Advertisement

Geethanjali Silks: ಪುರುಷರ ಬಟ್ಟೆಗಳ ವಿಶಾಲ ವಿಭಾಗ ಗ್ರಾಹಕರಿಂದಲೇ ಉದ್ಘಾಟನೆ

12:53 PM Oct 09, 2024 | Team Udayavani |

ಉಡುಪಿ: ಕರಾವಳಿ ಕರ್ನಾಟಕದ ಅತೀ ವಿಶಾಲವಾದ ಮಳಿಗೆಯಾದ ಗೀತಾಂಜಲಿ ಸಿಲ್ಕ್ಸ್‌‌ನಲ್ಲಿ ಪುರುಷರ ಬಟ್ಟೆಗಳ ಅತೀ ವಿಶಾಲ ವಿಭಾಗದ  ‘ಗ್ರಾಹಕರೇ ದೇವರು’ ಪರಿಕಲ್ಪನೆಯಡಿ ಸಂಸ್ಥೆಯ 1ನೇ ಮಹಡಿಯಲ್ಲಿ ಬುಧವಾರ( ಅ.9) ಬೆಳಗ್ಗೆ ಉದ್ಘಾಟನೆ ನೆರವೇರಿದೆ.

Advertisement

ಸಂಸ್ಥೆಯ ಅಭಿವೃದ್ಧಿ ಪಥದಲ್ಲಿ ಗ್ರಾಹಕರು ನೀಡಿದ ಸಹಕಾರದ ಹಿನ್ನೆಲೆ ಬೆಳಗ್ಗೆ ಸೇರಿದ್ದ ಗ್ರಾಹಕರೇ ಉದ್ಘಾಟಿಸಿರುವುದು ಕಾರ್ಯಕ್ರಮದ ವಿಶೇಷತೆಯಾಗಿದೆ.

ನೂತನ 1ನೇ ಮಹಡಿಯಲ್ಲಿ ಸ್ವದೇಶಿ ಹಾಗೂ ವಿದೇಶಿಯ ಎಲ್ಲ ಪ್ರಮುಖ ಬ್ರ್ಯಾಂಡ್‌ಗಳು, ಮದುವೆ ಹಾಗೂ ಸಮಾರಂಭಗಳಿಗೆ ಬೇಕಾದ ಆಧುನಿಕ-ಪಾರಂಪರಿಕ ಶೈಲಿಯ ವಸ್ತ್ರಗಳು, ಆಫೀಸ್‌ವೇರ್, ಕ್ಯಾಶುಯಲ್ ವೇರ್, ಗ್ರಾಹಕರ ಅಭಿರುಚಿಗೆ ಅನುಸಾರವಾಗಿ ಸೂಟಿಂಗ್-ಶರ್ಟಿಂಗ್ ಹಾಗೂ ಪುರುಷರ ಒಳ ಉಡುಪುಗಳನ್ನು ಒಳಗೊಂಡ ಅತೀ ವಿಶಾಲವಾದ ವಿಭಾಗವಿದೆ.

ಈಗಾಗಲೇ ಸಂಸ್ಥೆಯ 3ನೇ ಮಹಡಿಯಲ್ಲಿ ಮಕ್ಕಳು ಹಾಗೂ ಮಹಿಳೆಯರಿಗೆ ಬೇಕಿರುವ ವಸ್ತ್ರಗಳಿವೆ. 2ನೇ ಮಹಡಿಯಲ್ಲಿ ಸೀರೆಗಳ ಅಪಾರ ಸಂಗ್ರಹವಿದೆ.

ಪ್ರವರ್ತಕರಾದ ರಾಮಕೃಷ್ಣ ವಾಗ್ಳೆ ಮಾತನಾಡಿ, ಗ್ರಾಹಕರ ಆಶೀರ್ವಾದದಿಂದ ಸಂಸ್ಥೆಯು ಉಡುಪಿಯಲ್ಲಿ ನಾಲ್ಕು ದಶಕಗಳಿಂದ ಹಲವಾರು ಉದ್ಯಮ ನಡೆಸಿಕೊಂಡು ಬಂದಿದೆ. ವರ್ಷದಿಂದ ವರ್ಷಕ್ಕೆ ಗ್ರಾಹಕರ ಸಂಖ್ಯೆಯಲ್ಲಿಯೂ ಹೆಚ್ಚಳ ಕಂಡುಬರುತ್ತಿದ್ದು, ಜನರು ಗೀತಾಂಜಲಿ ಸಿಲ್ಕ್ಸ್‌ ಅನ್ನು ಒಪ್ಪಿಕೊಂಡಿದ್ದಾರೆ ಎಂಬುವುದಕ್ಕೆ ಇದು ಸಾಕ್ಷಿಯಾಗಿದೆ. ಈಗ ಮದುವೆ ಸಮಾರಂಭಗಳಿಗೆ ಬೇಕಾದ ವಸ್ತ್ರಗಳಿಗೂ ಪ್ರತ್ಯೇಕ ಸಂಗ್ರಹಾಲಯ ಮಾಡಲಾಗಿದೆ ಎಂದರು.

Advertisement

ದೇಶಾದ್ಯಂತ ವಿಭಿನ್ನ ಸಂಸ್ಕೃತಿಯಲ್ಲಿ ವಿಭಿನ್ನ ವಸ್ತ್ರಗಳ ಧಾರಣೆ ಇಲ್ಲಿನ ವಿಶೇಷವಾಗಿದೆ. ದೇಶದ ವಿವಿಧ ಭಾಗದ ವಿಶೇಷ ಉಡುಪುಗಳ ಸಂಗ್ರಹ, ಆಮದು ವಸ್ತ್ರಗಳ ಸಂಗ್ರಹ ಮಾಡಲಾಗಿದ್ದು, ಗ್ರಾಹಕರ ಆಯ್ಕೆಗೆ ವಿಪುಲ ಅವಕಾಶವಿದೆ. ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ ಹಾಗೂ ವ್ಯಾಲೆಟ್ ಪಾರ್ಕಿಂಗ್ ಕೂಡ ಇಲ್ಲಿದೆ.  ಪಕ್ಕದಲ್ಲಿಯೇ ಹೊಟೇಲ್ ಕೂಡ ಇರುವ ಕಾರಣ ಗ್ರಾಹಕರು ಇಲ್ಲಿ ತಮ್ಮ ನೆಚ್ಚಿನ ವಸ್ತ್ರ ಖರೀದಿಗೆ ಬಹಳಷ್ಟು ಸಮಯ ವ್ಯಯ ಮಾಡಲೂ ಅನುಕೂಲಕರ ವಾತಾವರಣವಿದೆ ಎಂದರು.

ಸಂಸ್ಥೆಯ ಪ್ರವರ್ತಕರಾದ ಲಕ್ಷ್ಮಣ ವಾಗ್ಳೆ, ರಮೇಶ್ ವಾಗ್ಳೆ, ಹರೀಶ್ ವಾಗ್ಳೆ ಉಪಸ್ಥಿತರಿದ್ದರು.

ಈಗ ಪುರುಷರಿಗೂ ಬೃಹತ್ ಮಳಿಗೆ

ಗೀತಾಂಜಲಿ ಸಿಲ್ಕ್ಸ್‌‌ನ ನೂತನ ಪುರುಷರ ವಿಭಾಗವು ಇದು 15 ಸಾವಿರ ಚದರಡಿಗೂ ಅಧಿಕ ವಿಸ್ತೀರ್ಣ ಹೊಂದಿದ್ದು, ಅಲೈನ್ ಸೊಲ್ಲಿ,  ಪೀಟರ್ ಇಂಗ್ಲೆಂಡ್, ಲಿವೈಸ್, ಬ್ಲ್ಯಾಕ್ ಬೆರ್ರಿ, ಕಿಲ್ಲರ್ ಸಹಿತ ಒಟ್ಟು  22ಕ್ಕೂ ಅಧಿಕ ವಿವಿಧ ಬ್ರ್ಯಾಂಡ್‌ಗಳ ಉತ್ಪನ್ನಗಳು ಇಲ್ಲಿವೆ. ಇತರ ಬ್ರ್ಯಾಂಡ್‌ಗಳ ಬಟ್ಟೆಗಳು ಕೂಡ ದೊರೆಯಲಿದೆ. ಪ್ರತ್ಯೇಕ ಟೈಲರಿಂಗ್ ವಿಭಾಗವೂ ಇಲ್ಲಿದೆ. ಕಂಪೆನಿಯ ಆಫರ್‌ಗಳೂ ಗ್ರಾಾಹಕರಿಗೆ ನೇರವಾಗಿ ಸಿಗಲಿದೆ ಎಂದು ಪ್ರವರ್ತಕರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next