Advertisement

ಮೋದಿ ಸರಕಾರದ ಕೆಟ್ಟ ನಿರ್ವಹಣೆಯೇ ಆರ್ಥಿಕ ಕುಸಿತಕ್ಕೆ ಕಾರಣ: ಮನಮೋಹನ್‌ ಸಿಂಗ್‌

09:36 AM Sep 02, 2019 | keerthan |

ಹೊಸದಿಲ್ಲಿ: ನರೇಂದ್ರ ಮೋದಿ ನೇತೃತ್ವದ ಸರಕಾರದ ಒಟ್ಟಾರೆ ಕೆಟ್ಟ ನಿರ್ವಹಣೆಯಿಂದ ದೇಶದಲ್ಲಿ ಆರ್ಥಿಕ ಕುಸಿತದ ಪರಿಸ್ಥಿತಿ ಉಂಟಾಗಿದೆ ಎಂದು ಮಾಜಿ ಪ್ರಧಾನ ಮಂತ್ರಿ, ಹಣಕಾಸು ತಜ್ಞ ಮನಮೋಹನ್‌ ಸಿಂಗ್‌ ಅಭಿಪ್ರಾಯ ಪಟ್ಟಿದ್ದಾರೆ.

Advertisement

ಕಳೆದ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆಯ ದರ ಶೇ 5ಕ್ಕೆ ಕುಸಿದಿರುವುದು ನಾವು ದೀರ್ಘಕಾಲದ  ನಿಧಾನಗತಿಯ  ಮಧ್ಯದಲ್ಲಿದ್ಧೇವೆಂದು ಸೂಚಿಸುತ್ತದೆ ಎಂದು ಮಾಜಿ ಪ್ರಧಾನಿ ಹೇಳಿದರು.

ಭಾರತದ ಉತ್ತಮ ವೇಗದಲ್ಲಿ ಬೆಳವಣಿಗೆ ಹೊಂದುವ ಕ್ಷಮತೆ ಹೊಂದಿದೆ. ಆದರೆ ಮೋದಿ ಸರಕಾರದ ಕೆಟ್ಟ ನಿರ್ವಹಣೆಯಿಂದ ಕುಸಿತಕ್ಕೆ ಕಾರಣವಾಗಿದೆ ಎಂದು ಮನಮೋಹನ್‌ ಸಿಂಗ್‌ ಹೇಳಿದರು.

ಸದ್ಯದ ಈ ಪರಿಸ್ಥಿತಿಗೆ ನೋಟು ಅಪನಗದೀಕರಣ ಮತ್ತು ಜಿಎಸ್‌ ಟಿಯೂ ಕಾರಣವಾಗಿದೆ ಎಂದ ಅವರು ಸರಕಾರ ಮಾಡಿಕೊಂಡ ಪ್ರಮಾದಗಳಾದ ನೋಟು ಅಪನಗದೀಕರಣ ಮತ್ತು ಜಿಎಸ್‌ ಟಿಯಿಂದ ಭಾರತದ ಆರ್ಥಿಕತೆ ಚೇತರಿಸಿಕೊಂಡಿಲ್ಲ ಎಂದು ಅಭಿಪ್ರಾಯ ಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next