Advertisement

ಶಾಸ್ತ್ರಿ ಸಾಧನೆಯನ್ನು ಪ್ರಶ್ನಿಸಿದ ಗಂಭೀರ್‌

06:15 AM Dec 16, 2018 | |

ಹೊಸದಿಲ್ಲಿ: ಇತ್ತೀಚೆಗಷ್ಟೇ ಕ್ರಿಕೆಟ್‌ ಜೀವನಕ್ಕೆ ವಿದಾಯ ತಿಳಿಸಿದ ಗೌತಮ್‌ ಗಂಭೀರ್‌ ವಿದಾಯ ತಿಳಿಸಿದ ಕ್ಷಣದಿಂದಲೇ ಒಂದಲ್ಲ ಒಂದು ವಿಚಾರದ ಬಗ್ಗೆ ಸಿಡಿಮಿಡಿಗೊಳ್ಳುತ್ತಿದ್ದಾರೆ. ಸದ್ಯ ಭಾರತ ಕ್ರಿಕೆಟ್‌ ತಂಡದ ಪ್ರಮುಖ ಕೋಚ್‌ ರವಿಶಾಸ್ತ್ರಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿರುವ ಗೌತಮ್‌ ಗಂಭೀರ್‌ ರವಿಶಾಸ್ತ್ರಿಯ ಸಾಧನೆಯನ್ನು ಪ್ರಶ್ನಿಸಿದ್ದಾರೆ.

Advertisement

ಕಳೆದ 15 ವರ್ಷಗಳಲ್ಲಿ ವಿದೇಶಿ ನೆಲದಲ್ಲಿ ಈಗೀರುವ ಭಾರತೀಯ ತಂಡ ಉತ್ತಮವಾದುದು ಎಂದು ರವಿಶಾಸ್ತ್ರಿ ಹೇಳಿಕೆ ನೀಡಿದ್ದರು. ಇದಕ್ಕೆ ಉತ್ತರಿಸಿದ ಗೌತಮ್‌ ಗಂಭೀರ್‌ “ಇಂಥ ಹೇಳಿಕೆಗಳನ್ನು ನೀಡುವುದರಿಂದ ಜನರು ಏನ್ನನೂ ಜಯಿಸುವುದಿಲ್ಲ. ಆಸ್ಟ್ರೇಲಿಯದಲ್ಲಿ ವಿಶ್ವ ಚಾಂಪಿಯನ್‌ಶಿಪ್‌ ಜಯಿಸಿರುವುದು ಬಿಟ್ಟರೇ ಶಾಸ್ತ್ರಿ ಏನು ಸಾಧನೆ ಮಾಡಿದ್ದಾರೆ ಎಂಬ ಬಗ್ಗೆ ನನಗೆ ತಿಳಿಯುತ್ತಿಲ್ಲ. ವಿದೇಶಗಳಲ್ಲಿ ಸರಣಿ ಗೆಲ್ಲುವ ತಂಡದಲ್ಲಿ ಅವರಿರಲಿಲ್ಲ ಎಂದು ಭಾವಿಸುತ್ತೇನೆ. ನೀವಾಗಿ ಏನೂ ಜಯಿಸದೇ ಇದ್ದಾಗ, ಈ ರೀತಿಯ ಹೇಳಿಕೆಗಳನ್ನು ನೀಡಿ ಮುಗಿಸುತ್ತೀರಿ. ಜನರು ಈ ಹೇಳಿಯನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ತಿಳಿದಿದ್ದೇನೆ. ಶಾಸ್ತ್ರಿ ಗೆ ಕ್ರಿಕೆಟ್‌ ಅನುಭವ ಕಡಿಮೆ ಎಂದು ನನಗೆ ಗೊತ್ತಿದೆ. ಒಂದು ವೇಳೆ ಅವರಲ್ಲಿ ಕ್ರಿಕೆಟ್‌ ಅನುಭವ ಹೆಚ್ಚಿರುತ್ತಿದ್ದರೇ, ಇಂಥ ಹೇಳಿಕೆಗಳನ್ನು ನೀಡುತ್ತಿರಲಿಲ್ಲ’ ಎಂದು ಕಟುವಾಗಿ ಟೀಕಿಸಿದ್ದಾರೆ.

“ಇದೊಂದು ಬಾಲಿಶ ನಡೆ. 4-1 ಅಂತರದಿಂದ ಸರಣಿ ಜಯಿಸಿದರೂ, ವಿದೇಶಕ್ಕೆ ಪಯಣ ಬೆಳೆಸುವ ಭಾರತದ ತಂಡದಲ್ಲಿ ಈಗೀರುವ ತಂಡವೇ ಉತ್ತಮ ತಂಡ ಎಂದು ಹೇಳಲು ಸಾಧ್ಯವಿಲ್ಲ. ನಾವು ಎಂದಿಗೂ ವಿನಮ್ರವಾಗಿರಬೇಕು ಹಾಗೂ ಇದೇ ರೀತಿಯ ಆಟವಾಡಿ ತಂಡ ಬೆಳವಣಿಗೆಯನ್ನು ಮುಂದುವರಿಸುತ್ತೇವೆ. ಕಾರಣ ಬೇರೆಯವರ ಬಗ್ಗೆ ಗೊತ್ತಿಲ್ಲ ಈ ಹೇಳಿಕೆ ಪರಿಪಕ್ವವಲ್ಲದ ನಾನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ’ ಎಂದು ಗಂಭೀರ್‌ ತಿಳಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next