Advertisement

ತಗ್ಗು ಪ್ರದೇಶದಲ್ಲಿ ಮಳೆ ಅನಾಹುತ ತಪ್ಪಿಸಿ : ಅಧಿಕಾರಿಗಳಿಗೆ ಗೌರವ್‌ ಗುಪ್ತ ಸೂಚನೆ

10:27 PM Jun 02, 2021 | Team Udayavani |

ಬೆಂಗಳೂರು: ಮಳೆಗಾಲದಲ್ಲಿ ಪಾಲಿಕೆ ವ್ಯಾಪ್ತಿಯ ತಗ್ಗು ಪ್ರದೇಶದಲ್ಲಿ ಮಳೆ ನೀರು ನಿಂತು ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸುವಂತೆ ಹಾಗೂ ಸೂಕ್ತ ಮುಂಜಾಗ್ರತಾ ಕ್ರಮ ವಹಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ನಗರದಲ್ಲಿ ಮಳೆಗಾಲ ಪೂರ್ವ ಸಿದ್ಧತೆಗೆ ಸಂಬಂಧಿಸಿದಂತೆ ಸಚಿವ ಬೈರತಿ ಬಸವಾರಜು ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ಅವರು ಹೆಬ್ಟಾಳ ಕಣಿವೆ, ಕಲ್ಕೆರೆ ಹಾಗೂ ರಾಂಪುರ ಕೆರೆ ಸೇರಿದಂತೆ ವಿವಿಧ ಕೆರೆಗಳ ಪರಿಸ್ಥಿತಿಯನ್ನು ಬುಧವಾರ ಪರಿಶೀಲಿಸಿದರು.

ಹೆಣ್ಣೂರು ಕಣಿವೆ ಪರಿಶೀಲನೆ:
ಕಳೆದ ವರ್ಷ ಭಾರೀ ಮಳೆಯಿಂದ ಜಲಾವೃತ್ತವಾಗಿದ್ದ ಹೆಣ್ಣೂರು ಮುಖ್ಯ ರಸ್ತೆ, ಸಾಯಿ ಲೇಔಟ್‌, ಗೆದ್ದಲಹಳ್ಳಿ ಪ್ರದೇಶಗಳನ್ನು ಪರಿಶೀಲನೆ ನಡೆಸಲಾಯಿತು. ಕಳೆದ ವರ್ಷ ಸುರಿದ ಭಾರೀ ಮಳೆಯಿಂದಾಗಿ ಈ ಭಾಗದ ತಗ್ಗು ಪ್ರದೇಶದಲ್ಲಿನ ಮನೆಗಳಿಗೆ ನೀರು ನುಗ್ಗಿತ್ತು. ಈ ಬಾರಿ ಯಾವುದೇ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಲು ಸೂಚಿಸಿದರು.

ಹೆಬ್ಟಾಳದ ಕಣಿವೆ ಭಾಗದಲ್ಲಿ ರೈಲ್ವೆ ಸೇತುವೆ ಕಿರಿದಾಗಿದ್ದು, ಭಾರೀ ಮಳೆಯಾದರೆ ಸಮಸ್ಯೆ ಆಗುತ್ತಿದೆ. ಈ ಸೇತುವೆ ಅಗಲ ಹೆಚ್ಚಿಸಲು ರೈಲ್ವೆ ಇಲಾಖೆಗೆ ಮನವಿ ಮಾಡಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದರು.

ಇದನ್ನೂ ಓದಿ :ಕೋವಿಡ್ :  ರಾಜ್ಯದಲ್ಲಿಂದು 16387 ಹೊಸ ಕೇಸ್ ಪತ್ತೆ, 21199 ಜನರು ಗುಣಮುಖ

Advertisement

ಸಚಿವ ಬೈರತಿ ಬಸವರಾಜು ಮಾತನಾಡಿ, ಮಳೆಗಾಲದಲ್ಲಿ ಹೆಬ್ಟಾಳ ಕಣಿವೆ ಮಾರ್ಗವಾಗಿ ಸರ್ವಜ್ಞನಗರ, ಸಿ.ವಿ ರಾಮನ್‌ ನಗರ ಹಾಗೂ ಹೆಬ್ಟಾಳದ ಕಡೆಯಿಂದ ನೀರು ಹರಿಯುತ್ತದೆ. ಭಾರಿ ಮಳೆ ಆಗುವ ಸಂದರ್ಭದಲ್ಲಿ ಜನ ಪರದಾಡುವ ಪರಿಸ್ಥಿತಿ ಇದೆ. ಹೀಗಾಗಿ, ಅಗತ್ಯ ಮುಂಜಾಗ್ರತ ಕ್ರಮ ವಹಿಸಿ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಕಲ್ಕೆರೆ ನೀರು ತಗ್ಗಿಸಲು ಸೂಚನೆ:
ಕಲ್ಕೆರೆಯಲ್ಲಿ ಸದಾ ನೀರು ತುಂಬಿರುತ್ತದೆ. ಹೊರ ಮಾವು ವ್ಯಾಪ್ತಿಯ ಎಸ್‌ಟಿಪಿ ನೀರನ್ನೂ ಇದೇ ಕೆರೆಗೆ ಬಿಡುತ್ತಿರುವುದರಿಂದ ಕೆರೆ ತುಂಬುತ್ತಿದೆ. ಮಳೆಗಾಲಕ್ಕೆ ಪೂರ್ವಭಾವಿಯಾಗಿ ಕೆರೆಯಲ್ಲಿರುವ ಎರಡು ಅಡಿಯಷ್ಟು ನೀರನ್ನು ಖಾಲಿ ಮಾಡಿ ಎಂದು ಕೆರೆ ವಿಭಾಗದ ಅಧಿಕಾರಿಗಳಿಗೆ ಆಯುಕ್ತರು ಸೂಚಿಸಿದರು. ಅಲ್ಲದೆ, ಮಳೆ ನೀರು ಪೂರ್ಣವಾಗಿ ಕೆರೆಯಲ್ಲೇ ಶೇಖರಣೆ ಆಗುವ ಉದ್ದೇಶದಿಂದ ರೂಪಿಸಿರುವ 1,800 ಮೀಟರ್‌ ತಿರುವುಗಾಲುವೆ ಕಾಮಗಾರಿಯನ್ನು ಆದ್ಯತೆಯ ಮೇಲೆ ಪೂರ್ಣಗೊಳಿಸುವಂತೆ ಸೂಚಿಸಿದರು.

ರಾಂಪುರ ಕೆರೆಯನ್ನು 35 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಈ ಭಾಗದಲ್ಲಿರುವ ಹೂಳನ್ನು ಶೀಘ್ರ ತೆರವು ಮಾಡುವಂತೆ ತಾಕೀತು ಮಾಡಿದರು.

ಬಿಬಿಎಂಪಿ ವಲಯ ಆಯುಕ್ತ ಡಿ. ರಂದೀಪ್‌, ಜಂಟಿ ಆಯುಕ್ತ ವೆಂಕಟಾಚಲಪತಿ, ರಾಜಕಾಲುವೆ ವಿಭಾಗದ ಮುಖ್ಯ ಎಂಜಿನಿಯರ್‌ ಪ್ರಹ್ಲಾದ್‌ ಹಾಗೂ ಕೆರೆ ವಿಭಾಗದ ಮುಖ್ಯ ಎಂಜಿನಿಯರ್‌ ಮೋಹನ್‌ ಕೃಷ್ಣ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next