Advertisement

Surathkal ಬಿಪಿಸಿಎಲ್‌ಗೆ ಗ್ಯಾಸ್‌ ಪೂರೈಕೆ ಒಪ್ಪಂದ

11:45 PM Feb 04, 2024 | Team Udayavani |

ಸುರತ್ಕಲ್‌: ದೇಶದ ಮಿನಿ ರತ್ನ ಕಂಪೆನಿಯಾದ ಎಂಆರ್‌ಪಿಎಲ್‌ ಬಿಪಿಸಿಎಲ್‌ನೊಂದಿಗೆ 5 ವರ್ಷಗಳ ಕಾಲ ಗ್ಯಾಸ್‌ ಪೂರೈಕೆಯ ಒಪ್ಪಂದ ತಿಳುವಳಿಕೆ ಪತ್ರಕ್ಕೆ ಸಹಿ ಹಾಕುವ ಮೂಲಕ ಹಸುರು ಇಂಧನ ಉತ್ಪಾದನೆ, ಬಳಕೆಯ ಮೂಲಕ ಪರಿಸರ ಸಹ್ಯ ಕ್ರಮಕ್ಕೆ ಮುಂದಾಗಿದೆ.]]

Advertisement

ಬಯೋ-ಎಟಿಎಫ್‌ ಸ್ಥಾವರವನ್ನು ಸ್ಥಾಪಿಸಲು ಕ್ರಮಗಳನ್ನು ತೆಗೆದುಕೊಳ್ಳುವುದರ ಜತೆಗೆ, ಹಸಿರು ಹೈಡ್ರೋಜನ್‌ ಉತ್ಪಾದನೆ ಮತ್ತು ಗ್ರಿಡ್‌ನಿಂದ ಹಸಿರು ವಿದ್ಯುತ್‌ ಶಕ್ತಿಯನ್ನು ಸೋರ್ಸಿಂಗ್‌ ಮಾಡುವುದರ ಜತೆಗೆ ಬಿಪಿಸಿಎಲ್‌ ಜತೆಗೆ ದೀರ್ಘಾವಧಿ ಒಪ್ಪಂದ ಇದಾಗಿದೆ.

ಎಂಆರ್‌ಪಿಎಲ್‌ನ ಜಿಜಿಎಂ ಸತ್ಯನಾರಾಯಣ ಎಚ್‌ಸಿ ಮತ್ತು ಬಿಪಿಸಿಎಲ್‌ನ ಜಿಜಿಎಂ ಸಂತೋಷ್‌ ಸೊಂಟಕ್ಕೆ ಅವರು ಎಂಆರ್‌ಪಿಎಲ್‌ ಹಣಕಾಸು ನಿರ್ದೇಶಕರಾದ ವಿವೇಕ್‌ ಟೊಂಗಾಂವ್ಕರ್‌ ಮತ್ತು ಬಿಪಿಸಿಎಲ್‌ನ ಇಂಧನ ವಿಭಾಗದ ಇಡಿ ಅನಿಲ್‌ ಕುಮಾರ್‌ ಅವರ ಉಪಸ್ಥಿತಿಯಲ್ಲಿ ಒಪ್ಪಂದಕ್ಕೆ ಸಹಿ ಹಾಕಿದರು. ಹಿರಿಯ ಅಧಿಕಾರಿಗಳಾದ ಬಿಎಚ್‌ವಿ ಪ್ರಸಾದ್‌, ಶ್ಯಾಮ್‌ ಪ್ರಸಾದ್‌ ಕಾಮತ್‌, ಬಿಪಿಸಿಎಲ್‌ನ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.ಕಚ್ಚಾ ತೈಲವನ್ನು ಸಂಸ್ಕರಿಸುವಲ್ಲಿ ಅನಿಲವು ಮಹತ್ವದ ಪಾತ್ರ ವಹಿಸುತ್ತದೆ. ಫೀಡ್‌ ವೆಚ್ಚವನ್ನು ಕಡಿಮೆ ಮಾಡುವ ಜತೆಗೆ, ಇಂಧನವನ್ನು ಉತ್ತಮಗೊಳಿಸುತ್ತದೆ ಮತ್ತು ಸಂಸ್ಕರಣಾಗಾರದಿಂದ ಹೊಗೆಯ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next