Advertisement

ಜಿಡಿಪಿ ಕುಸಿತ; ನಮ್ಮ ಬದುಕಿನ ಲಯ ತಪ್ಪುವುದೇ?

12:01 PM Sep 02, 2019 | Sriram |

ಮಣಿಪಾಲ: ಡಾಲರ್‌ ದರ ಏರುತ್ತಿದೆ, ಆರ್ಥಿಕತೆ, ಜಿಡಿಪಿ ಕುಸಿಯುತ್ತಿದೆ ಎಂಬ ಮಾತುಗಳು ಈಗ ಕೇಳಿಬರುತ್ತಿವೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ತೈಮಾಸಿಕದ ಜಿಡಿಪಿ ಶೇ. 5ರಷ್ಟು ದಾಖಲಾಗಿದೆ. ಈ ಕುಸಿತದಿಂದ ಜನಸಾಮಾನ್ಯರ ಮೇಲೆ ಪರಿಣಾಮವೇನು? ಎಂಬ ಪ್ರಶ್ನೆ ಇರಬಹುದು. ಹಾಗಿದ್ದರೆ ಅದರಿಂದಾಗುವ ಪರಿಣಾಮ ಏನು? ಜಿಡಿಪಿ ಇಳಿದರೆ ಏನಾಗುತ್ತದೆ? ಎಂಬುದರ ಕುರಿತ ಮಾಹಿತಿ ಇಲ್ಲಿದೆ.

Advertisement

ಜಿಡಿಪಿ ಎಂದರೇನು?
ಜಿಡಿಪಿ ಎಂದರೆ ದೇಶದ ಒಟ್ಟಾರೆ ಆಂತರಿಕ ಉತ್ಪನ್ನ ಮತ್ತು ಆರ್ಥಿಕ ಗಾತ್ರವನ್ನು ಅಂದಾಜಿಸುವ ಕ್ರಮವಾಗಿದೆ. ಒಂದು ನಿರ್ದಿಷ್ಟ ಸಮಯದ ಅವಧಿಯಲ್ಲಿ ಸಿದ್ಧಪಡಿಸಿದ ಸರಕುಗಳು ಮತ್ತು ಸೇವೆಗಳ ವಿತ್ತೀಯ ಮೌಲ್ಯವಾಗಿದೆ. ಅರ್ಥಾತ್‌ ಜಿಡಿಪಿಯು ರಾಷ್ಟ್ರದ ಒಟ್ಟಾರೆ ಆರ್ಥಿಕ ಚಟುವಟಿಕೆಗಳನ್ನು ಒಳಗೊಂಡಂತೆ ಲೆಕ್ಕ ಹಾಕುವ ಒಂದು ವಿಧಾನ.

ಲೆಕ್ಕ ಹಾಕುವುದು ಹೇಗೆ?
ಕೃಷಿ, ಅರಣ್ಯ, ಪಶುಸಂಗೋಪನೆ, ಮೀನುಗಾರಿಕೆ, ಗಣಿಗಾರಿಕೆ, ಉತ್ಪಾದನೆ, ಪೆಟ್ರೋಲಿಯಂ, ಮೂಲ ಸೌಕರ್ಯಗಳು, ಅಮದು, ರಫ್ತು ಸೇರಿದಂತೆ ವಾಣಿಜ್ಯ ಚಟುವಟಿಕೆಗಳು, ಸಾರಿಗೆ ಹಾಗೂ ರಕ್ಷಣಾ ವಲಯ, ಉತ್ಪಾದನಾ ಕ್ಷೇತ್ರ, ಸೇವಾ ವಲಯ (ಸರ್ವೀಸ್‌ ಸೆಕ್ಟರ್‌)ಗಳನ್ನು ಪರಿಗಣನೆಗೆ ತೆಗೆದುಕೊಂಡು ಲೆಕ್ಕಹಾಕಲಾಗುತ್ತದೆ.


ಜಿಡಿಪಿ ಕುಸಿತದ
ಲಕ್ಷಣಗಳೇನು?
ದೇಶದಲ್ಲಿ ಜನರ ಖರೀದಿ ಸಾಮರ್ಥ್ಯ ಕುಂಠಿತ ಗೊಂಡರೆ, ದೇಶೀಯ ಹೂಡಿಕೆ ಪ್ರಮಾಣ ಇಳಿಕೆ, ನಿರುದ್ಯೋಗ ಹೆಚ್ಚಳ, ಉತ್ಪಾದನ ವಲಯಗಳಾದ ಉದ್ಯಮ, ಕೈಗಾರಿಕೆ, ಸಾರಿಗೆ ಮೊದಲಾದ ಪ್ರಮುಖ ಕ್ಷೇತ್ರಗಳಲ್ಲಿ ಕುಸಿತಗೊಂಡರೆ, ಬ್ಯಾಂಕುಗಳಲ್ಲಿ ವಸೂಲಾ ಗದ ಸಾಲ ಪ್ರಮಾಣ ಹೆಚ್ಚಳ, ಜಾಗತಿಕ ಆರ್ಥಿಕ ಅಸಮ ತೋಲನಗಳೂ ಜಿಡಿಪಿ ಮೇಲೆ ಪರಿಣಾಮ ಬೀರುತ್ತದೆ ಮತ್ತು ಜಿಡಿಪಿ ದರ ಇಳಿಯಲು ಕಾರಣವಾಗುತ್ತದೆ.

ಯಾರು ಲೆಕ್ಕ ಹಾಕುತ್ತಾರೆ?
ಹಲವು ಮಾನದಂಡಗಳನ್ನು ಅನುಸರಿಸಿ ಜಿಡಿಪಿ ದರವನ್ನು ಅಂದಾಜಿಸಲಾಗುತ್ತದೆ. ನಮ್ಮ ದೇಶದಲ್ಲಿನ ಸಾಂಖೀÂಕ ಮತ್ತು ಅನುಷ್ಠಾನ ಸಚಿವಾಲಯ ಜಿಡಿಪಿಯ ಲೆಕ್ಕಾಚಾರ ಹಾಕುತ್ತದೆ. ಜಿಡಿಪಿ ದರದ ಚಿತ್ರಣ ಲಭಿಸಬೇಕಾದರೆ ಕನಿಷ್ಠ 3 ತಿಂಗಳುಗಳ ಅಂದಾಜು ಮಾಡಬೇಕಾಗುತ್ತದೆ. 3,6,9 ಮತ್ತು 12 ತಿಂಗಳಿಗೆ ಒಮ್ಮೆ ಅಳೆಯಲಾಗುತ್ತದೆ.


ಇಳಿದರೆ ಏನಾಗುತ್ತದೆ?
ಜಿಡಿಪಿ ಕಳಪೆಯಾದರೆ ದೇಶದ ಇಡೀ ಉತ್ಪಾದನ ಕ್ಷೇತ್ರಕ್ಕೆ ಹಿನ್ನಡೆಯಾಗುತ್ತಿದೆ ಎಂದರ್ಥ. ಇದರ ಪರಿಣಾಮ ಉದ್ಯಮಗಳು ನಷ್ಟ ಹೊಂದಿ ಮುಚ್ಚಲ್ಪಡುತ್ತವೆ. ಇದು ಪರೋಕ್ಷವಾಗಿ ಸಂಸ್ಥೆಯಲ್ಲಿ-ಕೈಗಾರಿಕೆಯಲ್ಲಿ ಕೆಲಸ ಮಾಡುವ ಜನರತ್ತ ಪರಿಣಾಮ ಬೀರುತ್ತದೆ. ಅವರು ಉದ್ಯೋಗ ಕಳೆದುಕೊಳ್ಳುತ್ತಾರೆ. ಜನರ ಮಾಸಿಕ ತಲಾದಾಯ ಕಡಿಮೆಯಾಗಿ ಆರ್ಥಿಕ ಸಂಕಷ್ಟ ಕಾಡುತ್ತದೆ. ಇದು ಜಿಡಿಪಿಯ ಶ್ರೇಯಾಂಕ ಮತ್ತಷ್ಟು ಕುಸಿಯುವಂತೆ ಮಾಡುತ್ತದೆ.

ಜಿಡಿಪಿ ಯಾಕೆ ಮುಖ್ಯ?
ಜಿಡಿಪಿ ದೇಶದ ಆರ್ಥಿಕ ಆರೋಗ್ಯದ ಪ್ರತಿಬಿಂಬ. ಒಂದು ದೇಶದ ಜಿಡಿಪಿಯನ್ನು ನೋಡಿಕೊಂಡು ಆ ದೇಶದತ್ತ ವಿದೇಶಿ ಹೂಡಿಕೆಗಳು ಹರಿದು ಬರುತ್ತವೆ. ಹೂಡಿಕೆ ಹೆಚ್ಚಾದ ಪರಿಣಾಮ ಇಲ್ಲಿನ ಜನರ ಕೈಗೆ ಉದ್ಯೋಗ ದೊರಕುತ್ತದೆ. ಇದರಿಂದ ತಲಾ ಆದಾಯದಲ್ಲಿ ಹೆಚ್ಚಳ ಕಂಡು ಬಂದು ಜನರ ಜೀವನ ಮಟ್ಟ, ದೇಶದ ಪರಿಸ್ಥಿತಿ ಸುಧಾರಣೆಯೊಂದಿಗೆ ಉತ್ಪಾದನ ಕ್ಷೇತ್ರದಲ್ಲೂ ಬೆಳವಣಿಗೆಗೆ ಕಾರಣವಾಗುತ್ತದೆ.


6 ವರ್ಷಗಳ ಕಳಪೆ
ಎಪ್ರಿಲ್‌-ಜೂನ್‌ ವರೆಗಿನ ಒಟ್ಟು ಉತ್ಪಾದನ ವಲಯದಲ್ಲಿ ಕುಸಿತವಾದ ಪರಿಣಾಮ 6 ವರ್ಷಗಳ ಬಳಿಕ ಈ ಮಟ್ಟಕ್ಕೆ ದಾಖಲಾಗಿದೆ.

Advertisement

ಶೇ. 4.3
2012-13ನೇ ಸಾಲಿನ ಜನವರಿ- ಮಾರ್ಚ್‌ ಅವಧಿಯಲ್ಲಿ ಒಮ್ಮೆ ಶೇ 4.3ರಷ್ಟು ಜಿಡಿಪಿ ದಾಖಲಾಗಿತ್ತು.

ಶೇ. 8
2018-19ನೇ ಸಾಲಿನಲ್ಲಿ ಅಂದರೆ ಕಳೆದ ವರ್ಷ ಶೇ 8ರಚುr ಜಿಡಿಪಿ ಬೆಳವಣಿಗೆ ದಾಖಲಾಗಿತ್ತು. ಬಳಿಕ ಕಳೆದ ಹಣಕಾಸು ವರ್ಷದ ಅಂತ್ಯಕ್ಕೆ ಶೇ. 5.8ರಷ್ಟು ದಾಖಲಾಗಿತ್ತು.

ಕೃಷಿ
ದೇಶದ ಬೆನ್ನೆಲುಬು ಎಂದು ಕರೆಯಲಾಗುವ ಕೃಷಿ ವಲಯ ಶೇ. 5.3ಕ್ಕೆ ಏರಿದೆ. ಕಳೆದ ವರ್ಷ ಇದು 5.1ರಷ್ಟಿತ್ತು.

ಗಣಿ ವಲಯ
ಗಣಿಗಾರಿಕೆಯಲ್ಲಿ ಮಾತ್ರ ಶೇ 2.7ರಷ್ಟು ಬೆಳವಣಿಗೆ ದಾಖಲಾಗಿದೆ. ಅಭಿವೃದ್ಧಿ ದರ ಕಳೆದ ವರ್ಷದ ಶೇ 9.6ರಷ್ಟು ಇದ್ದರೆ ಈ ವರ್ಷ ಶೇ. 5.7ಕ್ಕೆ ಇಳಿದಿದೆ.

ಸೇವಾ ವಲಯ: ಹೆಚ್ಚಳ
ಸೇವಾ ವಲಯಗಳಾದ ವ್ಯಾಪಾರ, ಹೋಟೆಲ್‌ ಮತ್ತು ದೂರಸಂಪರ್ಕ ವಲಯಗಳಲ್ಲಿ ಈ ತ್ತೈಮಾಸಿಕದಲ್ಲಿ ಶೇ 7.1ರಷ್ಟು ಏರಿಕೆಯಾಗಿದೆ.

ವಿವಿಧ ವಲಯಗಳ ಜಿಡಿಪಿ ಪ್ರಮಾಣ
ತಯಾರಿಕಾ ವಲಯ
ಈ ಅವಧಿಯಲ್ಲಿ ದೇಶ ಕೈಗಾರಿಕೆಗಳ ಬೆಳವಣಿಗೆ ಶೇ 11.5ಕ್ಕೆ ತೃಪ್ತಿ ಪಟ್ಟುಕೊಂಡಿದೆ. ಕಳೆದ ಅವಧಿಯಲ್ಲಿ ಶೇ. 12.1ರಷ್ಟಿತ್ತು. ಈಗ ಶೇ. 0.6ರಷ್ಟಕ್ಕೆ ಕುಸಿತ ಕಂಡಿದೆ. ಕೈಗಾರಿಕಾ ವಲಯ ಅಪಾಯದಲ್ಲಿರುವುದು ಇತ್ತೀಚಿನ ಹಲವು ಬೆಳವಣಿಗೆಗಳಲ್ಲಿ ಗಮನ ಸೆಳೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next