Advertisement

ಏ.23ರಿಂದ ಸಾಮಾನ್ಯ ಪ್ರವೇಶ ಪರೀಕ್ಷೆ

12:30 AM Jan 12, 2019 | |

ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷದ ವೃತ್ತಿಪರ ಕೋರ್ಸ್‌ಗಳ ಸೀಟು ಹಂಚಿಕೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯ ದಿನಾಂಕ ನಿಗದಿಯಾಗಿದ್ದು, ಏ.23ರಿಂದ 25ರವರೆಗೆ ಪರೀಕ್ಷೆ ನಡೆಯಲಿದೆ.

Advertisement

ಏ.23ರ ಬೆಳಗ್ಗೆ ಜೀವಶಾಸ್ತ್ರ, ಮಧ್ಯಾಹ್ನ ಗಣಿತ, 24ರ ಬೆಳಗ್ಗೆ ಭೌತಶಾಸ್ತ್ರ, ಮಧ್ಯಾಹ್ನ ರಸಾಯಶಾಸ್ತ್ರ ಹಾಗೂ 25ರ ಬೆಳಗ್ಗೆ ಹೊರನಾಡು, ಗಡಿನಾಡು ವಿದ್ಯಾರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ.

2019-20ನೇ ಸಾಲಿಗೆ ಮೊದಲ ವರ್ಷದ ಎಂಜಿನಿಯರಿಂಗ್‌, ತಂತ್ರಜ್ಞಾನ, ಕೃಷಿ ವಿಜ್ಞಾನ ಕೋರ್ಸ್‌ಗಳಾದ ಬಿವಿಎಸ್‌ಸಿ ಮತ್ತು ಎ ಎಚ್‌, ಪಶು ವೈದ್ಯಕೀಯ ಮತ್ತು ಪಶು ಸಂಗೋಪನೆ, ಬಿ.ಎಸ್ಸಿ (ಹಾನರ್) ಕೃಷಿ, ಅರಣ್ಯ ವಿಜ್ಞಾನ, ರೇಷ್ಮೆ ಕೃಷಿ, ತೋಟಗಾರಿಕೆ, ಜೈವಿಕ ಕೃಷಿ ತಂತ್ರಜ್ಞಾನ, ಸಮುದಾಯ ವಿಜ್ಞಾನ, ಬಿ.ಟೆಕ್‌ ಕೋರ್ಸ್‌ಗಳಾದ ಕೃಷಿ ಎಂಜಿನಿಯರಿಂಗ್‌, ಬಯೋಟೆಕ್ನಾಲಜಿ, ಹೈನುಗಾರಿಕೆ ತಂತ್ರಜ್ಞಾನ, ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ, ಬಿಎಫ್ಎಸ್‌ಸಿ(ಮೀನುಗಾರಿಕೆ) ಬಿ.ಎಸ್ಸಿ ಕೃಷಿ ಮಾರುಕಟ್ಟೆ ಮತ್ತು ತಂತ್ರಜ್ಞಾನ, ಕೃಷಿ ಮಾರುಕಟ್ಟೆ ಮತ್ತು ಸಹಕಾರಿ ಹಾಗೂ ಬಿ-ಫಾರ್ಮಾ, ಡಿ-ಫಾರ್ಮಾ ಕೋರ್ಸ್‌ಗಳ ಸೀಟು ಹಂಚಿಕೆಗೆ ಸಿಇಟಿ ರ್‍ಯಾಂಕಿಂಗ್‌ ಮೂಲಕ ಮಾಡಲಾಗುತ್ತದೆ ಎಂದು ಪ್ರಾಧಿಕಾರ ಪ್ರಕಟಣೆ ತಿಳಿಸಿದೆ.

ವೈದ್ಯಕೀಯ, ದಂತವೈದ್ಯಕೀಯ, ಆಯುಷ್‌(ಆಯುರ್ವೇದ, ಯೋಗ, ಯುನಾನಿ, ನ್ಯಾಚುರೋಪಥಿ ಮತ್ತು ಹೋಮಿಯೋಪಥಿ) ಕೋರ್ಸ್‌ಗಳಿಗೆ ಅಭ್ಯರ್ಥಿಗಳು ಸಿಬಿಎಸ್‌ಸಿ ನಡೆಸುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್‌)-2019ರಲ್ಲಿ ಹಾಜರಾಗಬೇಕು. ಆರ್ಕಿಟೆಕ್ಚರ್‌ ಕೋರ್ಸ್‌ನ  ಪ್ರವೇಶಕ್ಕೆ ಅಭ್ಯರ್ಥಿಗಳು ಜೆಇಇ ಪೇಪರ್‌-2 ಅಥವಾ ಕೌನ್ಸಿಲ್‌ ಆಫ್ ಆರ್ಕಿಟೆಕ್ಚರ್‌ ನಡೆಸುವ ಎನ್‌ಎಟಿಎ ಪರೀಕ್ಷೆಯಲ್ಲಿ ಹಾಜರಾಗಬೇಕು. ಮಾಹಿತಿಗಾಗಿ ಪ್ರಾಧಿಕಾರದ ವೆಬ್‌ಸೈಟ್‌ //kea.kar.nic.in/ ನೋಡಬಹುದು.

Advertisement

Udayavani is now on Telegram. Click here to join our channel and stay updated with the latest news.

Next