ನೀತಿ ಆಯೋಗದ ಸಿಇಓ
Advertisement
ಬಹುತೇಕ ದೇಶಗಳ ಪರಿವರ್ತನೆಯಲ್ಲಿ ಮೂಲಸೌಕರ್ಯ ಮಹತ್ವದ ಪಾತ್ರ ವಹಿಸಿದೆ. ಅಮೆರಿಕಾದಲ್ಲಿ ಅಧ್ಯಕ್ಷ ರೂಸ್‌ವೆಲ್ಟ್ ಅವರಿಂದ ಆರಂಭವಾದ ಹೊಸ ಒಪ್ಪಂದವು ಮಹಾ ಆರ್ಥಿಕ ಕುಸಿತದ ಅನಂತರ ದೇಶವನ್ನು ಮೇಲಕ್ಕೆತ್ತಿತು. 2ನೇ ಮಹಾ ಯುದ್ಧದ ಅನಂತರ ಜಪಾನ್‌ನಲ್ಲಿ ಸಾರಿಗೆ ಆಧಾರಿತ ಅಭಿವೃದ್ಧಿ ನಿರ್ಣಾಯಕ ವಾಯಿತು. 1960-1990ರ ನಡುವೆ, ದಕ್ಷಿಣ ಕೊರಿಯಾ ವಾರ್ಷಿಕ ಸರಾಸರಿ ಶೇ.10 ದರದಲ್ಲಿ ಪ್ರಗತಿ ಕಂಡಿತು. 1980- 2010ರ ನಡುವೆ ಚೀನ ಸಹ ಇದೇ ರೀತಿಯ ವೇಗದಲ್ಲಿ ಬೆಳವ ಣಿಗೆ ಸಾಧಿಸಿತು. ಇದರ ಪರಿಣಾಮವಾಗಿ ಈ ದೇಶಗಳಲ್ಲಿ ಒಂದು ತಲೆಮಾರಿನೊಳಗೆ ಸಾಮಾಜಿಕ-ಆರ್ಥಿಕ ಪರಿವರ್ತನೆ ಯಾಯಿತು. ಈ ದೇಶಗಳ ಯಶಸ್ಸಿನಲ್ಲಿ ನಿರ್ಣಾಯಕ ಶಕ್ತಿಯು ಬಹು-ಮಾದರಿ ಸಾರಿಗೆ ಜಾಲವಾಗಿದ್ದು, ಇದು ರಫ್ತು ಸ್ಪರ್ಧಾತ್ಮ ಕತೆಯನ್ನು ಹೆಚ್ಚಿಸುವ ಲಾಜಿಸ್ಟಿಕ್ಸ್ ವೆಚ್ಚವನ್ನು ಗಮನಾರ್ಹವಾಗಿ ತಗ್ಗಿಸಿತು. ಭಾರತವು ಇದೇ ರೀತಿಯ ಆರ್ಥಿಕ ಪರಿವರ್ತನೆಗೆ ನಾಂದಿ ಹಾಡಲು ರಫ್ತು ಪ್ರಮುಖವಾಗಿದೆ. ಆದಾಗ್ಯೂ ನಮ್ಮ ದೇಶದ ಸಂಭಾವ್ಯ ಬೆಳವಣಿಗೆಯ ದರವನ್ನು ಹೆಚ್ಚಿಸುವಲ್ಲಿ ನಮ್ಮ ಮೂಲಸೌಕರ್ಯವು ಒಂದು ತೊಡಕಾಗಿದೆ.
Advertisement
ಇದನ್ನೂ ಓದಿ:ಐಟಿ ದಾಳಿಗೆ ಸಿದ್ದರಾಮಯ್ಯ ಕಾರಣ: ಎಚ್‌ಡಿಕೆ
ಸಮರ್ಥ, ತಡೆರಹಿತ, ಬಹು-ಮಾದರಿ ಸಾರಿಗೆ ಜಾಲವನ್ನು ಸಾಧಿಸುವುದು ಸುಲಭದ ಕೆಲಸವೇನೂ ಅಲ್ಲ. ಇದಕ್ಕೆ ಪ್ರತ್ಯೇಕ ಸರಕಾರಿ ಇಲಾಖೆಗಳು ನಿಕಟ ಸಮನ್ವಯ ಮತ್ತು ಸಹಯೋಗ ದೊಂದಿಗೆ ಕೆಲಸ ಮಾಡಬೇಕಾಗುತ್ತದೆ, ಇದಕ್ಕೊಂದು ವ್ಯಾಪಕ ವಾದ ಮಾಸ್ಟರ್ ಪ್ಲಾನ್ ಬೇಕಾಗುತ್ತದೆ. ಪ್ರಧಾನಮಂತ್ರಿ ಯವರು ತಮ್ಮ 2021ರ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ “ಗತಿಶಕ್ತಿ’ ನಮ್ಮ ಕೋಟ್ಯಂತರ ಜನರ ಕನಸುಗಳನ್ನು ನನಸಾಗಿಸಲು ಸಹಾಯ ಮಾಡುತ್ತದೆ ಎಂದು ಒತ್ತಿ ಹೇಳಿದರು.
ಗತಿಶಕ್ತಿ ಕಾರ್ಯಕ್ರಮವು ಇಲಾಖಾವಾದದ ಅಹಂಕಾರಗಳನ್ನು ಮುರಿದು, ನಿರ್ಧಾರ ಕೈಗೊಳ್ಳುವಿಕೆಯಲ್ಲಿ ಒಂದು ಮಾದರಿ ಬದಲಾವಣೆಯನ್ನು ತರುತ್ತದೆ. ಪ್ರಸ್ತಾವಿತ ಯೋಜನೆಯಲ್ಲಿ, ಅಸ್ತಿತ್ವದಲ್ಲಿರುವ ಮತ್ತು ಉದ್ದೇಶಿತ ಎಲ್ಲ ಆರ್ಥಿಕ ವಲಯಗಳನ್ನು ಮಲ್ಟಿಮಾಡಲ್ ಸಂಪರ್ಕ ಮೂಲಸೌಕರ್ಯದೊಂದಿಗೆ ಒಂದೇ ವೇದಿಕೆಯಲ್ಲಿ ಮ್ಯಾಪ್ ಮಾಡಲಾಗಿದೆ. ಒಟ್ಟಾರೆಯಾಗಿ ಯೋಜನೆ ಯಡಿ, ಭವಿಷ್ಯದಲ್ಲಿ ವಿವಿಧ ಸಚಿವಾಲಯಗಳ ವೈಯಕ್ತಿಕ ಯೋಜನೆಗಳನ್ನು ಪರಿಶೀಲಿ ಸಲಾಗುತ್ತದೆ ಮತ್ತು ಮಂಜೂರು ಮಾಡಲಾಗುತ್ತದೆ, ಇದು ಪ್ರಯತ್ನಗಳ ಸಮನ್ವಯಕ್ಕೆ ಕಾರಣವಾಗುತ್ತದೆ. ಗತಿಶಕ್ತಿಯು ಭಾರತದಲ್ಲಿ ವಿಶ್ವದರ್ಜೆಯ, ತಡೆರಹಿತ ಬಹು-ಮಾದರಿ ಸಾರಿಗೆ ಜಾಲವನ್ನು ಸೃಷ್ಟಿಸಲು ಸಮನ್ವಯವನ್ನು ಸಾಧಿಸುತ್ತದೆ.
ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಆಧುನಿಕ ತಂತ್ರಜ್ಞಾನ ಮತ್ತು ಮೂಲಭೂತ ಸೌಕರ್ಯಗಳ ಸಂಘಟಿತ ಯೋಜನೆಗಾಗಿ ಇತ್ತೀಚಿನ ಮಾಹಿತಿ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತದೆ. ಸಾಕ್ಷ್ಯ ಆಧರಿತ ನಿರ್ಧಾರ ತೆಗೆದುಕೊಳ್ಳಲು 200ಕ್ಕೂ ಹೆಚ್ಚು ಲೇಯರ್‌ಗಳ ಜಿಐಎಸ್ ಆಧರಿತ ಎಂಟರ್‌ಪ್ರ„ಸ್ ರಿಸೋರ್ಸ್ ಪ್ಲಾನಿಂಗ್ ಸಿಸ್ಟಮ್ ಇದಕ್ಕೊಂದು ಉದಾಹರಣೆ ಯಾಗಿದೆ. ಮೇಲ್ವಿಚಾರಣೆಗಾಗಿ ಉಪಗ್ರಹ ಚಿತ್ರಗಳ ಬಳಕೆ ಮತ್ತೂಂದು ಉದಾಹರಣೆ. ಸಕಾಲಿಕ ಅನುಮತಿ ಮತ್ತು ಸಂಭಾವ್ಯ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮತ್ತು ಯೋಜನೆಯ ಮೇಲ್ವಿಚಾರಣೆಯಲ್ಲಿ ಡಿಜಿಟಲೀಕರಣವು ದೊಡ್ಡ ಪಾತ್ರವನ್ನು ವಹಿಸುತ್ತದೆ.
ಸಮರ್ಥ ಲಾಜಿಸ್ಟಿಕ್ಸ್ ನೆಟ್‌ವರ್ಕ್ ಒಂದು ಅಗತ್ಯವಾಗಿದೆ. ಉತ್ಪಾದನೆಯಲ್ಲಿ ಹೆಚ್ಚಳ ಇನ್ನೊಂದು. ಕೈಗಾರಿಕ ಪಾರ್ಕ್‌ಗಳು ಮತ್ತು ಲಾಜಿಸ್ಟಿಕ್ಸ್ ಪಾರ್ಕ್‌ಗಳು ಜಾಗತಿಕವಾಗಿ ಸ್ಪರ್ಧಾತ್ಮಕವಾ ಗಿರಲು ಬೃಹತ್ತಾಗಿ ಬೆಳೆಯಬೇಕು. ಹಿಂದಿನ ಡಿಎಂಐಡಿಸಿ, ಈಗಿನ ರಾಷ್ಟ್ರೀಯ ಕೈಗಾರಿಕ ಕಾರಿಡಾರ್ ಅಭಿವೃದ್ಧಿ ನಿಗಮ(ಎನ್‌ಐಸಿಡಿಸಿ) ಈ ಕೈಗಾರಿಕ ಕಾರಿಡಾರ್‌ಗಳನ್ನು ಅಭಿವೃದ್ಧಿ ಪಡಿಸಲು ರಾಜ್ಯ ಸರಕಾರಗಳೊಂದಿಗೆ ನಿಕಟ ಸಮನ್ವಯದಿಂದ ಕೆಲಸ ಮಾಡುತ್ತಿದೆ. ಉದ್ಯೋಗಗಳು ಮತ್ತು ಬೆಳವಣಿಗೆಯ ಗರಿಷ್ಠ ಲಾಭವನ್ನು ಪಡೆಯುವ ರಾಷ್ಟ್ರೀಯ ಯೋಜನೆಗೆ ಅನು ಗುಣವಾಗಿ ಕೈಗಾರಿಕೀಕರಣಕ್ಕಾಗಿ ಭೂಮಿಯನ್ನು ಗುರುತಿಸುವಲ್ಲಿ ರಾಜ್ಯ ಸರಕಾರಗಳು ಮುಂದಾಗಬೇಕು.
ಅದೇ ಸಮಯದಲ್ಲಿ ನಾವು ಪ್ರಸ್ತುತ ವಾಸ್ತವಗಳನ್ನು ಪರಿಗಣಿಸಿ ಕೈಗಾರಿಕ ಕಾರಿಡಾರ್‌ಗಳಿಗೆ ಈ ಉಪಕ್ರಮ ಗಳನ್ನು ಖಚಿತಪಡಿಸಿ ಕೊಳ್ಳಬೇಕು. ಹವಾಮಾನದಲ್ಲಿ ಬದಲಾವಣೆಯಾಗುತ್ತಿದೆ. ಎಲ್ಲ ಯೋಜನೆಗಳು ಅಳವಡಿಕೆ ಮತ್ತು ತಗ್ಗಿಸುವಿಕೆಯ ತಂತ್ರಗಳನ್ನು ಒಳ ಗೊಂಡಿ ರಬೇಕು. 2030ಕ್ಕಿಂತ ಮುಂಚೆ ನಿವ್ವಳ ಶೂನ್ಯ ಇಂಗಾಲ ಸೂಸುವಿಕೆಯನ್ನು ಸಾಧಿಸುವ ಬದ್ಧತೆಯನ್ನು ಹೊಂದಿ ರುವ ಭಾರತೀಯ ರೈಲ್ವೆಯು ರೈಲ್ವೇಗಳನ್ನು ಹಸಿರೀಕರಣಗೊಳಿ ಸುವಲ್ಲಿ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. 2014ರಿಂದ ರೈಲ್ವೇ ವಿದ್ಯುದ್ದೀಕರಣವು 10 ಪಟ್ಟು ಹೆಚ್ಚಾಗಿದೆ.
ಭಾರತವು ಉತ್ಪಾದನ ಶಕ್ತಿ ಕೇಂದ್ರವಾಗಿ ಪರಿವರ್ತನೆಯಾಗಲು ಸಾಕಷ್ಟು ಕೆಲಸಗಳನ್ನು ಮಾಡಲಾಗಿದೆ. ನಿರಂತರವಾಗಿ ವ್ಯಾಪಾರದ ಸರಳಗೊಳಿಸುವಿಕೆಯು ಆರ್ಥಿಕ ಸುಧಾರಣೆ ಗಳೊಂದಿಗೆ ಔಪಚಾ ರಿಕತೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುತ್ತದೆ. ಬ್ಯಾಂಕ್ ಬ್ಯಾಲೆನ್ಸ್ ಶೀಟ್‌ಗಳನ್ನು ಸ್ವತ್ಛಗೊಳಿಸು ವುದರಿಂದ ಸಾಲದ ಲಭ್ಯತೆ ಹೆಚ್ಚುತ್ತದೆ. ದೊಡ್ಡ ಪ್ರಮಾಣದಲ್ಲಿ ಭೂಮಿಯ ಲಭ್ಯತೆಯು ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಮೂಲಸೌಕರ್ಯದಲ್ಲಿ ಸಾರ್ವಜನಿಕ ಹೂಡಿಕೆಯು ತಡೆರಹಿತ ಬಹು-ಮಾದರಿ ಮೂಲಸೌಕರ್ಯ ಜಾಲವನ್ನು ನಿರ್ಮಿಸುವ ಮೂಲಕ ಲಾಜಿಸ್ಟಿಕವೆಚ್ಚವನ್ನು ಕಡಿಮೆ ಮಾಡುತ್ತದೆ, ಆದಾಗ್ಯೂ ಇದನ್ನು ಕಾರ್ಯಗತಗೊಳಿಸಲು ವಿವಿಧ ಸರಕಾರಿ ಹಂತಗಳು ಮತ್ತು ಇಲಾಖೆಗಳಾದ್ಯಂತ ಸಮನ್ವಯದ ಅಗತ್ಯವಿರುತ್ತದೆ. ಗತಿಶಕ್ತಿ ಯೋಜನೆ ಇದನ್ನು ಸಾಧಿಸುವ ಗುರಿ ಹೊಂದಿದೆ. ವಿಶ್ವ ದರ್ಜೆಯ, ತಡೆರಹಿತ ಬಹು-ಮಾದರಿ ಸಾರಿಗೆ ಜಾಲವನ್ನು ನಿರ್ಮಿಸಲು ಸಮನ್ವಯದ ನಿರ್ಧಾರ ತೆಗೆದುಕೊಳ್ಳಲು ಇದು ನೆರವಾಗುತ್ತದೆ. ಇದನ್ನನುಸರಿಸಿ ಭಾರತವು ಪರಿವರ್ತನೆಯಾಗುತ್ತದೆ.(ಲೇಖಕರ ಅಭಿಪ್ರಾಯಗಳು ವೈಯಕ್ತಿಕವಾದುವು) ಇಂದು ಗತಿಶಕ್ತಿಗೆ ಚಾಲನೆ
ದೇಶದಲ್ಲಿ ಅನುಷ್ಠಾನದ ಹಂತದಲ್ಲಿರುವ ವಿವಿಧ ಮೂಲ ಸೌಕರ್ಯ ಯೋಜನೆಗಳಿಗೆ ಶೀಘ್ರಗತಿಯ ಚಾಲನೆ ನೀಡಲು ಪ್ರಧಾನಿ ನರೇಂದ್ರ ಮೋದಿಯವರು ಗತಿಶಕ್ತಿ ಯೋಜನೆಗೆ ಬುಧವಾರ ಚಾಲನೆ ನೀಡಲಿದ್ದಾರೆ. ಗತಿಶಕ್ತಿ ಎಂಬ ಪದದ ಅರ್ಥ ವೇಗ. ಕೇಂದ್ರ ಸರಕಾರದ ಮಟ್ಟದಿಂದ ಅಗೀಕೃತಗೊಂಡ ಯೋಜನೆ ಅತ್ಯಂತ ತಳಮಟ್ಟದ ಆಡಳಿತದಲ್ಲೂ ಜಾರಿಯಾಗಲಿದೆ. ಯಾವ ಕ್ಷೇತ್ರಗಳು?
ವಿಶೇಷ ಆರ್ಥಿಕ ವಲಯ, ಮೂಲ ಸೌಕರ್ಯ ಯೋಜನೆಗಳುರಾಷ್ಟ್ರೀಯ ಹೆದ್ದಾರಿಗಳು, ವಿಮಾನ ನಿಲ್ದಾಣಗಳು, ರೈಲ್ವೇ ಯೋಜನೆ ಗಳು, ಅನಿಲ ಪೈಪ್‌ಲೈನ್‌ಎಲೆಕ್ಟ್ರಾನಿಕ್ಸ್ ಮತ್ತು ಔಷಧೋದ್ಯಮ, ಆಹಾರ ಸಂಸ್ಕರಣೆ, ರಕ್ಷಣ ಉತ್ಪಾದನೆ, ಉನ್ನತಾಧಿಕಾರದ ಸಮಿತಿ
ಗತಿಶಕ್ತಿ ಮಾಸ್ಟರ್ ಪ್ಲಾನ್ ವ್ಯಾಪ್ತಿಯಲ್ಲಿ ಅನುಷ್ಠಾನವಾಗಲಿರುವ ಯೋಜನೆಗಳ ಮೇನೆ ನಿಗಾ ಇರಿಸಲು ರೈಲ್ವೇ ಮಂಡಳಿ ಅಧ್ಯಕ್ಷ, ರಸ್ತೆ, ಸಾರಿಗೆ ಮತ್ತು ಹೆದ್ದಾರಿಗಳು, ಬಂದರು, ನೌಕಾಯಾನ, ಜಲಸಾರಿಗೆ, ನಾಗರಿಕ ವಿಮಾನಯಾನ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಇಂಧನ, ದೂರಸಂಪರ್ಕ, ಕಲ್ಲಿದ್ದಲು, ಗಣಿ, ರಾಸಾಯನಿಕ ಮತ್ತು ರಸಗೊಬ್ಬರ, ಉಕ್ಕು, ವಿತ್ತ ಸಚಿವಾಲಯದ ಖರ್ಚು ವೆಚ್ಚಗಳ ವಿಭಾಗದ ಕಾರ್ಯದರ್ಶಿಗಳು, ವಾಣಿಜ್ಯ ವಿಭಾಗದ ಲಾಜಿಸ್ಟಿಕ್ಸ್ ವಿಭಾಗದ ಕಾರ್ಯದರ್ಶಿ.