ಜೆರುಸಲೇಂ: ಕಳೆದ ಆರು ದಿನಗಳಿಂದ ಸತತವಾಗಿ ಇಸ್ರೇಲ್ ನಮ್ಮ ಮೇಲೆ ನಡೆಸುತ್ತಿರುವ ವೈಮಾನಿಕವಾಗಲಿ ಅಥವಾ ಭೂ ದಾಳಿಯ ಬಗ್ಗೆ ನಮಗೆ ಯಾವುದೇ ಭಯವಿಲ್ಲ ಎಂದು ಪ್ಯಾಲೆಸ್ತೇನಿಯನ್ ಭಯೋತ್ಪಾದಕ ಸಂಘಟನೆ ಹಮಾಸ್ ಗುರುವಾರ (ಅಕ್ಟೋಬರ್ ೧೨) ಘೋಷಿಸಿದೆ.
ಇದನ್ನೂ ಓದಿ:Mahisha Vs Chalo: ಶನಿವಾರ ಮುಂಜಾನೆಯವರೆಗೆ ಬೆಟ್ಟ ಸೇರಿ ಮೈಸೂರಿನಲ್ಲಿ ನಿಷೇಧಾಜ್ಞೆ ಜಾರಿ
“ನಾವು ತುಂಬಾ ಸಾಮರ್ಥ್ಯ ಹೊಂದಿರುವ ವ್ಯಕ್ತಿಗಳಾಗಿದ್ದೇವೆ. ಆ ನಿಟ್ಟಿನಲ್ಲಿ ಯುದ್ಧವನ್ನು ಮುಂದುವರಿಸುತ್ತೇವೆ. ನಮ್ಮ ಬಳಿಯೂ ಹೋರಾಟಗಾರರು ಮತ್ತು ಬೆಂಬಲಿಗರಿದ್ದಾರೆ ಎಂದು ಹಮಾಸ್ ಪೊಲಿಟಿಕಲ್ ಬ್ಯುರೋ ಸದಸ್ಯ ಘಾಜಿ ಹಮಾದ್ ತಿಳಿಸಿರುವುದಾಗಿ ವರದಿಯಾಗಿದೆ.
ಜೋರ್ಡಾನ್, ಲೆಬನಾನ್ ಸೇರಿದಂತೆ ಸುತ್ತಮುತ್ತಲಿನ ದೇಶದ ಪ್ರತಿಯೊಬ್ಬರು ನಮ್ಮ ಜೊತೆ ಕೈಜೋಡಿಸಲು ಬಯಸಿದ್ದು, ಹೋರಾಡಲು ಸಿದ್ಧರಾಗಿದ್ದಾರೆ. ಹಾಗಾಗಿ ಗಾಜಾಪಟ್ಟಿಯನ್ನು ವಶಕ್ಕೆ ತೆಗೆದುಕೊಳ್ಳುವುದು ಸುಲಭದ ಹಾದಿಯಲ್ಲ ಎಂದು ಹಮಾದ್ ಎಚ್ಚರಿಸಿರುವುದಾಗಿ ವರದಿ ವಿವರಿಸಿದೆ.
ನಾವು ಇಸ್ರೇಲ್ ಚಿತ್ರಣವನ್ನೇ ಬದಲಿಸಲು 1,200 ಬಂಡುಕೋರರನ್ನು ರವಾನಿಸಿದ್ದೇವೆ. ಅವರ ಭದ್ರತೆ, ಗುಪ್ತಚರ ಇಲಾಖೆ ಹಾಗೂ ಸೂಪರ್ ಪವರ್ ಅಸ್ತಿತ್ವವನ್ನೇ ಬುಡಮೇಲು ಮಾಡಲಿದ್ದೇವೆ ಎಂದು ಹಮಾದ್ ಸವಾಲು ಹಾಕಿರುವುದಾಗಿ ವರದಿ ತಿಳಿಸಿದೆ.