Advertisement

ಆರ್ಥಿಕ ಬೆಳವಣಿಗೆ ನಿರೀಕ್ಷೆಗಿಂತ ಹೆಚ್ಚು ಕುಂಠಿತವಾಗಲಿದೆ : ಐಸಿಆರ್‌ಎ

09:36 AM Nov 22, 2019 | mahesh |

ಹೊಸದಿಲ್ಲಿ: ಭಾರತದ ಆರ್ಥಿಕ ಬೆಳವಣಿಗೆ ನಿರೀಕ್ಷೆಗಿಂತ ಹೆಚ್ಚು ಕುಂಠಿತವಾಗಲಿದೆ ಎಂದು ಅಂತಾರಾಷ್ಟ್ರೀಯ ರೇಟಿಂಗ್‌ ಏಜನ್ಸಿ ಐಸಿಆರ್‌ಎ ಅಭಿಪ್ರಾಯ ವ್ಯಕ್ತಪಡಿಸಿದೆ. ಕೈಗಾರಿಕಾ ವಲಯದ ಉತ್ಪಾದನೆ ಕುಸಿತ ಸೇರಿದಂತೆ ಆರ್ಥಿಕ ವ್ಯವಸ್ಥೆಯ ವಿವಿಧ ವಲಯಗಳಲ್ಲಿನ ಅನಿಶ್ಚಿತತೆಯಿಂದಾಗಿ ಭವಿಷ್ಯದ ಆರ್ಥಿಕ ಬೆಳವಣಿಗೆ ದರ ನಿರೀಕ್ಷೆಗಿಂತ ಕಡಿಮೆಯಾಗಲಿದೆ ಎಂದು ಐಸಿಆರ್‌ಎ ಸಂಸ್ಥೆ ಪ್ರಧಾನ ಅರ್ಥಶಾಸ್ತ್ರಜ್ಞ ಅದಿತಿ ನಾಯರ್‌ ಹೇಳಿದ್ದಾರೆ.

Advertisement

2020ರ ಹಣಕಾಸು ವರ್ಷದ ಎರಡನೇ ತ್ತೈಮಾಸಿಕದಲ್ಲಿ ಬೆಳವಣಿಗೆ ದರ ಶೇ.4.7ರಷ್ಟು ಇರಲಿದೆ ಎಂದು ಅಂದಾಜಿಸಿದ್ದು, ರೇಟಿಂಗ್ಸ್ ಏಜೆನ್ಸಿಯು ದೇಶದ ಜಿಡಿಪಿ ಬೆಳವಣಿಗೆಯ ದರ ಮತ್ತು ಒಟ್ಟಾರೆ ಮೌಲ್ಯ ಸೇರ್ಪಡೆ (ಜಿವಿಎ) ಮತ್ತಷ್ಟು ಕುಸಿತ ಕಾಣಲಿದೆ ಎಂದು ನಿರೀಕ್ಷಿಸಿದೆ.

2020ರ ವಿತ್ತೀಯ ವರ್ಷದ ಎರಡನೇ ತ್ತೈಮಾಸಿಕದಲ್ಲಿ ಮೂಲ ಬೆಲೆಗಳು ವರ್ಷದಿಂದ ವರ್ಷಕ್ಕೆ ಕ್ರಮವಾಗಿ ಶೇ.4.7ರಷ್ಟು ಮತ್ತು 4.5ರಷ್ಟು ಇರಲಿದ್ದು, ಮೊದಲ ತ್ತೈಮಾಸಿಕದಲ್ಲಿ ಶೇ.5 ಮತ್ತು ಶೇ.4.9ರಷ್ಟು ಇರಲಿದೆ. ಆದರೂ ಕೃಷಿ ಮತ್ತು ಸೇವೆಗಳಂತಹ ಕ್ಷೇತ್ರಗಳು 2020ರ ಎಫ್ವೈನ ಮೊದಲ ತ್ತೈಮಾಸಿಕದಲ್ಲಿ ಬೆಳವಣಿಗೆಯ ದರ ಕಾಯ್ದುಕೊಳ್ಳಲು ಸಾಧ್ಯವಾಗಲಿದೆ ಎಂದಿದೆ.

ದೇಶಿಯ ಆಂತರಿಕ ಬೇಡಿಕೆ, ಹೂಡಿಕೆ ಚಟುವಟಿಕೆ ಮತ್ತು ತೈಲೇತರ ಸರಕುಗಳ ರಫ್ತುಗಳ ಜತೆಗೆ ಉತ್ಪಾದನಾ ಬೆಳವಣಿಗೆಯು 2020ರ ಎಪ್‌ವೈನ ಮೊದಲ ತ್ತೈಮಾಸಿಕದಲ್ಲಿ ಕನಿಷ್ಠ ಶೇ.0.6ರಷ್ಟು ಕುಸಿಯುವ ಸಾಧ್ಯತೆ ಇದೆ ಎಂದು ಐಸಿಆರ್‌ಎನ ಪ್ರಧಾನ ಅರ್ಥಶಾಸ್ತ್ರಜ್ಞ ಅದಿತಿ ನಾಯರ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next