Advertisement

ಅನ್ಯಾಯ ಖಂಡಿಸಿ ಗೌಳಿಗರ ಪ್ರತಿಭಟನೆ: ಸಿಎಂಗೆ ಮನವಿ

04:30 PM Mar 22, 2017 | Team Udayavani |

ಕಲಬುರಗಿ: ರಾಜ್ಯ ಬಜೆಟ್‌ನಲ್ಲಿ ಗೌಳಿ ಜನಾಂಗದ ಬೇಡಿಕೆಗಳನ್ನು ಕಡೆಗಣಿಸಲಾಗಿದೆ. ಕಳೆದ 47 ವರ್ಷಗಳಿಂದ ಮಂಡಿಸಲಾಗುತ್ತಿರುವ ಬೇಡಿಕೆಗಳ ಬಗ್ಗೆ ನಿರ್ಲಕ್ಷ ವಹಿಸಲಾಗಿದೆ ಎಂದು ರಾಜ್ಯ ಗೌಳಿಗರ ಸಂಘ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿತು. 

Advertisement

ಹಾವನೂರ ವರದಿಯಲ್ಲಿ ಗೌಳಿ ಜನಾಂಗವನ್ನು ಮೀಸಲಾತಿ  ಪಟ್ಟಿಯಲ್ಲಿ ನೋಂದಣಿ ಮಾಡಿದ್ದರೂ ಈವರೆಗೂ ನ್ಯಾಯ ಸಿಕ್ಕಿಲ್ಲ. ಗೌಳಿ ಜನಾಂಗದವರಿಗೆ ಹೈನುಗಾರಿಕೆ, ಪಶುಪಾಲನೆಗೆ 100 ಕೋಟಿ ರೂ. ಗಳ ಪ್ಯಾಕೇಜ್‌ ಘೋಷಣೆ, ಪ್ರತಿ  ಕುಟುಂಬಕ್ಕೆ 12 ಲಕ್ಷ ರೂ.,

ಹೈ.ಕ.ಭಾಗದಲ್ಲಿ ಭೀಕರ ಬರಗಾಲ ಇರುವುದರಿಂದ ಪ್ರತಿ ಎಮ್ಮೆಯ ಸಂರಕ್ಷಣೆಗೆ 10 ಸಾ.ರೂ.ಗಳ ಪರಿಹಾರ ಧನ ಒದಗಿಸುವುದು, ಪ್ರತಿ ಊರಲ್ಲಿ  ಗೌಳಿಘಾಟ ನಿರ್ಮಿಸಬೇಕು ಎಂದು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಉಚಿತ ವಿಮಾ ಯೋಜನೆ ಜಾರಿ, ವಸತಿ ಯೋಜನೆಯಡಿ ಮನೆ ನೀಡುವುದು,

ಸಮಾಜವನ್ನು ಪ್ರವರ್ಗ 1ರಿಂದ ಪರಿಶಿಷ್ಟ ಪಂಗಡಕ್ಕೆ ಸೇರಿಸುವುದು, ಪ್ರತ್ಯೇಕ ನಿಗಮ ಸ್ಥಾಪನೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮನವಿ ಸಲ್ಲಿಸಲಾಯಿತು. ಸುಭಾಷ ಗೌಳಿ, ನಿವೇದಿತಾ ದಹಿಂಡೆ, ಬುದನ ದೇವರ್ಶಿ, ರಮೇಶ ಹಾಗೂ ಇತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next