Advertisement

ಐಸಿಸಿ ವಿರುದ್ಧ ಗೌತಮ್‌ ಗಂಭೀರ್‌ ಗರಂ

10:18 PM Jun 08, 2019 | Team Udayavani |

ಹೊಸದಿಲ್ಲಿ: ಟೀಮ್‌ ಇಂಡಿಯಾದ ಮಾಜಿ ಆರಂಭಕಾರ, ಹಾಲಿ ಸಂಸದ ಗೌತಮ್‌ ಗಂಭೀರ್‌ ಕ್ರಿಕೆಟಿನ ಉನ್ನತ ಆಡಳಿತ ಸಂಸ್ಥೆಯಾದ ಐಸಿಸಿ ವಿರುದ್ಧ ಗರಂ ಆಗಿದ್ದಾರೆ.

Advertisement

ಕಾರಣ, ಮಹೇಂದ್ರ ಸಿಂಗ್‌ ಧೋನಿ ಅವರ ಗ್ಲೌಸ್‌ ಪ್ರಕರಣ.”ಕ್ರಿಕೆಟನ್ನು ಸರಿಯಾದ ಹಾದಿಯಲ್ಲಿ ಮುನ್ನಡೆಸುವುದು ಐಸಿಸಿಯ ಜವಾಬ್ದಾರಿ. ಅದನ್ನು ಬಿಟ್ಟು ಯಾರು ಯಾವ ಗ್ಲೌಸ್‌ ಧರಿಸಿದ್ದಾರೆ, ಅದರಲ್ಲಿ ಏನಿದೆ ಎಂದು ನೋಡುತ್ತ ಕೂರುವುದಲ್ಲ’ ಎಂದು ಟೆಲಿವಿಷನ್‌ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.”ಈಗಿನ ಕ್ರಿಕೆಟ್‌ ಬರೀ ಬ್ಯಾಟ್ಸ್‌ಮನ್‌ಗಳ ಆಟವಾಗುತ್ತಿದೆ.

ಏಕದಿನದಲ್ಲಿ 300ರಿಂದ 400 ರನ್‌ ಹರಿದು ಬರುತ್ತಿದೆ. ಈಗಿನ ಪಿಚ್‌ಗಳು ಬ್ಯಾಟ್ಸ್‌ಮನ್‌ಗಳಿಗಷ್ಟೇ ನೆರವಾಗುತ್ತಿವೆ. ಬೌಲರ್‌ಗಳಿಗೂ ನೆರವಾಗುವ ಪಿಚ್‌ ತಯಾರಿಸಬೇಕಾದುದು ಐಸಿಸಿಯ ಕರ್ತವ್ಯವಾಗಬೇಕು. ಇದನ್ನೆಲ್ಲ ಬಿಟ್ಟು ಗ್ಲೌಸ್‌-ಲೋಗೊ ಪ್ರಕರಣಕ್ಕೆ ಅನಗತ್ಯ ಮಹತ್ವ ನೀಡುತ್ತಿದೆ’ ಎಂದು ಐಸಿಸಿ ವಿರುದ್ಧ ಹರಿಹಾಯ್ದರು.

Advertisement

Udayavani is now on Telegram. Click here to join our channel and stay updated with the latest news.

Next