Advertisement
ಮಂಗಳವಾರ ಬಿಜೆಪಿ ಚುನಾವಣಾ ಉಸ್ತುವಾರಿಗಳ ಕರ್ನಾಟಕ ದಕ್ಷಿಣ ಭಾಗದ ಕಾರ್ಯಾಗಾರದಲ್ಲಿ ಮಾತನಾಡಿದ ಬಿಜೆಪಿರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಸಂಸದ ಪ್ರಹ್ಲಾದ ಜೋಶಿ ಮತ್ತು
ಶಾಸಕ ಸಿ.ಟಿ.ರವಿ, ಗೌರಿ ಹತ್ಯೆ ಪ್ರಕರಣದಲ್ಲಿ ಸಂಘ ಪರಿವಾರವನ್ನು ಎಳೆತಂದಿರುವುದು ಮತ್ತು ಪ್ರತಿ ಸಂದರ್ಭದಲ್ಲೂ ಆರ್‌ಎಸ್‌ಎಸ್, ಬಿಜೆಪಿಯನ್ನು ಎಳೆತರುವ ಪ್ರಯತ್ನದ ವಿರುದ್ಧ ಕಿಡಿ ಕಾರಿದರು.
ಪ್ರಶ್ನಿಸಿದರಲ್ಲದೆ, ಕಾಂಗ್ರೆಸ್ ಸರಕಾರದ ವೈಫಲ್ಯ ಮುಚ್ಚಿಕೊಳ್ಳಲು ತಥಾಕಥಿತ ವಿಚಾರವಾದಿಗಳು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು. ಹತ್ಯೆಗೆ ಸಂಬಂಧಿಸಿದಂತೆ ಈಗಾಗಲೇ ಹೇಳಿಕೆ ನೀಡಿರುವ ರಾಹುಲ್ ಗಾಂಧಿ ಮತ್ತು ರಾಮ ಚಂದ್ರ ಗುಹಾ ಮೊದಲಾದವರನ್ನು ಪೊಲೀಸರು ಮೊದಲು ವಿಚಾರಣೆಗೊಳಪಡಿಸಬೇಕು. ಆರೋಪಿಗಳ ಪತ್ತೆಗೆ ಸಹಾಯ ಮಾಡಿದವರಿಗೆ ನೀಡುವ ಬಹುಮಾನದ ಮೊತ್ತವನ್ನು ಅವರಿಗೇ ನೀಡಬೇಕು ಎಂದು ಹೇಳಿದರು.
Related Articles
ಅವರ ಚಿಂತನೆಗಳನ್ನು ವಿರೋಧಿಸುತ್ತಲೇ ಬಂದಿದ್ದ ಬಿಜೆಪಿ ಅವರ ಹತ್ಯೆಯನ್ನೂ ಅಷ್ಟೇ ತೀಕ್ಷ್ಣವಾಗಿ ಖಂಡಿಸಿದೆ. ಆದರೆ, ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್‌ನವರೇ ತನಿಖೆಯ ದಿಕ್ಕುತಪ್ಪಿಸುವ ರೀತಿಯಲ್ಲಿ ಸಂಘ ಪರಿವಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಇದನ್ನು ಗಮನಿಸಿದರೆ ಅವರು ಯಾರನ್ನೋ ರಕ್ಷಿಸಲು ಹೊರಟಿದ್ದಾರೆ ಎಂಬಂತೆ ಭಾಸವಾಗುತ್ತಿದೆ ಎಂದು ಆರೋಪಿಸಿದರು.
Advertisement
ಆರ್‌ಎಸ್‌ಎಸ್ ಸೇರಿ ಸಂಘ ಪರಿವಾರ ದೇಶಭಕ್ತಿ ಮೂಡಿಸುವ ಕೆಲಸ ಮಾಡುತ್ತದೆಯೇ ಹೊರತು, ಕೊಲೆ ಸುಲಿಗೆಗಳನ್ನಲ್ಲ. ಗೌರಿ ಜತೆ ಅನೇಕ ವೈಚಾರಿಕ ಸಂಘರ್ಷವಿದ್ದರೂ, ಕೊಲೆ ಮಾಡುವ ಕೆಲಸಕ್ಕೆ ಸಂಘಪರಿವಾರದವರು ಇಳಿಯುವುದಿಲ್ಲ. ಸರ್ಕಾರಕ್ಕೆ ಅಷ್ಟು ಅನುಮಾನವಿದ್ದರೆ ಪ್ರಕರಣಗಳನ್ನು ಸಿಬಿಐಗೆ ಒಪ್ಪಿಸಲಿ.– ಕೆ.ಎಸ್.ಈಶ್ವರಪ್ಪ, ಮೇಲ್ಮನೆ ಪ್ರತಿಪಕ್ಷ ನಾಯಕ