ಹೊಸದಿಲ್ಲಿ: 2023-24ನೇ ಸಾಲಿನ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರ ಶೇ.8.2ರಷ್ಟಾಗಿತ್ತು. ಇದು ಭಾರತ ಆರ್ಥಿಕತೆಯ ಸುಸ್ಥಿರ ಬೆಳವಣಿಗೆಯನ್ನು ತೋರಿಸು ತ್ತದೆ ಎಂದು ಸರಕಾರ ಬಿಡುಗಡೆ ಮಾಡಿರುವ ದತ್ತಾಂಶ ತಿಳಿಸಿದೆ.
ಇನ್ನು ಜನವರಿಯಿಂದ ಮಾರ್ಚ್ ವರೆಗಿನ ಅವಧಿಯಲ್ಲಿ ಶೇ.7.8ರಷ್ಟು ದರದಲ್ಲಿ ಜಿಡಿಪಿ ಪ್ರಗತಿ ಕಂಡಿದೆ. ಆದರೆ ಈ ಅವಧಿಯಲ್ಲಿ ಆರ್ಥಿಕತೆಯು ಶೇ.8.4ರ ದರದಲ್ಲಿ ಪ್ರಗತಿ ಕಾಣ ಲಿದೆ ಎಂದು ಈ ಮೊದಲು ಅಂದಾಜಿಸ ಲಾಗಿತ್ತು. ಕಳೆದ ವರ್ಷ ಪ್ರಗತಿ ಶೇ.7 ರಷ್ಟಿತ್ತು. ಆದರೆ ಈ ವರ್ಷ ಉತ್ತಮ ಬೆಳವಣಿಗೆ ಕಂಡಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಇಲಾಖೆ ಹೇಳಿದೆ.
ಈ ವರ್ಷ 6.8% ಜಿಡಿಪಿ ಪ್ರಗತಿ: ಮೂಡೀಸ್
ಈ ವರ್ಷ ಭಾರತದ ಜಿಡಿಪಿ ಪ್ರಗತಿ ದರ ಶೇ.6.8ರಷ್ಟಿರಲಿದೆ ಎಂದು ಮೂಡೀಸ್ ಸಂಸ್ಥೆ ಅಂದಾಜಿಸಿದೆ. ಅಲ್ಲದೇ 2025ರಲ್ಲಿ ಈ ದರ ಶೇ.6.5ರಷ್ಟು ಇರಲಿದೆ. 2023ರಲ್ಲಿ ಶೇ.7.7ರಷ್ಟು ದರದಲ್ಲಿ ಪ್ರಗತಿ ಸಾಧಿಸಿತ್ತು ಎಂದು ಮೂಡೀಸ್ ಸಂಸ್ಥೆ ಅಂದಾಜು ಮಾಡಿದೆ.
ಜಿಡಿಪಿ ಪ್ರಗತಿ ದರದ ದತ್ತಾಂಶವು ದೇಶದ ಆರ್ಥಿಕತೆ ಸದೃಢವಾಗಿರುವುದರ ಸಂಕೇತ. ನಾನು ಈಗಾ ಗಲೇ ಹೇಳಿರುವಂತೆ, ಮುಂದಿನ ದಿನಗಳಲ್ಲಾಗುವ ಅಭಿವೃದ್ಧಿಯ ಟ್ರೈಲರ್ ಇದು. ಶ್ರಮಜೀವಿಗಳಿಗೆ ಧನ್ಯವಾದ.
ಮೋದಿ, ಪ್ರಧಾನಿ