Advertisement
ಗುವಾಂಗ್ ಝೌ ವೋಂಡೊ#à ಮತ್ತು ಝುಹೈ ಲಿವಾlನ್ ಡಯಾಗ್ನಾಸ್ಟಿಕÕ… ಎಂಬ ಈ ಎರಡು ಕಂಪೆನಿಗಳ ಕಿಟ್‌ಗಳನ್ನು ಕೋವಿಡ್ 19 ಪೀಡಿತರ ಪರೀಕ್ಷೆಗೆ ಉಪಯೋಗಿಸಬೇಡಿ ಎಂದು ಅದು ಹೇಳಿದೆ. ಚೀನದ ಈ ಎರಡೂ ಕಂಪೆನಿಗಳಿಗೆ ನೀಡಿದ್ದ ಎಲ್ಲ ಆರ್ಡರ್‌ಗಳನ್ನೂ ರದ್ದು ಮಾಡಿದ್ದೇವೆ. ಅವುಗಳಿಗೆ ಕಿಟ್‌ಗಳ ಹಣವನ್ನು ಇನ್ನೂ ಪಾವತಿಸಿಲ್ಲ. ಹೀಗಾಗಿ ಭಾರತ ಸರಕಾರದ ಬೊಕ್ಕಸಕ್ಕೆ ಒಂದೇ ಒಂದು ರೂಪಾಯಿಯೂ ನಷ್ಟವಾಗದು ಎಂದೂ ಐಸಿಎಂಆರ್ ಹೇಳಿದೆ.
ಈ ತಿಂಗಳ ಆರಂಭದಲ್ಲಿ ಚೀನದಿಂದ 5 ಲಕ್ಷ ಪರೀಕ್ಷಾ ಕಿಟ್‌ಗಳನ್ನು ಆಮದು ಮಾಡಿಕೊಳ್ಳಲಾಗಿತ್ತು. ಈ ಹಿಂದೆ ಬಳಸುತ್ತಿದ್ದ ಆರ್‌ಟಿ-ಪಿಸಿಆರ್ ಕಿಟ್‌ಗಳಲ್ಲಿ ಫಲಿತಾಂಶ ಬರಲು ವಿಳಂಬವಾದ ಕಾರಣ ರ್ಯಾಪಿಡ್ ಪರೀಕ್ಷಾ ಕಿಟ್ ತರಿಸಿಕೊಳ್ಳಲಾಗಿತ್ತು. ಆದರೆ ಅನೇಕ ರಾಜ್ಯ ಗಳು ಈ ಕಿಟ್‌ಗಳಲ್ಲಿ ಲೋಪವಿರುವುದಾಗಿ ದೂರಿದ್ದವು.