Advertisement

ಗಜಲ್‌ ಹುಟ್ಟಿದ್ದು, ನಿಮ್ಮ ಕಾಲ್ಗೆಜ್ಜೆಯಲ್ಲಾ?

10:52 AM Jun 13, 2017 | Harsha Rao |

ಸರಿಹೊತ್ತಿನಲ್ಲೂ ನಿಮ್ಮದೇ ಧ್ಯಾನ, ಚಡಪಡಿಕೆ. ನೀವಿಲ್ಲದ ಆ ರಾತ್ರಿ ಬೆಳದಿಂಗಳೂ ರವರವನೆ ಚುರುಗುಟ್ಟೋ ಹಂಗೆ ಭಾಸವಾಗುತ್ತದೆ. ನೀವು ಎದುರಿ¨ªಾಗ ಆ ರಣಬಿಸಿಲೂ ತಂಪನ್ನಿಸುತ್ತದೆ…

Advertisement

ನನ್ನೆದೆಯೊಳಗೆ ಬಚ್ಚಿಟ್ಟುಕೊಂಡಿದ್ದ ಒಲುಮೆಯ ಥರಾವರಿ ಗುಟ್ಟುಗಳನ್ನು ಬಿಚ್ಚಿಡೋ ಮನಸಾಗ್ತಿದೆ ರೀ. ಹೇಗೆ ಹೇಳ್ಬೇಕಂತ ತಿಳೀತಿಲ್ಲ. ಎದೆ ಢವ ಢವ ಅಂತ ಬಡ್ಕೊàತಿದೆ. ಕಿಂಚಿತ್ತು ಸುಳಿವನ್ನೂ ಕೊಡದೆ ಕಣ್ಣು ಮಿಟುಕಿಸುವುದರೊಳಗಾಗಿ ಛಂಗನೆ ನನ್ನ ಹೃದಯ ಅಪಹರಿಸಿದ ನಿಮ್ಮ ಮೇಲೊಂದು ಕೇಸು ಹಾಕೆºàಕನ್ನಿಸ್ತಿದೆ.

ಅಂದಹಾಗೆ, ನಿಮ್ಮನ್ನು ಕಾಲೇಜಿನ ಕಾರಿಡಾರಿನಲ್ಲಿ ಕಂಡ ಘಳಿಗೆಯಲ್ಲೇ ನನ್ನ ಹೃದಯದೊಳಗೊಂದು ಮರಿಚಿಟ್ಟೆ ಪಟಪಟನೆ ರೆಕ್ಕೆ ಬಡಿಯುತ್ತಾ ಸದ್ದು ಮಾಡಲಾರಂಭಿಸಿತ್ತು. ದೇವಕನ್ಯೆಯರ ಲೋಕದಿಂದ “ನೀಲಿ’ ಸೀರೆಯುಟ್ಟ ಮುದ್ದು ಬೊಂಬೆಯೊಂದು, ತಪ್ಪಿಸಿಕೊಂಡು ಈ ಗ್ರಹಕ್ಕೆ ಬಂದಿºಟ್ಟಿದ್ಯಾ ಅಂತ ಗುಮಾನಿ ಶುರುವಾಗಿತ್ತು. ನಿಮ್ಮ ಝಲ… ಝಲ… ಕಾಲ್ಗೆಜ್ಜೆ ನಾದ ಕೇಳಿದ್ಮೇಲೆ ಗೊತ್ತಾಗ್ತಿದೆ ಪ್ರೇಮದ ಗಜಲುಗಳ ಮೂಲ ಯಾವುದಂತ!?

ನೀವು ಹತ್ತಿರವಿ¨ªಾಗಲಂತೂ ಮುಗಿದೇಹೋಯ್ತು! ನನ್ನ ಹೃದಯ ಗೆಜ್ಜೆಕಟ್ಟಿದಂತೆ, “ತಕಥೈ ತಕಥೈ’ ಅಂತ ಕುಣಿದಾಡುತ್ತದೆ. ನಿಮ್ಮ ರೂಪ, ಹಾವ, ಭಾವ ನನ್ನ ಕಣ್ಣೊಳಗೆ ಲಗ್ಗೆಯಿಟ್ಟು ಇಡೀ ಲೋಕವೇ ಮಬ್ಬುಮಬ್ಟಾಗಿ ಕಾಣುತ್ತಿದೆ. ನಾನು ಕಣ್‌ಬಿಟ್ಟ ಕಡೆಯಲ್ಲೆಲ್ಲಾ ನಿಮೆªà ಐಸಿರಿ.

ನಿಮ್ಗೆ ನೆನಪಿದ್ಯಾ? ಪಿಳಿಪಿಳಿ ಕಣ್ಣುಗಳಲ್ಲೇ ಪಿಸುಗುಟ್ಟಿ ಮೌನ ಭಾಷೆಯಲ್ಲೇ ಅನಂತ ಭಾವನೆಗಳನ್ನು ವಿನಿಮಯ ಮಾಡಿಕೊಳ್ಳೋ ಕಲೆ ಕಲಿಸಿದವರೇ ನೀವು. ಬೆಂಗಾಡಾಗಿದ್ದ ನನ್ನ ಬದುಕು ನಿಮ್ಮ ಒಡನಾಟದ ತರುವಾಯ ನಿತ್ಯಹರಿದ್ವರ್ಣ ಕಾನನದಂತೆ ಕಂಗೊಳಿಸುತ್ತಿದೆ. ಇದ್ದಬದ್ದ ರಗಳೆಗಳೆಲ್ಲ ಪೇರಿ ಕಿತ್ತು ರಂಗುರಂಗಾದ ಜಿಂದಗೀ ಶುರುವಾಗಿದೆ. ನನ್ನೆದೆ ಅಂತರಂಗದ ಅಂತರಿಕ್ಷದಲ್ಲಿ ಹಿತವಾಗಿ ತೇಲಾಡುವ ಬೆಳ್ಳಿ ಮೀನಿನಂಥವರು ನೀವು!
ಅವತ್ತು ನೀವು ಪುಟಾಣಿ ಮಕ್ಕಳೊಟ್ಟಿಗೆ ಹೋಳಿ ಹಬ್ಬ ಮಾಡ್ಬೇಕಾದ್ರೆ ಬಣ್ಣಬಣ್ಣವಾಗಿ ಮಿರಮಿರ ಮಿಂಚಿ¤ದ್ರಿ.

Advertisement

ಬೇಕಂತಲೇ ಪುಟಾಣಿ ಮಕ್ಕಳಿಗೆ ಹೇಳಿ ನಂಗೂ ಬಣ್ಣ ಹಾಕ್ಸಿದ್ರಿ. ಅದೇ ರೀತಿ ನನ್‌ ಬಾಳಲ್ಲೂ ಬಣ್ಣ ತುಂಬಿ ಕಾಮನಬಿÇÉಾಗ್ತಿàರಾ? ನಿಮ್ಮ ಸ್ವಪ್ನದಲ್ಲೂ ಕಣ್ಣೀರು ಇಣುಕದಂತೆ ಕಾವಲಿರ್ತೀನಿ. ನಿಮ್ಮೆಲ್ಲ ಕನಸುಗಳನ್ನು ನನ್ನೆದುರು ತಂದು ಸುರೀರಿ. ಅಚ್ಚುಕಟ್ಟಾಗಿ ಛಕಛಕ ಅಂತ ಪೂರೈಸ್ತೀನಿ. ಅಳತೆಗೆ ಸಿಗದಷ್ಟು ಒಲವನ್ನು ನಿಮಗಾಗಿಯೇ ಅವುಸಿಟ್ಟುಕೊಂಡಿದೀನಿ. ನಿಮ್ಮ ಚಾಕರಿಗಾಗಿಯೇ ಭಗವಂತ ನನ್ನ ಸೃಷ್ಟಿಸಿರೋ ಸತ್ಯ ನಿಮ್ಗೆ ಗೊತ್ತಿದೆ ತಾನೇ?
ಈಚೀಚೆಗೆ ಯಾಕೋ ಗೊತ್ತಿಲ್ಲ, ಸಂಜೆ ಅಚಾನಕ್ಕಾಗಿ ಸುರಿವ ಸೋನೆಮಳೆಗೆ ನೀವು ವಿಪರೀತ ನೆನಪಾಗ್ತಿàರ.

ಅಪರಾತ್ರಿಯಾದ್ರೂ ನಿದ್ರೆ ಬರೋಲ್ಲ. ಸರಿಹೊತ್ತಿನಲ್ಲೂ ನಿಮ್ಮದೇ ಧ್ಯಾನ, ಚಡಪಡಿಕೆ. ನೀವಿಲ್ಲದ ಆ ರಾತ್ರಿ ಬೆಳದಿಂಗಳೂ ರವರವನೆ ಚುರುಗುಟ್ಟೋ ಹಂಗೆ ಭಾಸವಾಗುತ್ತದೆ. ನೀವು ಎದುರಿ¨ªಾಗ ಆ ರಣಬಿಸಿಲೂ ತಂಪನ್ನಿಸುತ್ತದೆ. ಕೇಳಿ… ನನ್ನೊಳಗೆ ಈ ಜಗತ್ತಿನ ಭೂಪಟ ಕಲ್ಪಿಸಿಕೊಳ್ಳುವಾಗಲೆಲ್ಲ, ನಿಮ… ಚಿತ್ರನೇ ಕಣ್ಮುಂದೆ ಬರುತ್ತೆ! ಈ ಪರಿ ಹೃದಯ ಏರುಪೇರಾಗಿದೆ.

ನಿಜ ಹೇಳ್ಬೇಕಂದ್ರೆ, ನಿಮ್ಮನ್ನ ನಾನು ಬರೀ ಪ್ರೀತಿಸ್ತಿಲ್ಲ, ಆರಾಧಿಸ್ತಿದೀನಿ. ನಕಾರ ಹೇಳದೆ, ನನ್ನ ಒಪ್ಕೊಳಿÅà ಪ್ಲೀಸ್‌… ದಮ್ಮಯ್ಯ ಅಂತೀನಿ…
ನಿಮ್ಮ ಹೂ ಮನಸ್ಸಿನ ಅಂಕಿತಕ್ಕೆ ಕಾಯುತ್ತಿರ್ತೀನಿ, ಹೂ ಅನ್ರೀ…

ಇತಿ ನಿಮ್ಮ ಹೈದ
– ಹೃದಯರವಿ

Advertisement

Udayavani is now on Telegram. Click here to join our channel and stay updated with the latest news.

Next