ಸಂಸದ ದಿ| ಜಿ. ಮಲ್ಲಿಕಾರ್ಜುನಪ್ಪ ಅವರ ಸೊಸೆ ಹಾಗೂ ಹಾಲಿ ಸಂಸದ ಜಿ.ಎಂ. ಸಿದ್ದೇಶ್ವರ ಅವರ ಪತ್ನಿ. ಗಾಯತ್ರಿ ಅವರ ತವರೂರು ಶಿವಮೊಗ್ಗ. ಇದುವರೆಗೆ
ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಇವರು ಇದೇ ಮೊದಲ ಬಾರಿ ರಾಜಕೀಯ ಕ್ಷೇತ್ರ ಪ್ರವೇಶಿಸಿದ್ದಾರೆ. 69 ವರ್ಷ ವಯೋಮಾನದ ಗಾಯಿತ್ರಿ ಲೋಕ ಸಮರದ ಆಖಾಡಕ್ಕಿಳಿದಿದ್ದು, “ಉದಯವಾಣಿ’ಜತೆ ಮಾತನಾಡಿದ್ದಾರೆ.
Advertisement
– ಚುನಾವಣಾ ಪ್ರಚಾರ ಹೇಗಿದೆ?ಪ್ರಚಾರ ತುಂಬಾ ಚೆನ್ನಾಗಿ ನಡೆದಿದ್ದು ಎಲ್ಲ ಕಡೆಯಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಕ್ಷೇತ್ರ ವ್ಯಾಪ್ತಿಯ ಎಲ್ಲ ವಿಧಾನಸಭೆ ಕ್ಷೇತ್ರಗಳ ಗ್ರಾಮಗಳಿಗೆ
ಭೇಟಿ ನೀಡಿ ಪ್ರಚಾರ ಮಾಡುತ್ತಿದ್ದೇವೆ. ನನಗೆ ಚುನಾವಣೆ, ಪ್ರಚಾರ ಹೊಸದಲ್ಲ 28 ವರ್ಷಗಳಿಂದ ಹತ್ತಿರದಿಂದ ನೋಡುತ್ತ, ಪಕ್ಷದ ಕೆಲಸ ಮಾಡಿಕೊಂಡು
ಬಂದಿದ್ದೇನೆ. ಜನರ ಸ್ಪಂದನೆ ಗೆಲ್ಲುವ ವಿಶ್ವಾಸ ಮೂಡಿದೆ.
ಗೆಲ್ಲಲು ತಂತ್ರಗಾರಿಕೆ ಏನಿಲ್ಲ. ದೇಶದ ಭದ್ರತೆ, ರಕ್ಷಣೆ ದೃಷ್ಟಿಯಿಂದ ಮೋದಿಯವರು ಇನ್ನೊಮ್ಮೆ ಪ್ರಧಾನಿಯಾಗಬೇಕೆಂದು ಜನ ತೀರ್ಮಾನಿಸಿ ಬೆಂಬಲಿಸುತ್ತಿದ್ದಾರೆ. ಇನ್ನು ಕೇಂದ್ರ ಸರ್ಕಾರದ ಹತ್ತು ಹಲವು ಜನಪರ ಯೋಜನೆಗಳ ಜತೆ ಮಾವ ದಿ|ಜಿ. ಮಲ್ಲಿಕಾರ್ಜುನಪ್ಪ ಹಾಗೂ ಪತಿ ಸಂಸದ ಜಿ.ಎಂ.
ಸಿದ್ದೇಶ್ವರ ಅವರು ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕೆಲಸ, ಜನಸೇವೆ ಮತದಾರರ ಮನದಲ್ಲಿದೆ. – ಪ್ರಚಾರದ ವೇಳೆ ಎದುರಿಸಿದ ಸವಾಲುಗಳೇನು?
ಪ್ರಚಾರದ ವೇಳೆ ಜನರು ಮಹಿಳೆಯರಿಗೆ ಹಾಗೂ ವಿದ್ಯಾವಂತ ನಿರುದ್ಯೋಗಿಗಳಿಗೆ ಸ್ವಂತ ಉದ್ಯೋಗಕ್ಕಾಗಿ ಸಣ್ಣ ಕೈಗಾರಿಕೆಗಳ ಕ್ಲಸ್ಟರ್ ಅನುಷ್ಠಾನ, ಅಂತರ್ಜಲ ವೃದ್ಧಿಗಾಗಿ ಯೋಜನೆಗಳು ಆಗಬೇಕು ಎಂಬ ಬೇಡಿಕೆಗಳನ್ನು ಇಟ್ಟಿದ್ದಾರೆ. ಅವುಗಳನ್ನು ಆದ್ಯತೆ ಮೇರೆಗೆ ಈಡೇರಿಸಲು ಕ್ರಮ ವಹಿಸಲಾಗುವುದು. ಸಂಸದರು ಪ್ರತಿಯೊಂದು ಹಳ್ಳಿಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದರಿಂದ ಗಂಭೀರ ಸವಾಲು ಎದುರಾಗಿಲ್ಲ.
Related Articles
ದಾವಣಗೆರೆ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ಧಿ ಮಾಡುವ ಕನಸಿದೆ. ಗೆದ್ದ ಮೇಲೆ ಖಂಡಿತಾ ಮಹಿಳೆಯರ ಸಬಲೀಕರಣಕ್ಕಾಗಿ ವಿಶೇಷ
ಯೋಜನೆಗಳನ್ನು ಕ್ಷೇತ್ರಕ್ಕೆ ತರಬೇಕೆನ್ನುವ ತುಡಿತ ನನ್ನಲ್ಲಿದೆ. ಕೃಷಿಕರ, ನಿರುದ್ಯೋಗ ಸಮಸ್ಯೆ ಪರಿಹಾರಕ್ಕೆ ಮೊದಲ ಆದ್ಯತೆ ನೀಡುತ್ತೇನೆ.
Advertisement
– ಕ್ಷೇತ್ರದಲ್ಲಿ ನೀವು ಗುರುತಿಸಿದ ಐದು ಪ್ರಥಮ ಆದ್ಯತೆಯ ಕೆಲಸಗಳೇನು?ದಾವಣಗೆರೆಯಲ್ಲಿ ವಿಮಾನ ನಿಲ್ದಾಣ ನಿರ್ಮಿಸಬೇಕು. ಈಗಾಗಲೇ ಇರುವ ಸಾಫ್ಟವೇರ್ ಟೆಕ್ನಾಲಜಿ ಪಾರ್ಕ್‌ನ್ನು ವಿಸ್ತರಿಸಬೇಕು. ಇಂಡಸ್ಟ್ರಿಯಲ್ ಕಾರಿಡಾರ್ ನಿರ್ಮಿಸಬೇಕು. ಮಹಿಳೆಯರಿಗೆ, ವಿದ್ಯಾವಂತ ನಿರುದ್ಯೋಗಿಗಳಿಗೆ ಸ್ವಂತ ಉದ್ಯೋಗಕ್ಕಾಗಿ ಸಣ್ಣ ಕೈಗಾರಿಕೆಗಳ ಕ್ಲಸ್ಟರ್ ಅನುಷ್ಠಾನಗೊಳಿಸಬೇಕು.
ಅಂತರ್ಜಲ ವೃದ್ಧಿಗೆ ಜಲ ಮರುಪೂರಣದಂಥ ಯೋಜನೆಗಳಿಗೆ ಒತ್ತು ನೀಡಬೇಕು. – ಮೋದಿ ಅಲೆ ಅಥವಾ ಬೇರೆ ಯಾವ ಅಂಶಗಳು ನಿಮ್ಮ ಗೆಲುವಿಗೆ ಸಹಕಾರಿಯಾಗಲಿವೆ?
ಇಡೀ ಜಗತ್ತು ಇಂದು ಮೋದಿಜಿಯವರನ್ನು ಕೊಂಡಾಡುತ್ತಿದೆ. ಅವರು ಭಾರತದ ಆರ್ಥಿಕತೆಯನ್ನು ವಿಶ್ವದಲ್ಲಿ 5ನೇ ಸ್ಥಾನಕ್ಕೆ ತಂದು ನಿಲ್ಲಿಸಿದ್ದಾರೆ. ಕಳೆದ 28 ವರ್ಷಗಳಲ್ಲಿ ನಮ್ಮ ಕುಟುಂಬ ಇಡೀ ಲೋಕಸಭೆ ಕ್ಷೇತ್ರದ ಜನರೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದೆ. ನನ್ನ ಪತಿ ಜಿ.ಎಂ. ಸಿದ್ದೇಶ್ವರ ಕಳೆದ 20 ವರ್ಷಗಳಲ್ಲಿ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಿದ್ದಾರೆ. ಸಿದ್ದೇಶ್ವರ ಕ್ಷೇತ್ರದ 1260ಹಳ್ಳಿಗಳಿಗೆ ಕನಿಷ್ಠ ಐದಾರು ಬಾರಿ ಭೇಟಿ ನೀಡಿದ್ದಾರೆ. ಪ್ರತಿ ಹಳ್ಳಿಗಳಲ್ಲಿ 20-25 ಕಾರ್ಯಕರ್ತರನ್ನು ಹೆಸರಿಸಿ ಮಾತನಾಡುವಷ್ಟು ಕ್ಷೇತ್ರದಲ್ಲಿ ಬೇರು ಬಿಟ್ಟಿದ್ದಾರೆ. ಪ್ರತಿಯೊಂದು ಹಳ್ಳಿಗಳಿಗೆ ಒಂದಿಲ್ಲೊಂದು ಕಾಮಗಾರಿಗೆ ಅನುದಾನ ನೀಡಿ ಅಭಿವೃದ್ಧಿ ಮಾಡಿ, ನಿರಂತರ ಸಂಪರ್ಕದಲ್ಲಿದ್ದಾರೆ. ಇವೆಲ್ಲವೂ ಗೆಲುವಿಗೆ ಸಹಕಾರಿಯಾಗಲಿವೆ. – ಜನ ನಿಮ್ಮನ್ನು ಏಕೆ ಬೆಂಬಲಿಸಬೇಕು?
ನಮ್ಮ ಕುಟುಂಬ ಕ್ಷೇತ್ರದ ಜನರೊಂದಿಗೆ ಹೊಂದಿರುವ ನಿರಂತರ ಸಂಪರ್ಕ, ಕಳೆದ 28 ವರ್ಷಗಳಲ್ಲಿ ಜನರಿಗೆ ನಾವು ಸ್ಪಂಧಿಸಿರುವ ರೀತಿ, ಕೇಂದ್ರದಲ್ಲಿ ಕಳೆದ 10 ವರ್ಷಗಳಲ್ಲಿ ಮೋದಿಜಿಯವರ ಯೋಜನೆಯಿಂದ ದೇಶದಲ್ಲಿ ಆಗಿರುವ ಸುಧಾರಣೆ ಜನರ ಮುಂದಿದೆ. ಇದಲ್ಲದೇ ನನ್ನ ಪತಿ, ಸಂಸದ ಜಿ.ಎಂ. ಸಿದ್ದೇಶ್ವರ ಅವರು ಅನೇಕ ಯೋಜನೆಗಳ ಮೂಲಕ ಕ್ಷೇತ್ರದ ಅಭಿವೃದ್ಧಿ ಚಿತ್ರಣವನ್ನೇ ಬದಲಿಸಿರುವುದು ಜನರ ಕಣ್ಮುಂದಿದೆ. ಈ ಎಲ್ಲ ಕಾರಣಗಳಿಂದ ಜನತೆ ಖಂಡಿತಾ ನನಗೆ ಬೆಂಬಲಿಸುತ್ತಾರೆ. – ನಿಮ್ಮ ಎದುರಾಳಿ ಯಾರು, ಅವರ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಚುನಾವಣೆ ಎಂದು ಬಂದಾಗ ಎದುರಾಳಿ ಕಾಂಗ್ರೆಸ್ ಪಕ್ಷ. ಕಾಂಗ್ರೆಸ್ ಅಭ್ಯರ್ಥಿ ಅವರ ಪಕ್ಷದ ಯೋಜನೆ, ಅವರ ಸೇವೆಗಳನ್ನು ಮತದಾರರ ಮುಂದೆ
ಪ್ರಸ್ತಾಪಿಸುತ್ತಿದ್ದಾರೆ. ನಾವು ನಮ್ಮ ಪಕ್ಷದ ಪ್ರಣಾಳಿಕೆ, ಯೋಜನೆಗಳ ಬಗ್ಗೆ ಹೇಳುತ್ತಿದ್ದೇವೆ. ಆದರೆ ಒಂದೇ ಕುಟುಂಬದಲ್ಲಿ ಮೂವರಿಗೆ ಅಧಿಕಾರ
ಕೇಂದ್ರೀಕರಣವಾಗುವುದನ್ನು ಮತದಾರರು ಒಪ್ಪುತ್ತಿಲ್ಲ.