Advertisement

ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ಸ್ಫೋಟ; ಮೂರು ಬಸ್ ಗಳು ಭಸ್ಮ

03:52 PM Oct 27, 2022 | Team Udayavani |

ಡುಮ್ಕಾ : ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ಸ್ಫೋಟ ಸಂಭವಿಸಿ ಭೀಕರ ಅವಘಡ ಗುರುವಾರ ಜಾರ್ಖಂಡ್ ನಲ್ಲಿ ಸಂಭವಿಸಿದೆ.

Advertisement

ಸ್ಪೋಟಗೊಂಡ ಪರಿಣಾಮ ಸ್ಥಳದಲ್ಲಿ ಪಾರ್ಕ್ ಮಾಡಲಾಗಿದ್ದ ಕನಿಷ್ಠ ಮೂರು ಬಸ್ ಗಳು, ಮರ ಗಿಡಗಳು ಸುತ್ತು ಭಸ್ಮವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಹಂಸ್ದಿಹಾ ಸಮೀಪದ ಧಾವತಾಂಡ್ ಪ್ರದೇಶದಲ್ಲಿ ಪಶ್ಚಿಮ ಬಂಗಾಳದ ಪುರ್ಬಾ ಮೇದಿನಿಪುರ ಜಿಲ್ಲೆಯ ಹಲ್ದಿಯಾಗೆ ತೆರಳುತ್ತಿದ್ದ ಟ್ಯಾಂಕರ್ ಪಲ್ಟಿಯಾಗಿ ರಾಜ್ಯ ಹೆದ್ದಾರಿ 17 ರಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಂಬರ್ ಲಾಕ್ರಾ ಪಿಟಿಐಗೆ ತಿಳಿಸಿದ್ದಾರೆ.ತಕ್ಷಣಕ್ಕೆ ಯಾವುದೇ ಪ್ರಾಣಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next