Advertisement

ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಕ್ರಿಕೆಟಿಗ ಹರ್ಭಜನ್ ಸಿಂಗ್!

03:47 PM Jul 10, 2021 | Team Udayavani |

ಭಾರತ ಕ್ರಿಕೆಟ್ ತಂಡದ ಹರ್ಭಜನ್ ಸಿಂಗ್ ಮತ್ತು ಬಾಲಿವುಡ್ ನಟಿ ಗೀತಾ ಬಸ್ರಾ ದಂಪತಿಗೆ ಗಂಡುಮಗುವಾಗಿದೆ. ಈಗಾಗಲೇ ಒಂದು ಹೆಣ್ಣು ಮಗುವಿದ್ದು,  ಹರ್ಭಜನ್ ಎರಡನೇ ಬಾರಿ ತಂದೆಯಾಗಿರುವ ಖುಷಿಯಲ್ಲಿದ್ದಾರೆ.

Advertisement

ಶನಿವಾರ ಮಧ್ಯಾಹ್ನ ತಮಗೆ ಗಂಡು ಮಗು ಆಗಿರುವ ವಿಚಾರವನ್ನು ಹರ್ಭಜನ್ ಸಿಂಗ್ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ‘ಮಗು ಮತ್ತು ತಾಯಿ ಆರೋಗ್ಯವಾಗಿದ್ದಾರೆ’ ಎಂದು ಬರೆದುಕೊಂಡಿದ್ದಾರೆ. ” ಇದು ಅದ್ಭುತ ಉಡುಗೊರೆ, ನಮಗೆ ಬಹಳ ವಿಶೇಷವಾದ ಕ್ಷಣ ಇದು. ನಮ್ಮ ಜೀವನ ಸಂಪೂರ್ಣವಾಗಿದೆ, ನಾವು ಸಂತೋಷ ಸಾಗರದಲ್ಲಿ ಮುಳುಗಿದ್ದೇವೆ. ನಮ್ಮ ಕ್ಷೇಮ ಹಾಗು ಸಂತಸಕ್ಕಾಗಿ ಶುಭಕೋರಿದ ಎಲ್ಲರಿಗೂ ಧನ್ಯವಾದ ಎಂದಿದ್ದಾರೆ.

ಹರ್ಭಜನ್ ಸಿಂಗ್ ದಂಪತಿ ಅಕ್ಟೋಬರ್ 29, 2015 ರಲ್ಲಿ ಪಂಜಾಬ್‌ನ ಜಲಂಧರ್ನಲ್ಲಿ ವಿವಾಹವಾಗಿದ್ದರು. 2016ರಲ್ಲಿ ಮೊದಲ ಮಗು ಜನಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next