Advertisement

ಸಿಐಎಸ್‌ಎಫ್ ಅಧಿಕಾರಿ ಶಿಖರ ಸಾಧನೆ

11:17 PM Aug 14, 2021 | Team Udayavani |

ಮಾಸ್ಕೋ: ಕೇಂದ್ರ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್‌ಎಫ್)ಯ ಅಧಿಕಾರಿ ಗೀತಾ ಸಮೋಟಾ ಅವರು ಯುರೋಪ್‌ ಖಂಡದ ಅತೀ ಎತ್ತರದ ಶಿಖರ ಎಲ್ಬ್ರಸ್‌ ಅನ್ನು  ಏರಿದ್ದಾರೆ. ಈ ಮೂಲಕ ಈ ಶಿಖರವನ್ನೇರಿದ ಮೊದಲ ಸಿಐಎಸ್‌ಎಫ್ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Advertisement

ಎಲ್ಬ್ರಸ್‌ ಪರ್ವತ ರಷ್ಯಾದಲ್ಲಿದೆ. 5,642 ಮೀಟರ್‌(18,510 ಅಡಿ) ಎತ್ತರವಿರುವ ಈ ಪರ್ವತವನ್ನು ಹತ್ತುವುದು ಒಂದು ಸಾಹಸವೇ ಸರಿ. ಆ ಸಾಹಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಗೀತಾ ಅವರ ಬಗ್ಗೆ ನಮಗೆ ಹೆಮ್ಮೆಯಿದೆ ಎಂದು ಸಿಐಎಸ್‌ಎಫ್ ಹೇಳಿದೆ.

2011ರಲ್ಲಿ ಸಿಐಎಸ್‌ಎಫ್ಗೆ ನೇಮಕವಾದ ಗೀತಾ ಪ್ರಸ್ತುತ ಮುಂಬಯಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next