Advertisement
ಸುದ್ದಿಗಾರರ ಜತೆ ಮಾತನಾಡಿ, ಆಳ್ವಾ ಅವರು ಹಿರಿಯರು. ಅವರ ಮೂಲಗಳಿಂದ ಹಾಗೆ ಹೇಳಿರಬಹುದು ಎಂದು ಪ್ರತಿಕ್ರಿಯಿಸಿದರು. ಇತ್ತೀಚೆಗೆ ಕಾಂಗ್ರೆಸ್ ಕಾರ್ಯಕ್ರಮವೊಂದರಲ್ಲಿ ಮಾರ್ಗರೇಟ್ ಆಳ್ವಾ ಅವರು “ಆಪರೇಷನ್ ಕಮಲದ’ ವಿಷಯ ಸಿದ್ದರಾಮಯ್ಯ ಅವರಿಗೆ ಗೊತ್ತು. ಅವರು ವಾಪಸ್ ಕರೆದರೆ ಶಾಸಕರು ಮತ್ತೆ ಬರುತ್ತಾರೆ ಎಂಬರ್ಥದಲ್ಲಿ ಮಾತಾಡಿದ್ದರು.
Related Articles
Advertisement
ಅಧಿಸೂಚನೆಗೆ ಸ್ವಾಗತ ಬೆಂಗಳೂರು: ಕೇಂದ್ರ ಸರ್ಕಾರದಿಂದ ಮಹದಾಯಿ ಅಧಿಸೂಚನೆ ಹೊರಡಿಸಿರುವುದು ಸಂತೋಷದ ವಿಚಾರ. ಇದು ಪ್ರಾದೇಶಿಕತೆಯ ವಿಷಯ. ಅಧಿಸೂಚನೆಯಿಂದ ನಮಗೆ 13 ಟಿಎಂಸಿ ನೀರು ಸಿಗುತ್ತದೆ ಎಂದು ಮಾಜಿ ಪ್ರಧಾನಿ ಎಚ್. ಡಿ.ದೇವೇಗೌಡರು ಹೇಳಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿ, ಅಧಿಸೂಚನೆಯಿಂದ ನಮ್ಮ ಅಂತಿಮ ಗುರಿ ಮುಟ್ಟಿದೆ ಎನ್ನಿಸುತ್ತದೆ. ಸುಪ್ರೀಂಕೋರ್ಟ್ ಆದೇಶದ ಮೇಲೆ ಅಧಿಸೂಚನೆ ಹೊರಡಿಸಿದ್ದಾರೆ. ವಿಳಂಬ ಮಾಡಿಲ್ಲ, ಅದು ನೆಮ್ಮದಿಯ ವಿಚಾರ ಎಂದರು. ವಿಫಲ: ದೆಹಲಿ ಘಟನೆಯಲ್ಲಿ ಕೇಂದ್ರ ಸರ್ಕಾರ, ಗುಪ್ತಚರ ಇಲಾಖೆ ವಿಫಲವಾಗಿದೆ. ಗೃಹ ಇಲಾಖೆಯೇ ಇದರ ಹೊಣೆ ಹೊರಬೇಕು ಎಂದು ದೇವೇಗೌಡರು ಒತ್ತಾಯಿಸಿದರು. ಕೆ.ಆರ್.ಪೇಟೆಯಲ್ಲಿ ನಮ್ಮ ಕಾರ್ಯಕರ್ತರಿಗೆ ಸಚಿವ ನಾರಾಯಣಗೌಡ ಹೈಕೋರ್ಟ್ ಆದೇಶ ಇದ್ದರೂ ತೊಂದರೆ ಕೊಡುತ್ತಿದ್ದಾರೆ. ಹೀಗಾಗಿ, ನಾನೇ ಆಲ್ಲಿಗೆ ಹೋಗಿ ಸ್ಪಂದಿಸುತ್ತೇನೆ. ಈ ಬಗ್ಗೆ ಮುಖ್ಯಮಂತ್ರಿಯವರ ಗಮನಕ್ಕೂ ತಂದಿದ್ದೇನೆ. ಸರ್ಕಾರ ಏನು ಕ್ರಮ ತೆಗೆದುಕೊಳ್ಳುತ್ತೋ ನೋಡೋಣ ಎಂದರು.