Advertisement

ಟಾಪ್ 100 ದಾನಿಗಳು : ಪಟ್ಟಿಯಲ್ಲಿ ಅದಾನಿ, ಅಂಬಾನಿ, ಬಿರ್ಲಾ..!

03:52 PM Aug 13, 2021 | Team Udayavani |

ನವ ದೆಹಲಿ : ಭಾರತದ ಉದ್ಯಮ ಕ್ಷೇತ್ರದ ದೈತ್ಯರೆನ್ನಿಸಿಕೊಂಡಿರುವ ಗೌತಮ್ ಅದಾನಿ, ನೀತಾ ಅಂಬಾನಿ ಹಾಗೂ ಕುಮಾರ್ ಮಂಗಳಂ ಬಿರ್ಲಾ ತಮ್ಮ ಪರೋಪಕಾರಿ ಚಟುವಟಿಕೆಗಳಿಂದ ಹಾಗೂ ಸಮಾಜೋದ್ಧಾರಕ ಕಾರ್ಯ ಚಟುಟಿಕೆಗಳಿಂದಾಗಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.

Advertisement

ಯುಎಸ್ ಮೂಲದ ಡಯಾಸ್ಪೊರಾ ಸಂಸ್ಥೆಯಾದ ಇಂಡಿಯಾಸ್ಪೊರಾ 100 ಮಂದಿಯ ಜಾಗತಿಕ ಕೊಡುಗೈ ದಾನಿಗಳ ಪಟ್ಟಿಯನ್ನು ನಿನ್ನೆ (ಗುರುವಾರ, ಆಗಸ್ಟ್ 12) ಬಿಡುಗಡೆ ಮಾಡಿದೆ. ಒಂಬತ್ತು ಮಂದಿ ಇರುವ ಆಯ್ಕೆ ಸಮಿತಿಯು ಈ ಪಟ್ಟಿಯನ್ನು ಆಯ್ಕೆ ಮಾಡಿದ್ದು,  ಆಯ್ಕೆಗೆ ಸಮಾಜಪರ ಕಾರ್ಯ ಚಟುವಟಿಕೆಗಳು ಹಾಗೂ ಅವರ ಹಿನ್ನೆಲೆ ಹಾಗೂ ಕೆಲವು ವೈಯಕ್ತಿಕ ದಾಖಲೆಗಳನ್ನು ಪರಿಶೀಲನೆ ಮಾಡಲಾಗಿತ್ತು.

ಇದನ್ನೂ ಓದಿ : ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಸೋತವರಿಗೂ ‘ಅಲ್ಟ್ರಾಜ್‌ ಕಾರು ಉಡುಗೊರೆ ಘೋಷಿಸಿದ ಟಾಟಾ

ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಭಾರತದ ಕೈಗಾರಿಕೋದ್ಯಮಿ ಗೌತಮ್ ಅದಾನಿ ಸ್ಥಾನ ಪಡೆದಿದ್ದಾರೆ ಎನ್ನುವುದು ವಿಶೇಷ.  ನೀತಾ ಅಂಬಾನಿ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಹಾಗೂ ಕುಮಾರ್ ಮಂಗಳಂ ಬಿರ್ಲಾ ಟಾಪ್ ಲೆವೆಲ್ ನಲ್ಲಿ ಗುರುತಿಸಿಕೊಂಡಿದ್ದಾರೆ.

ಯುಎಸ್‌ನಿಂದ ಮಾಂಟೆ ಅಹುಜಾ, ಅಜಯ್ ಬಂಗಾ ಮತ್ತು ಮನೋಜ್ ಭಾರ್ಗವ, ಕೆನಡಾದ ಸೋನಮ್ ಅಜ್ಮೇರಾ, ಬಾಬ್ ಧಿಲ್ಲೋನ್, ಯುನೈಟೆಡ್ ಕಿಂಗ್‌ ಡಮ್‌ ನ ಮೊಹಮದ್ ಅಮರ್ಸಿ, ಮನೋಜ್ ಬಡಲೆ ಮತ್ತು ಕುಜಿಂದರ್ ಬಹಿಯಾ ಪಟ್ಟಿಯ ಟಾಪ್ ಮೋಸ್ಟ್ ಸ್ಥಾನದಲ್ಲಿದ್ದಾರೆ.

Advertisement

ಇಂಡಿಯಾಸ್ಪೊರಾ ಸಂಸ್ಥೆಯ ಸ್ಥಾಪಕ ಎಮ್ ಆರ್ ರಂಗಸ್ವಾಮಿ ಈ ಬಗ್ಗೆ ಪ್ರತಿಕ್ರಿಯಿಸಿ, ಈ ಪಟ್ಟಿಯಲ್ಲಿರುವವರೆಲ್ಲರೂ ತಮ್ಮ ಸಮಾಜಪರ, ಲೋಕೋಪಯೋಗಿ ಕೆಲಸಗಳಿಂದ ಖ್ಯಾತಿ ಗಳಿಸಿದ್ದಾರೆ. ಮಾತ್ರವಲ್ಲದೇ ಸಹಸ್ರಾರು ಮಂದಿಗೆ ಸ್ಫೂರ್ತಿಯಾಗಿದ್ದಾರೆ ಎಂದಿದ್ದಾರೆ.

ಉದ್ಯಮ ಕ್ಷೇತ್ರದ ಜೊತೆಜೊತೆಗೆ ಇಂತಹ ಸಮಾಜ ಪರ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವವರು ನಮ್ಮೊಂದಿಗೆ ಇದ್ದಾರೆ ಎನ್ನುವುದೇ ಹೆಮ್ಮೆ ಎಂದು ಹೇಳಿದ್ದಾರೆ.

Check the full list :  https://lists.indiaspora.org/philanthropyLeaders/2021

ಇದನ್ನೂ ಓದಿ : 46 ಕೋಟಿಗೆ ಐಷಾರಾಮಿ ಫ್ಲ್ಯಾಟ್ ಮಾರಾಟ ಮಾಡಿದ ನಟ ಅಭಿಷೇಕ್ ಬಚ್ಚನ್

Advertisement

Udayavani is now on Telegram. Click here to join our channel and stay updated with the latest news.

Next