ಮುಂಬಯಿ, ಜ. 1: ಯಾವುದೇ ಒಳ್ಳೆಯ ಧಾರ್ಮಿಕ ಕೆಲಸಗಳನ್ನು ಮಾಡಬೇಕಿದ್ದರೂ ಅದಕ್ಕೆ ದೇಹ ಸದೃಢವಾಗಿರುವುದು ಅತ್ಯಗತ್ಯ. ಏಕಾದಶಿ ವ್ರತ ಮಾಡುವುದರಿಂದ ದೇಹ ಮತ್ತು ಮನಸ್ಸಿನ ಸ್ವಾಸ್ಥ್ಯ ಕಾಪಾಡಿಕೊಳ್ಳವ ಮೂಲಕ ಜೀವನದಲ್ಲಿ ಎದುರಾಗುವ ಕಷ್ಟ, ಕಾರ್ಪಣ್ಯಗಳನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಬಹುದು. ಈ ಮೂಲಕ ಪರಮಾತ್ಮನ ಸಾಮೀಪ್ಯ ಸೇರಬಹುದು ಎಂಬುದುವೈಕುಂಠ ಏಕಾದಶಿಯ ವಿಶೇಷತೆಯಾಗಿದೆ. ಅನಾದಿ ಕಾಲದಿಂದಲೂ ಇದು ಮೋಕ್ಷದ ಏಕಾದಶಿ ಎಂಬ ನಂಬಿಕೆ ಇದೆ ಎಂದು ಪಲಿಮಾರು ಮಠದ ಟ್ರಸ್ಟಿ ಸಚ್ಚಿದಾನಂದ ರಾವ್ ತಿಳಿಸಿದರು.
ಡಿ. 25ರಂದು ಮೀರಾರೋಡ್ ಪಲಿಮಾರು ಮಠದ ಶ್ರೀ ಬಾಲಾಜಿ ಸನ್ನಿಧಿಯಲ್ಲಿ ವೈಕುಂಠ ಏಕಾದಶಿ ಮತ್ತು ಗೀತಾ ಜಯಂತಿಗೆ ಚಾಲನೆ ನೀಡಿ ಮಾತನಾಡಿದ ಅವರು, ಭಗವದ್ಗೀತೆ, ವಿಷ್ಣು ಸಹಸ್ರನಾಮ ಜಪ ಮಾಡುವುದುದರಿಂದ ಪಂಚಜ್ಞಾನೇಂದ್ರಿಯ, ಪಂಚ ಕರ್ಮೇಂದ್ರಿ, ಮನಸ್ಸು ಇಂದ್ರಿಯಗಳನ್ನು ಹತೋಟಿಯಲ್ಲಿಡಲು ಸಾಧ್ಯ ಎಂದರು. ಟ್ರಸ್ಟಿ ವಾಸುದೇವ ಎಸ್. ಉಪಾಧ್ಯಾಯ ಅವರಪೌರೋಹಿತ್ಯದಲ್ಲಿ ತುಳಸಿ ದಳಗಳನ್ನು ಸಹಸ್ರನಾಮದೊಂದಿಗೆ ಶ್ರೀ ದೇವರಿಗೆ ಸಮರ್ಪಿಸಿಪೂಜೆ ಸಲ್ಲಿಸಿದ ಅವರು, ಲೌಕಿಕ ಆಸಕ್ತಿಗಳಿಂದಕುಂಠಿತವಾದ ಮನಸ್ಸನ್ನು ಹೊಂದಿದ ವ್ಯಕ್ತಿಭಗವದ್ಗೀತೆಯ ಅಧ್ಯಯನದಿಂದ ಅಲೌಕಿಕ ಶಕ್ತಿಯನ್ನು ತುಂಬಿಕೊಂಡು ಜೀವನ ನಡೆಸಲು ಇದು ಪ್ರೇರಣಾ ಗ್ರಂಥವಾಗಿದೆ ಎಂದರು.
ಮೀರಾರೋಡ್ ವಿಠಲ ಮಂಡಳಿಯ ಸದಸ್ಯರಿಂದ ಲಕ್ಷ್ಮೀ ಶೋಭಾನೆ ಮತ್ತು ಭಜನೆ, ವಿದ್ವಾನ್ ಭಕ್ರೇಮಠ ಸಂತೋಷ್ ಕುಮಾರ್ ಭಟ್ ಅವರು ಭಗವದ್ಗೀತೆಯ ಉಪನ್ಯಾಸ ನೀಡಿದರು.ತುಳಸಿ ಅರ್ಚನೆಯಲ್ಲಿ ವಿದ್ವಾನ್ ಗೋಪಾಲ್ ಭಟ್,ವಿದ್ವಾನ್ ದೇವಿಪ್ರಸಾದ್ ಭಟ್, ಕುಮಾರಸ್ವಾಮಿ ಭಟ್, ಸಂತೋಷ್ ಭಟ್, ಶ್ರೀಶ ಉಡುಪ, ಪ್ರಶಾಂತ್ ಭಟ್, ಲಕ್ಷ್ಮೀನಾರಾಯಣ ಭಟ್ ಮೊದಲಾದವರು ಪಾಲ್ಗೊಂಡರು.
ಶ್ರೀ ಬಾಲಾಜಿ ಭಜನ ಮಂಡಳಿಯ ಸದಸ್ಯರು,ಕರಮಚಂದ ಗೌಡ ಸಹಿತ ಮೊದಲಾದವರು ಸಹಕರಿಸಿದರು. ಸಾಮಾಜಿಕ ಅಂತರ ಹಾಗೂಸರಕಾರದ ಕೋವಿಡ್-19ರ ನಿಯಮದಂತೆ ಭಕ್ತರುದೇವರ ದರ್ಶನ ಮಾಡಿದರು.
-ಚಿತ್ರ-ವರದಿ: ರಮೇಶ್ ಅಮೀನ್