ನವದೆಹಲಿ: ಪ್ರಸಕ್ತ ಆರ್ಥಿಕ ವರ್ಷದಲ್ಲಿ ವಿತ್ತೀಯ ದೃಷ್ಟಿಕೋನದಲ್ಲಿ ಅನಿಶ್ಚಿತತೆ, ರೂಪಾಯಿ ಮೌಲ್ಯದಲ್ಲಿ ಸುಧಾರಣೆ ಯಾಗದೇ ಇರುವುದು, ಕೃಷಿ ಸಾಲ ಮನ್ನಾ ಮತ್ತು ಜಿಎಸ್‌ಟಿ ಅಳವಡಿಕೆಯಲ್ಲಿನ ಸವಾಲುಗಳಿಂದಾಗಿ ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಶೇ.6.75ರಿಂದ ಶೇ.7.5 ರಷ್ಟಕ್ಕೆ ತಲುಪುವುದು ಅನುಮಾನವಾಗಿದೆ ಎಂದು ಆರ್ಥಿಕ ಸಮೀಕ್ಷೆ ಎಚ್ಚರಿಸಿದೆ.
ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣಿಯನ್ ಅವರು ತಯಾರಿಸಿದ ಈ ವರದಿಯನ್ನು ಶುಕ್ರವಾರ ಸಂಸತ್ತಿನಲ್ಲಿ ಮಂಡಿಸಲಾಗಿದೆ. ವರದಿ ಯಲ್ಲಿ ಹಣದುಬ್ಬರ ಇಳಿತ, ಕೃಷಿ ಆದಾಯದಲ್ಲಿ ಕುಂಠಿತ, ಕೃಷಿ ಸಾಲ ಮನ್ನಾ, ವಿದ್ಯುತ್ ಮತ್ತು ಟೆಲಿಕಾಂ ಕ್ಷೇತದಲ್ಲಿ ಲಾಭದ ಕೊರತೆ, ಜಿಎಸ್‌ಟಿ ಜಾರಿಯಲ್ಲಿನ ಸಮಸ್ಯೆಗಳು ಆರ್ಥಿಕಾಭಿ ವೃದ್ಧಿಗೆ ತೀವ್ರ ಸವಾಲುಗಳಾಗಿವೆ ಎಂದು ಹೇಳಿದೆ. ಅಲ್ಲದೇ ಕೃಷಿ ಸಾಲ ಮನ್ನಾ ಜಿಡಿಪಿಯ ಶೇ.0.7ರಷ್ಟನ್ನು ಬಯಸಲಿದೆ. ಒಟ್ಟು ಕೃಷಿ ಸಾಲ ಮನ್ನಾ 2.7 ಲಕ್ಷ ಕೋಟಿಗೆ ತಲುಪಲಿದೆ ಎಂದಿದೆ.
ರಿಸರ್ವ್ ಬ್ಯಾಂಕ್ ನಿರೀಕ್ಷೆ ಮಾಡಿದ್ದ ಕ್ಕಿಂತಲೂ ಕಡಿಮೆ ದರದಲ್ಲಿ ಹಣದುಬ್ಬರ (ಶೇ.4ರಷ್ಟಕ್ಕೂ ಕೆಳಗೆ) ಇರಲಿದೆ ಎಂದು ಹೇಳಿದೆ. ಇದರೊಂದಿಗೆ ವಿತ್ತೀಯ ಕೊರತೆ ಪ್ರಮಾಣ 2017-18ನೇ ಸಾಲಿನಲ್ಲಿ ಜಿಡಿಪಿಯ ಶೇ.3.2ರಷ್ಟು ಇರಲಿದೆ ಎಂದು ಹೇಳಲಾಗಿದೆ. ಅಪನಗದೀಕರಣದ ಬಗ್ಗೆಯೂ ವರದಿಯಲ್ಲಿ ಪ್ರಸ್ತಾಪವಾಗಿದ್ದು, ಇದರಿಂದ ತೆರಿಗೆ ವ್ಯಾಪ್ತಿ ವಿಶಾಲವಾಗಲು ಕಾರಣವಾಗಿದೆ. ಅಪನಗದೀಕರಣ ಬಳಿಕ ಜಿಡಿಪಿ ದರ ಅತ್ಯಲ್ಪವಾಗಿ ವೇಗ ಪಡೆದಿದೆ. ತೆರಿಗೆ ವಲಯಕ್ಕೆ ಹೊಸದಾಗಿ 4.4 ಲಕ್ಷ ಮಂದಿ ಸೇರಿಕೊಂಡಿದ್ದು, ದೀರ್ಘಾವಧಿಯಲ್ಲಿ ಲಾಭ ತರಬಹುದು ಎಂದಿದೆ.
ಕೈಗಾರಿಕಾ ಉತ್ಪಾದನೆ ಭಾರೀ ಕುಸಿತ: ಮೇ ತಿಂಗಳಲ್ಲಿ ಶೇ.2.8ರಷ್ಟು ಹೆಚ್ಚಳ ವಾಗಿದ್ದ ಕೈಗಾರಿಕಾ ಉತ್ಪಾದನೆ ಜೂನ್ ತಿಂಗಳಲ್ಲಿ ನಿರೀಕ್ಷೆಯನ್ನು ಹುಸಿಯಾಗಿಸಿ, ಶೇ.0.1ರಷ್ಟು ಕುಸಿತ ದಾಖಲಿಸಿದೆ. ಜಿಎಸ್‌ಟಿ ಜಾರಿಗೆ ಮುನ್ನ ವ್ಯಾಪಾರಿಗಳು ತಮ್ಮಲ್ಲಿದ್ದ ದಾಸ್ತಾನುಗಳನ್ನು ಕಡಿಮೆ ಮಾಡಲು ಮುಂದಾಗಿದ್ದೂ ಇದಕ್ಕೊಂದು ಕಾರಣ ಎನ್ನಲಾಗಿದೆ.
ತಿಂಗಳಲ್ಲೇ ಅತಿ ಕೆಳಮಟ್ಟಕ್ಕಿಳಿದ ಸೆನ್ಸೆಕ್ಸ್
ಮುಂಬೈ: ದೇಶದ ಜಿಡಿಪಿ ಶೇ.7.5 ತಲುಪುವುದು ಕಷ್ಟ ಎಂದು ಆರ್ಥಿಕ ಸಮೀಕ್ಷೆಯ ವರದಿ ಬಂದಿದ್ದೇ ತಡ, ಮುಂಬೈ ಷೇರುಪೇಟೆ ಮತ್ತು ನಿಫ್ಟಿ ಪಾತಾಳಕ್ಕೆ ಕುಸಿದಿದೆ. ರಿಸ್ಕ್ ತಡೆ ಯಲು ಅಸಾಧ್ಯ ಎಂದು ಭಾವಿಸಿದ ಹೂಡಿಕೆ ದಾರರು ಷೇರುಗಳ ಮಾರಾ ಟದಲ್ಲಿ ತೊಡಗಿದ ಪರಿಣಾಮ ಸೆನ್ಸೆಕ್ಸ್ 317 ಅಂಕ ಕುಸಿದು, 31,213ರಲ್ಲಿ ವಹಿ ವಾಟು ಅಂತ್ಯಗೊಳಿಸಿತು. ಇನ್ನು ನಿಫ್ಟಿ ಕೂಡ ಬರೋಬ್ಬರಿ 109 ಅಂಕ ಕುಸಿತ ದಾಖಲಿಸಿ, 9,710ಗೆ ಕೊನೆ ಗೊಂ ಡಿತು. ಇದು 1 ತಿಂಗಳಲ್ಲೇ ಆದ ಅತ್ಯಧಿಕ ಕುಸಿತವಾಗಿದೆ. ಷೇರು ಮಾರುಕಟ್ಟೆಯ ಕುಸಿತದಿಂದಾಗಿ ಹೂಡಿಕೆ ದಾರರು ಸುಮಾರು 95 ಸಾವಿರ ಕೋಟಿಯಷ್ಟು ನಷ್ಟ ಅನುಭವಿಸಬೇಕಾಯಿತು.