂಕ್ತ ವ್ಯವಸ್ಥೆ ಇಲ್ಲದಂತಾಗಿದೆ ಮತ್ತುಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದೆ. ಕೂಡಲೇ ಅವಶ್ಯವಿದ್ದಲ್ಲಿ ಕೊಳವೆ ಬಾವಿಗಳನ್ನು ಕೊರೆಸುವ ಮತ್ತು ಇದ್ದ ಕೊಳವೆ ಬಾವಿಗಳ ದುರಸ್ತಿ ಕಾರ್ಯ ನಡೆಯಬೇಕು. ಇದರ ಬಗ್ಗೆ ಮುಖ್ಯಾ ಧಿಕಾರಿಸುರೇಶ ನಾಯಕ ಅವರಿಗೆ ಹಲವು ಬಾರಿ ಮನವಿ ಸಲ್ಲಿಸಿದರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಧೂಅರೋಪಿಸಿದರು. ಪಟ್ಟಣದಲ್ಲಿ ನಡೆಯುತ್ತಿರುವ92 ಕೋಟಿ ರೂ. ಅನುದಾನದಲ್ಲಿ ಒಳಚರಂಡಿಯೋಜನೆ ಕಾಮಗಾರಿ ತುಂಬಾ ಕಳಪೆ ಮಟ್ಟದಿಂದ ನಿರ್ಮಾಣವಾಗುತ್ತಿದೆ ಎಂದು ಸದಸ್ಯರಾದ ಹಣಮಂತಸುಣಗಾರ ಮತ್ತು ಶಾಂತವೀರ ಬಿರಾದಾರ ಆರೋಪಿಸಿ ಕೂಡಲೇ ಅಧ್ಯಕ್ಷರು ಕಾಮಗಾರಿಯ ಬಗ್ಗೆ ಕ್ರಮ ಕೈಗೊಂಡು ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಸದಸ್ಯ ಹಣಮಂತ ಸುಣಗಾರ ಮಾತನಾಡಿ, ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿಗಳು ಪ್ರತಿ ವಾರ್ಡ್‌ಗಳ ಸಮೀಕ್ಷೆ ನಡೆಸಿದರೆ ಸಾಲದು. ಅಲ್ಲಿನ ಸಮಸ್ಯೆಗಳಿಗೆ ಸೂಕ್ತ ಪರಿಹಾರಕ್ಕೆ ಮುಂದಾಗಬೇಕು. ಶಿವಶಂಕರ ಬಡಾವಣೆಯಲ್ಲಿ ಮಳೆಗಾಲ ಬಂದರೆ ಸಾಕು ಅಲ್ಲಿ ಕೊಳಚೆ ಪ್ರದೇಶವಾಗಿ ಮಾರ್ಪಡುತ್ತದೆ.ಆದ್ದರಿಂದ ಅಲ್ಲಿ ಶಾಶ್ವತ ಪರಿಹಾರ ವ್ಯವಸ್ಥೆ ಕಲ್ಪಿಸಬೇಕು ಎಂದು ಹೇಳಿದರು.

Advertisement

ಸದಸ್ಯ ಸಂದೀಪ ಚೌರ ಮಾತನಾಡಿ, ಪಟ್ಟಣದಲ್ಲಿ12700 ಪ್ಲಾಟ್‌ಗಳಿವೆ. 5900 ಮನೆಗಳಿವೆ. ಇದರಲ್ಲಿಬರಿ 93 ವಾಣಿಜ್ಯ ಎಂದು ವರದಿಯಲ್ಲಿ ಇದೆ.ಇದರಿಂದ ಪುರಸಭೆಗೆ ತೆರಿಗೆ ಆದಾಯ ಕಡಿಮೆ ಬರುತ್ತಿದ್ದೆ. ಕೂಡಲೇ ಅಧಿಕಾರಿಗಳ ತಂಡ ರಚನೆಮಾಡಿ ಮನೆಗಳನ್ನು ಸಮೀಕ್ಷೆ ಮಾಡಿ ಬಾಡಿಗೆ ಇರುವಮನೆಗಳಿಗೆ ವಾಣಿಜ್ಯ ಎಂದು ದಾಖಲಿಸಬೇಕು. ಇದರಿಂದ ಪುರಸಭೆಗೆ ಹೆಚ್ಚು ಆದಾಯ ಬರುತ್ತದೆ ಎಂದರು.

ಉಪಾಧ್ಯಕ್ಷ ಹಾಸೀಂ ಆಳಂದ, ಸದಸ್ಯರಾದ ಶರಣಗೌಡ ಪಾಟೀಲ, ಪ್ರತಿಭಾ ಕಲ್ಲೂರ, ಕಲಾವತಿ ಕಡಕೋಳ, ಬಸಮ್ಮ ಸಜ್ಜನ, ತಹಸೀನ್‌ ಮುಲ್ಲಾ ಹಾಗೂ ಇತರರು ತಮ್ಮ ವಾರ್ಡಿನ ಸಮಸ್ಯೆಗಳ ಕುರಿತಾಗಿ ಮಾತನಾಡಿದರು. ಪುರಸಭೆ ಮುಖ್ಯಾಧಿಕಾರಿ ಸುರೇಶ ನಾಯಕ ಹಾಗೂ ಸಿಬ್ಬಂದಿ  ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next