ಗಸಗಸೆಯನ್ನು ಬಾಣಲೆಯಲ್ಲಿ ಸಣ್ಣ ಉರಿಯಲ್ಲಿ ಹುರಿದು, ಅನಂತರ ಬಾಣಲೆಗೆ ತುಪ್ಪ ಹಾಕಿ ಕಾದ ಅನಂತರ ದ್ರಾಕ್ಷಿ, ಗೋಡಂಬಿ, ಖರ್ಜೂರ, ಬಾದಾಮಿ, ಸಬ್ಬಕ್ಕಿಯನ್ನು ಹಾಕಿ ಹುರಿದುಕೊಳ್ಳಬೇಕು. ಅದು ತಣ್ಣಗಾದ ಮೇಲೆ ನೀರಿನಲ್ಲಿ ನೆನೆಹಾಕಿ ಒಂದು ಗಂಟೆಯ ಅನಂತರ ಜಾರ್‌ನಲ್ಲಿ ಗಸಗಸೆ, ಕೊಬ್ಬರಿ ತುರಿ ಹಾಗೂ ಏಲಕ್ಕಿಯನ್ನು ಸೇರಿಸಿ ನುಣ್ಣಗೆ ರುಬ್ಬಿಟ್ಟುಕೊಳ್ಳಿ. ಹಾಲು ಚೆನ್ನಾಗಿ ಕಾದ ಅನಂತರ ಕಲ್ಲುಸಕ್ಕರೆ ಹಾಕಿ ಚೆನ್ನಾಗಿ ಕುದಿಸಬೇಕು. ಅದಕ್ಕೆ ರುಬ್ಬಿದ ಮಿಶ್ರಣವನ್ನು ಸೇರಿಸಿ ಕುದಿಸಿ, ಅದಕ್ಕೆ ಸ್ವಲ್ಪ ತುಪ್ಪ ಹಾಕಿದರೆ ಗಸಗಸೆ ಹಾಲು ಸವಿಯಲು ಸಿದ್ಧವಾಗುತ್ತದೆ.
Advertisement
ಗಸಗಸೆ ಹಾಲಿನ ಉಪಯೋಗಗಳುಇದನ್ನು ಸೇವಿಸುವುದರಿಂದ ಗ್ಯಾಸ್ಟ್ರಿಕ್, ನಿದ್ರಾಹೀನತೆ, ಆಯಾಸ, ದಣಿವು ದೂರವಾಗಿ ಚೆನ್ನಾಗಿ ನಿದ್ದೆ ಬರುತ್ತದೆ.
•••ಗಸಗಸೆ- 100 ಗ್ರಾಂ
•••ದ್ರಾಕ್ಷಿ- 50 ಗ್ರಾಂ
•••ಗೋಡಂಬಿ- 50ಗ್ರಾಂ
•••ಖರ್ಜೂರ- 50ಗ್ರಾಂ
•••ಬಾದಾಮಿ: 50 ಗ್ರಾಂ
•••ಕಲ್ಲು ಸಕ್ಕರೆ- 1 ಕೆಜಿ
•••ಕೊಬ್ಬರಿ ತುರಿ- 1 ಬಟ್ಟಲು
•••ಏಲಕ್ಕಿ- 10ಗ್ರಾಂ
•••ಸಬ್ಬಕ್ಕಿ- 100 ಗ್ರಾಂ
•••ಹಾಲು- 2ಲೀಟರ್
•••ತುಪ್ಪ- 200 ಗ್ರಾಂ ••••ಮಧುಸೂದನ್ ಡಿ. ನಾಗೇನಹಳ್ಳಿ