Advertisement

ಇಂಡಿಯನ್‌ ನ್ಯಾಷನಲ್‌ ರ‍್ಯಾಲಿ: ಗಿಲ್‌ಗೆ ದಿನದ ಗೌರವ

10:24 AM Dec 22, 2019 | Sriram |

ಕೊಟ್ಟಾಯಂ: ಭಾರತದ ಖ್ಯಾತ ಕಾರ್‌ ರೇಸ್‌ ಚಾಲಕ ಜೆಕೆ ಟಯರ್‌ ತಂಡದ ಗೌರವ್‌ ಗಿಲ್‌ ಶುಕ್ರವಾರ ಇಂಡಿಯನ್‌ ನ್ಯಾಷನಲ್‌ ಕಾರ್‌ ರ‍್ಯಾಲಿ ಚಾಂಪಿಯನ್‌ಶಿಪ್‌ನಲ್ಲಿ ಅತ್ಯುತ್ತಮ ನಿರ್ವಹಣೆ ನೀಡಿದ್ದಾರೆ. ಮೊದಲ ದಿನ ಮೊದಲ ಸ್ಥಾನ ಪಡೆದು ದಿನದ ಗೌರವ ಪಡೆದಿದ್ದಾರೆ.

Advertisement

ಶನಿವಾರದ ಸ್ಪರ್ಧೆಯಲ್ಲಿ ಗಿಲ್‌ ಅವರು ನ್ಯಾವಿಗೇಟರ್‌ ಮೂಸಾ ಶೆರಿಫ್ ಜತೆಗೂಡಿ ಅಪ್ರತಿಮ ಚಾಲನೆ ನಡೆಸಿದರು. ಆರಂಭದಲ್ಲಿ ಹಿನ್ನಡೆ ಅನುಭವಿಸಿದ್ದರೂ ಸಾಹಸ ಮೆರೆದ ಗಿಲ್‌ ಮೊದಲ 4 ಸುತ್ತಿನಲ್ಲಿ ಮೊದಲಿಗರಾಗಿ ಸ್ಪರ್ಧೆ ಮುಗಿಸುವಲ್ಲಿ ಯಶಸ್ವಿಯಾದರು. ಗಿಲ್‌ -ಮೂಸಾ ತಂಡ 1 ಗಂಟೆ 2 ನಿಮಿಷ 49.8 ಸೆಕೆಂಡ್ಸ್‌ನಲ್ಲಿ ಸವಾಲನ್ನು ಪೂರೈಸಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.

ಜೆಕೆ ಟಯರ್‌ ತಂಡದ ಮತ್ತೋರ್ವ ಚಾಲಕ ಯೂನಸ್‌ ಇಲಿಯಾಸ್‌ ಹಾಗೂ ನ್ಯಾವಿಗೇಟರ್‌ ಹರೀಶ್‌ ಗೌಡ ಒಳಗೊಂಡ ತಂಡ ದ್ವಿತೀಯ ಸ್ಥಾನ ಪಡೆಯಿತು. ಅವರ ತಂಡ ಒಟ್ಟಾರೆ 1 ಗಂಟೆ 3 ನಿಮಿಷ 44.8 ಸೆಕೆಂಡ್ಸ್‌ನಲ್ಲಿ ಗುರಿ ಪೂರೈಸಿತು. ಸದ್ಯ 2ನೇ ಸ್ಥಾನಕ್ಕೆ ಸಮಾಧಾನಪಟ್ಟರು. ಡಾ.ಬಿಕ್ಕು ಬಾಬು ಹಾಗೂ ನ್ಯಾವಿಗೇಟರ್‌ ಮಿಲನ್‌ ಜಾರ್ಜ್‌ ತಂಡವು ತೃತೀಯ ಸ್ಥಾನದಲ್ಲಿದೆ. 1 ಗಂಟೆ 5 ನಿಮಿಷ 37.9 ಸೆಕೆಂಡ್ಸ್‌ನಲ್ಲಿ ಈ ಜೋಡಿ ಸ್ಪರ್ಧೆ ಮುಗಿಸಿತು. ಒಟ್ಟಾರೆ ಭಾನುವಾರದ ಸ್ಪರ್ಧೆಗಳು ಕುತೂಹಲ ಕೆರಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next