Advertisement
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಟಾರ್ ಹಾಗೂ ಇತರ ಪ್ರಮುಖರು ಮೂರು ದಿನಗಳಲ್ಲಿ 13 ಸಾವಿರಕ್ಕೂ ಅಧಿಕ ಭಕ್ತರು ಆಗಮಿಸುವ ನಿರೀಕ್ಷೆ ಇದೆ ಎಂದರು.
Related Articles
Advertisement
ಬೆಳಗಿನಿಂದ ಪ್ರಸಾದ ಸೇವೆ ನಿರಂತರ ಇರಲಿದೆ ಎಂದ ಅವರು, ಹಳೆ ಬೇರು ಹೊಸ ಚಿಗುರು ಗಾನ ವೈವಿಧ್ಯದಲ್ಲಿ ಭಾಗವತ ರಾಘವೇಂದ್ರ ಜನ್ಸಾಲೆ, ಗಾಯಕ ವಿನಾಯಕ ಮುತ್ಮುರ್ಡು, ತಬಲಾ ವಾದಕ ಲಕ್ಷ್ಮೀಶ ರಾವ್ ಕಲ್ಗುಂಡಿಕೊಪ್ಪ, ಮದ್ದಲೆವಾದಕ ಶಂಕರ ಭಾಗವತ, ವಾಯಲಿನ್ ವಾದಕ ಶಂಕರ ಕಬಾಡಿ, ಕೊಳಲು ವಾದಕ ಸಮರ್ಥ ತಂಗಾರಮನೆ, ಚಂಡೆ ವಾದಕ ಗಣೇಶ ಗಾಂವಕರ, ಹಾರ್ಮೋನಿಯಂ ವಾದಕ ಅಜಯ ವರ್ಗಾಸರ ಭಾಗವಹಿಸುವರು ಎಂದರು.
ರಾತ್ರಿ 8ಕ್ಕೆ ಉದಪಾ 2 ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಕೊಳಲುವಾದಕ ಅಮಿತ್ ನಾಡಿಗ ಸಂಯೋಜನೆಯಲ್ಲಿ ಸಿದ್ದಾರ್ಥ ಬೆಳ್ಮಣ್ಣು, ಅನೂರು ವಿನೋದ ಶ್ಯಾಮ, ಕಾರ್ತಿಕ ಮಣಿ, ರೂಪಕ ಕಲ್ಲೂರಕರ, ಸುನಾದ ಅನೂರ ಭಾಗವಹಿಸುವರು ಎಂದೂ ತಿಳಿಸಿದರು.
ಮಹಾದ್ವಾರವನ್ನು ಹೇಮಾ ಹೆಬ್ಟಾರ್, ಶ್ರೀನಿವಾಸ ಹೆಬ್ಟಾರ್, ನಿವೇದಿತಾ, ಅಕ್ಷಯ ಹೆಗಡೆ, ಅವನಿ ಜೊತೆಯಾಗಿ ನಿರ್ಮಾಣ ಮಾಡಿದ್ದಾರೆ.
ಕೊಳಗಿಬೀಸ್ ದೇವಸ್ಥಾನದಲ್ಲಿ ಮಹಾರುದ್ರಯಾಗವು 20ರ ಬೆಳಗಿನಿಂದಲೇ ಆರಂಭವಾಗಲಿದೆ. ಸಂಜೆ 5ಕ್ಕೆ ಪ್ರವೇಶ ಮಹಾದ್ವಾರದ ಅಂಗವಾಗಿ ದೇವರ ಸವಾರಿ ಉತ್ಸವ, ಮಹಾದ್ವಾರ ಮಂಟಪದಲ್ಲಿ ಕುಳಿತು ಹವನ ಜೊತೆ ಶಿಖರ ಕಳಶ ಸ್ಥಾಪನೆ ನಡೆಯಲಿದೆ. ಪ್ರವೇಶ ದ್ವಾರ ಸಮರ್ಪಣೆ ನಡೆಯಲಿದೆ. ದೇವರ ಪ್ರವೇಶ ವೇಳೆ ಪೂರ್ಣಕುಂಭ, ದೀಪಾಲಂಕಾರ, ಪಂಚವಾದ್ಯ ಜೊತೆ ನಡೆಯಲಿದೆ. 21ರಂದು 11 ಕುಂಡದಲ್ಲಿ 121 ಋತ್ವಿಜರಿಂದ ಆಹುತಿ ಸಲ್ಲಿಸುವ ಮಹಾ ರುದ್ರಯಾಗ ನಡೆಯಲಿದೆ ಎಂದೂ ವಿವರಿಸಿದರು.
ಸ್ವರ್ಣವಲ್ಲೀ ಸಂಸ್ಥಾನದ ಕರೂರು ಸೀಮಾ ಅಧ್ಯಕ್ಷ ಉಮಾಪತಿ ಭಟ್ಟ, ದೇವಸ್ಥಾನದ ಅಧ್ಯಕ್ಷ ಶ್ರೀಧರ ಹೆಗಡೆ ಇಳ್ಳುಮನೆ, ಉಪಾಧ್ಯಕ್ಷ ನರಸಿಂಹ ಹೆಬ್ಬಲಸು, ಶ್ರೀಧರ ಭಟ್ಟ ಕೊಳಗಿಬೀಸ್, ಗಿರಿಧರ ಕಬ್ನಳ್ಳಿ ಇತರರು ಇದ್ದರು.
ಭಗವಾನ್ ಶ್ರೀಧರರ, ಶ್ರೀ ಸಹಜಾನಂದ ಅವಧೂತರ ಮೂರ್ತಿ ದ್ವಾರದ ಮೇಲ್ಭಾಗದಲ್ಲಿ ಕುಳಿಸಲಾಗಿದೆ. 200 ಅಡಿ ಉದ್ದ 18 ಅಡಿ ಎತ್ತರದ ಮುಖ್ಯದ್ವಾರ ಇದಾಗಿದೆ. ಪ್ರವೇಶ ದ್ವಾರದ ಆಕರ್ಷಕ ಗೋಪುರ 30 ಅಡಿ ಎತ್ತರ ಇದೆ. ಇಷ್ಟದ ದೇವರಿಗೆ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದ್ದು ಪುಣ್ಯ. –ಶ್ರೀನಿವಾಸ ಹೆಬ್ಟಾರ, ಅಧ್ಯಕ್ಷರು ಜೀವಜಲ ಕಾರ್ಯಪಡೆ, ಶಿರಸಿ