Advertisement

ರಾಷ್ಟ್ರಗೀತೆ ಪರ ಗಂಭೀರ್‌ ಬ್ಯಾಟಿಂಗ್‌

06:55 AM Oct 28, 2017 | Team Udayavani |

ನವದೆಹಲಿ: ಚಿತ್ರಮಂದಿರಗಳಲ್ಲಿ ಪ್ರತಿ ಸಿನಿಮಾ ಪ್ರದರ್ಶನದ ಸಂದರ್ಭದಲ್ಲಿ ರಾಷ್ಟ್ರಗೀತೆ ಹಾಡುವ ಕುರಿತಂತೆ ಸರ್ವೋಚ್ಚ
ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.

Advertisement

ಇದೇ ವೇಳೆ ಬಹು ಭಾಷಾ ನಟ ಕಮಲ್‌ ಹಾಸನ್‌ ಅವರು ಟ್ವೀಟ್‌ ಮಾಡಿ, ರಾಷ್ಟ್ರಗೀತೆ ಹಾಡಿಸುವುದಕ್ಕೆ ತಕರಾರು ತೆಗೆದಿದ್ದರು. ಅದರ ಬೆನ್ನಲ್ಲೇ ಖ್ಯಾತ ಕ್ರಿಕೆಟಿಗ ಗೌತಮ್‌ ಗಂಭೀರ್‌ ಅವರು ಟ್ವೀಟ್‌ ಮಾಡಿದ್ದು, ಕ್ಲಬ್‌ ಹೊರಗೆ ಕಾಯುವುದಕ್ಕೆ 20 ನಿಮಿಷ, ಮೆಚ್ಚಿನ ರೆಸ್ಟೋರೆಂಟ್‌ನಲ್ಲಿ ಕಾಯುವುದಕ್ಕೆ 30 ನಿಮಿಷ ವ್ಯಯಿಸುತ್ತೆವೆ. ರಾಷ್ಟ್ರಗೀತೆ ಹಾಡುವಾಗ 52 ಸೆಕೆಂಡ್‌ ನಿಲ್ಲಲು ಕಷ್ಟವೇ? ಎಂದು ಕೇಳಿದ್ದಾರೆ. ಈ ಮೂಲಕ ರಾಷ್ಟ್ರಗೀತೆ ಪರ ಬ್ಯಾಟಿಂಗ್‌ ಮಾಡಿದ್ದಾರೆ. ಇದು ನೇರ ಕಮಲ್‌ ಹಾಸನ್‌ಗೆ ನೀಡಿರುವ ಪ್ರತಿಕ್ರಿಯೆ ಎಂದೂ ಕೆಲವರು ವಿಶ್ಲೇಷಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next