Advertisement

ಐಸಿಸಿ ಕೂಟಗಳಿಂದ ಪಾಕಿಸ್ಥಾನವನ್ನು ದೂರವಿಡಲು ಗಂಭೀರ್‌ ಆಗ್ರಹ

01:15 AM Mar 19, 2019 | |

ಹೊಸದಿಲ್ಲಿ: ಪುಲ್ವಾಮಾ ದಾಳಿ ಮೂಲಕ ಉಗ್ರರಿಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ಥಾನ ವಿರುದ್ಧದ ವಿಶ್ವಕಪ್‌ ಪಂದ್ಯವನ್ನು ಭಾರತೀಯರು ಬಹಿಷ್ಕರಿಸಬೇಕು ಎನ್ನುವ ಒತ್ತಾಯ ಕೇಳಿ ಬರುತ್ತಿದೆ. ಈ ಸಾಲಿನಲ್ಲಿ ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್‌ ಕೂಡ ಸೇರಿಕೊಂಡಿದ್ದಾರೆ. ಆದರೆ ಅವರು ಇನ್ನೂ ಒಂದು ಹೆಜ್ಜೆ ಮುಂದಿದ್ದಾರೆ.

Advertisement

“ಮುಂದಿನ ವಿಶ್ವಕಪ್‌ ಪಂದ್ಯದಲ್ಲಿ ಪಾಕ್‌ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದರ ಜತೆಗೆ ಐಸಿಸಿ ಆಯೋಜಿಸುವ ಎಲ್ಲ ಕ್ರಿಕೆಟ್‌ ಕೂಟಗಳಿಂದಲೂ ಪಾಕಿಸ್ಥಾವನ್ನು ದೂರವಿಡಬೇಕು. ಮುಂದಿನ ಏಶ್ಯ ಕಪ್‌ ಕೂಟದಲ್ಲೂ ಪಾಕ್‌ ವಿರುದ್ಧ ಭಾರತ ಆಡಬಾರದು’ ಎಂದು ಗಂಭೀರ್‌ ಆಗ್ರಹಿಸಿದ್ದಾರೆ.

“ಎರಡು ಅಂಕ ಕಳೆದುಕೊಳ್ಳುವುದರಿಂದ ಏನೂ ಆಗುವುದಿಲ್ಲ. ಕೆಲವರು ಕ್ರೀಡೆ ಜತೆ ರಾಜಕೀಯ ಬೆರೆಸಬೇಡಿ ಎನ್ನುತ್ತಿದ್ದಾರೆ. ಆದರೆ ಸೈನಿಕರು ಹಾಗೂ ದೇಶದ ವಿಷಯದಲ್ಲಿ ಇಂತಹ ಮಾತುಗಳಿಗೆ ಹೆಚ್ಚಿನ ಮನ್ನಣೆ ನೀಡಬೇಕಾದ ಅಗತ್ಯವಿಲ್ಲ. ನನಗೆ ಸೈನಿಕರಿಗಿಂತ ಮಿಗಿಲಾದವರು ಬೇರೊಬ್ಬರಿಲ್ಲ’ ಎಂದು ಗಂಭೀರ್‌ ಹೇಳಿದರು.ಪುಲ್ವಾಮಾ ದುರಂತದಲ್ಲಿ ಮೃತರಾದ ಯೋಧರ ಮಕ್ಕಳಿಗೆ ಗಂಭೀರ್‌ ತಮ್ಮ ಫೌಂಡೇಶನ್‌ ಮೂಲಕ ಉಚಿತ ಶಿಕ್ಷಣ ನೀಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next