Advertisement
ಗೌರಿ ಹಂತಕರಾದ ಪರಶುರಾಮ್ ವಾಗೊ¾àರೆ, ಗಣೇಶ್ ಮಿಸ್ಕಿ, ಅಮೋಲ್ ಕಾಳೆ, ಮನೋಹರ್ ಯಡವೆ, ಅಮಿತ್ ದೇಗ್ವೇಕರ್, ನವೀನ್ ಕುಮಾರ್ ಹಾಗೂ ಪ್ರವೀಣ್ ಕುಮಾರ್ ಹಾಗೂ ಇತರರು ವಾಸವಾಗಿದ್ದ ಬಾಡಿಗೆ ಮನೆ ಎಸಿಬಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇನ್ಸ್‌ಪೆಕ್ಟರ್‌ವೊಬ್ಬರಿಗೆ ಸೇರಿದ್ದಾಗಿದ್ದು, ಮನೆ ಆವರ ಪತ್ನಿ ಹೆಸರಿನಲ್ಲಿದೆ. ಇದೇ ಮನೆಯಲ್ಲಿ ಕುಳಿತು ಆರೋಪಿಗಳು ಗೌರಿ ಹತ್ಯೆಗೆ ಸಂಚು ರೂಪಿಸಿದ್ದರು ಎಂಬ ಸ್ಫೋಟಕ ಮಾಹಿತಿ ಲಭ್ಯವಾಗಿದೆ.
ಈ ಸಂಬಂಧ ಅಧಿಕಾರಿಯಿಂದ ಹೇಳಿಕೆ ಪಡೆದುಕೊಂಡಿದ್ದು, ಮನೆ ಪತ್ನಿ ಹೆಸರಿನಲ್ಲಿದೆ. ಅಲ್ಲದೆ, ಈ ಮನೆಗಳ ನಿರ್ವಹಣೆಯನ್ನು ಪತ್ನಿಯ ಸಂಬಂಧಿಕರಿಗೆ ವಹಿಸಲಾಗಿದೆ. ಅವರೇ ಬಾಡಿಗೆದಾರರ ಪೂರ್ವಪರ ವಿಚಾರಿಸಿ ಮನೆ ನೀಡುತ್ತಾರೆ. ಅಪರೂಪಕ್ಕೊಮ್ಮೆ ಮನೆಗಳ ಬಳಿ ಹೋಗಿ ಬರುತ್ತಿದ್ದೆ. ಹೀಗಾಗಿ ತನ್ನ ಮನೆಗಳಲ್ಲಿ ವಾಸವಿರುವ ವ್ಯಕ್ತಿಗಳ ಕುರಿತು ಸರಿಯಾದ ಮಾಹಿತಿಯಿಲ್ಲ ಎಂದು ಹೇಳಿರುವುದಾಗಿ ಎಸ್‌ಐಟಿ ಮೂಲಗಳು ತಿಳಿಸಿವೆ. ಹತ್ಯೆಗೈದ ಬಳಿಕ 15 ದಿನ ವಾಸ
2017 ಸೆ.5ರ ರಾತ್ರಿ 8.30ರ ಸುಮಾರಿಗೆ ಪರಶುರಾಮ್ ವಾಗೊ¾àರೆ ಹಾಗೂ ಬೈಕ್ ಚಾಲಕ ಗಣೇಶ್ ಮಸ್ಕಿ ಗೌರಿಲಂಕೇಶ್‌ರನ್ನು ಹತ್ಯೆಗೈದು ಬಳಿಕ ನೇರವಾಗಿ ಸಿಗೇಹಳ್ಳಿಗೇಟ್ ಬಳಿಯ ಪೊಲೀಸಪ್ಪನ ಬಿಲ್ಡಿಂಡ್‌ನಲ್ಲಿರುವ ಬಾಡಿಗೆ ಮನೆಗೆ ಹೋಗಿದ್ದರು. ಮರು ದಿನ(ಸೆ.6) ಬೆಳಗ್ಗೆ 6.30ಕ್ಕೆ ವಾಗೊ¾àರೆ ರೈಲಿನಲ್ಲಿ ವಿಜಯಪುರಕ್ಕೆ ವಾಪಸ್ ಹೋಗಿದ್ದ. ಇನ್ನು ಅಮೋಲ್ ಕಾಳೆ ಮತ್ತು ಗಣೇಶ್ ಮಸ್ಕಿ ಹಾಗೂ ಇತರರು 15 ದಿನಗಳ ಕಾಲ ಇಲ್ಲಿಯೇ ವಾಸವಾಗಿದ್ದರು. ಪ್ರಕರಣದ ತೀವ್ರತೆ ಹೆಚ್ಚಾಗುತ್ತಿದ್ದಂತೆ ಆರೋಪಿಗಳು ಮನೆ ಖಾಲಿ ಮಾಡಿಕೊಂಡು ಪರಾರಿಯಾಗಿದ್ದರು. ಅನಂತರ ಕುಣಿಗಲ್ ಮೂಲದ ಸುರೇಶ್ ಬಂದು ವಾಸವಾಗಿದ್ದ. ಮತ್ತೂಂದು ಆಘಾತಕಾರಿ ಅಂಶವೆಂದರೆ ಸುರೇಶ್ ತನ್ನ ಹೆಸರಿನಲ್ಲಿ ಬಾಡಿಗೆ ಪಡೆದುಕೊಂಡು ಆರೋಪಿಗಳನ್ನು ಕರೆಸಿಕೊಂಡಿದ್ದ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.
Related Articles
ಬೆಂಗಳೂರಿನಲ್ಲಿ ಮನೆಗಳ ಬಾಡಿಗೆ ನೀಡುವಾಗ ಬಾಡಿಗೆದಾರರ ಪೂರ್ವಾಪರ ವಿಚಾರಣೆ ನಡೆಸಬೇಕೆಂಬ ನಿಯಮವನ್ನು ಪೊಲೀಸ್ ಇಲಾಖೆಯೇ ಜಾರಿಗೆ ತಂದಿದೆ. ಆದರೆ, ಇದೀಗ ಪೊಲೀಸ್ ಅಧಿಕಾರಿಯೇ ತನ್ನ ಮನೆಯನ್ನು ಬಾಡಿಗೆ ನೀಡುವಾಗ ಪರಿಶೀಲಿಸದೆ ಹಾಗೂ ಸೂಕ್ತ ದಾಖಲೆಗಳನ್ನು ಪಡೆದುಕೊಳ್ಳದೆ ನಿಯಮ ಉಲ್ಲಂ ಸಿರುವುದು ಚರ್ಚೆಗೆ ಗ್ರಾಸವಾಗಿದೆ.
Advertisement