ಹೊಸದಿಲ್ಲಿ: ಭೂ ಸೇನೆಯ ಉಪ ಮುಖ್ಯಸ್ಥ ಹುದ್ದೆಗೆ ಕರ್ನಾಟಕ ಮೂಲದ ಲೆ|ಜ| ಬಗ್ಗವಳ್ಳಿ ಸೋಮ ಶೇಖರ ರಾಜು ಅವರು ನೇಮಕಗೊಂಡಿದ್ದಾರೆ.
ಮೇ 1ರಂದು ಅವರು ಅಧಿಕಾರ ಸ್ವೀಕರಿಸಲಿದ್ದಾರೆ. ಹಾಲಿ ಉಪ ಮುಖ್ಯಸ್ಥ ಲೆ|ಜ| ಮನೋಜ್ ಪಾಂಡೆ ಅವರು ಭೂಸೇನೆಯ ಮುಖಸ್ಥರಾಗಿ ನೇಮಕಗೊಂಡಿದ್ದು, ಈ ಸ್ಥಾನಕ್ಕೆ ಲೆ|ಜ| ರಾಜು ಅವರನ್ನು ನೇಮಿಸಲಾಗಿದೆ.
ಸೇನಾ ಕಾರ್ಯಾಚರಣೆಗಳ ಮಹಾ ನಿರ್ದೇಶಕ (ಡಿಜಿಎಂಒ)ರಾಗಿರುವ ಅವರು, ಪೂರ್ವ ಲಡಾಖ್‌ನಲ್ಲಿ ಚೀನ ತಂಟೆಯ ಬಳಿಕ ನಿಯೋಜನೆಗೊಂಡ ಸೇನೆಯ ಸಂಪೂರ್ಣ ಉಸ್ತುವಾರಿ ವಹಿಸಿದ್ದಾರೆ. ಒಟ್ಟು 38 ವರ್ಷ ಗಳ ಸೇವಾನುಭವವನ್ನು ಸೇನೆಯಲ್ಲಿ ಹೊಂದಿ ದ್ದಾರೆ. ಉಗ್ರ ನಿಗ್ರಹ ಕ್ಷೇತ್ರದಲ್ಲಿ ಕೂಡ ಅಪಾರ ಅನುಭವವನ್ನೂ ಅವರು ಹೊಂದಿದ್ದಾರೆ.
ಹೀಗಾಗಿಯೇ ಅವರು, ಶ್ರೀನಗರ ದಲ್ಲಿ ಪ್ರಧಾನ ಕಚೇರಿ ಹೊಂದಿರುವ ಚಿನಾರ್ ಕಾಪ್ಸ್ì ಸೇನಾ ಪಡೆಯ ನೇತೃತ್ವವನ್ನೂ ವಹಿಸಿ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ)ಯಲ್ಲಿ ಉರಿ ಬ್ರಿಗೇಡ್‌ನ ನೇತೃತ್ವ ವಹಿಸಿ ಉಗ್ರ ನಿಗ್ರಹ ಕಾರ್ಯಾಚರಣೆಯ ಹೆಗ್ಗಳಿಕೆಯೂ ಅವರದ್ದಾಗಿದೆ. ರಾಜು ನಿವೃತ್ತಿಗೆ ಇನ್ನೂ 19 ತಿಂಗಳು ಉಳಿದಿವೆ.
ಭೂತಾನ್‌ನಲ್ಲಿ
ಭಾರತೀಯ ಸೇನಾ ಪಡೆಗೆ ಭೂತಾನ್‌ನಲ್ಲಿ ನಡೆಸಲಾಗಿದ್ದ ತರಬೇತಿ ಶಿಬಿರದ ನೇತೃತ್ವವನ್ನೂ ಲೆ| ಜ| ಬಗ್ಗವಳ್ಳಿ ಸೋಮಶೇಖರ ರಾಜು ವಹಿಸಿಕೊಂಡಿದ್ದರು. ಭೂ ಸೇನೆಯ ಪ್ರಧಾನ ಕಚೇರಿಯಲ್ಲಿ ಮತ್ತು ವಿವಿಧ ರೆಜಿಮೆಂಟ್‌ಗಳಲ್ಲಿ ಹಲವು ಗುರುತರ ಹೊಣೆಗಳನ್ನೂ ನಿರ್ವಹಿಸಿದ್ದರು. ರಕ್ಷಣ ಸಚಿವಾಲಯ ದಿಲ್ಲಿಯಲ್ಲಿ ಅವರ ನೇಮಕದ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದು, ಅದರಲ್ಲಿ “ಲೆ.ಜ.ರಾಜು ಅವರು, ಸೋಮಾಲಿಯಾದಲ್ಲಿ ವಿಶ್ವ ಸಂಸ್ಥೆ ನಡೆಸಿದ್ದ ಶಾಂತಿ ಪಾಲನೆ ಮತ್ತು ಮಾನವೀಯ ಕಾರ್ಯಾ ಚರಣೆಯಲ್ಲೂ ಭಾಗವಹಿಸಿ ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಯುನೈಟೆಡ್ ಕಿಂಗ್‌ಡಮ್‌ನ ರಾಯಲ್ ಕಾಲೇಜ್ ಆಫ್ ಡಿಫೆನ್ಸ್ ಸ್ಟಡೀಸ್‌ನ ವಿವಿಧ ತರಬೇತಿ ಕಾರ್ಯಕ್ರಮಗಳಲ್ಲೂ ಭಾಗವಹಿಸಿ ದ್ದಾರೆ’ ಎಂದು ಉಲ್ಲೇಖಿಸಿದೆ.
Related Articles
ಅಮೆರಿಕದ ಕ್ಯಾಲಿಫೋರ್ನಿಯಾದ ಮೊಂಟೆರೆಯಲ್ಲಿರುವ ನೇವಲ್ ಪೋಸ್ಟ್ ಗ್ರಾಜ್ಯುವೇಟ್ ಸ್ಕೂಲ್‌ನಿಂದ ಉಗ್ರ ನಿಗ್ರಹ ವಿಷಯದಲ್ಲಿ ಸ್ನಾತಕೋ ತ್ತರ ಪದವಿಯನ್ನೂ ಪಡೆದಿದ್ದಾರೆ.
ಹಲವು ಗೌರವ
ಸೇನೆಯಲ್ಲಿ ಅನುಪಮ ಸೇವೆ ಸಲ್ಲಿಸಿದ್ದಕ್ಕಾಗಿ ಅವರಿಗೆ ಉತ್ತಮ್ ಯುದ್ಧ ಸೇವಾ ಮೆಡಲ್ (ಯುಎಸ್‌ಎಂ), ಅತಿ ವಿಶಿಷ್ಟ ಸೇವಾ ಮೆಡಲ್ (ಎವಿಎಸ್‌ಎಂ), ಯುದ್ಧ ಸೇವಾ ಮೆಡಲ್ (ಯುಎಸ್‌ಎಂ) ಪ್ರದಾನ ಮಾಡಲಾಗಿದೆ.
ಸೈನಿಕ ಸ್ಕೂಲ್ ಬಿಜಾಪುರದ ವಿದ್ಯಾರ್ಥಿ
ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕು ಬಗ್ಗವಳ್ಳಿ ಗ್ರಾಮದ ಬಿ.ಎಸ್. ಸೋಮಶೇಖರಪ್ಪ ಮತ್ತು ವಿಮಲಾ ದಂಪತಿಯ ಮೂರನೇ ಮಗನಾಗಿ ಜನಿಸಿದ್ದರು. ಅವರ ತಂದೆ ಸೋಮ ಶೇಖರ್ ಎಂಜಿನಿಯರಿಂಗ್ ಶಿಕ್ಷಣ ಪಡೆದು ಪಾಲಿಟೆಕ್ನಿಕ್ ಪಾಂಶುಪಾಲರಾಗಿ ಕಾರ್ಯ ನಿರ್ವಹಿಸಿದ್ದು, ತಾಯಿ ಗೃಹಿಣಿಯಾಗಿದ್ದರು. ಬಗ್ಗವಳ್ಳಿ ಸೋಮಶೇಖರ್ ರಾಜು 1ರಿಂದ 6ನೇ ತರಗತಿವರೆಗೆ ಮೈಸೂರಿನಲ್ಲಿ, ಅನಂತರ 6ನೇ ತರಗತಿಯಿಂದ ವಿಜಯಪುರ ಜಿಲ್ಲೆಯ ಸೈನಿಕ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದಾರೆ.
ಬಗ್ಗವಳ್ಳಿಯಲ್ಲಿ ಇವರ ಸಹೋದರ ಸಂಬಂಧಿಗಳು ವಾಸವಾಗಿದ್ದು, ಅವರ ದೊಡ್ಡಪ್ಪನ ಮಗ ಲೋಕೇಶಪ್ಪ, ಪರಶಿವಪ್ಪ ಸಹ ವಾಸವಾಗಿದ್ದಾರೆ.
– H D Kumaraswamy (@h_d_kumaraswamy) 30 Apr 2022