ವಾಷಿಂಗ್ಟನ್ : ಸಿಕ್ಖ್ ವ್ಯಕ್ತಿಗೆ ಸೇರಿದ ಗ್ಯಾಸ್ ಸ್ಟೇಶನ್ ಮೇಲೆ ಮುಖವಾಡ ಧರಿಸಿದ ದುಷ್ಕರ್ಮಿಗಳು ದಾಳಿ ಮಾಡಿ ಹಾನಿಗೈದು ಜನಾಂಗೀಯ ನಿಂದನೆಯ ಘೋಷಣೆಗಳನ್ನು spray paint ಮೂಲಕ ಬರೆದು ವಿರೂಪ ಗೊಳಿಸಿದ ಘಟನೆ ಅಮೆರಿಕದ ಕೆಂಟುಕಿಯಿಂದ ವರದಿಯಾಗಿದೆ.
ಗ್ಯಾಸ್ ಸ್ಟೇಶನ್‌ಮಾಲಕ ಗಾರಿ ಸಿಂಗ್ ಅವರಿಗೆ ಈ ಘಟನೆಯಿಂದ ತೀವ್ರ ಆಘಾತವಾಗಿದೆ. ಕೆಂಟುಕಿ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಸಿಸಿಟಿವಿ ಕ್ಯಾಮೆರಾ ಮೂಲಕ ದಾಖಲಾದ ಚಿತ್ರಿಕೆಗಳನ್ನು ಆಧರಿಸಿ ಈ ಜನಾಂಗೀಯ ವೈಷಮ್ಯದ ದಾಳಿಯ ವರದಿ ಮಾಡಿರುವ ಟಿವಿ ಚ್ಯಾನಲ್ ರಾತ್ರಿ ಸುಮಾರು 11.30ರ ಸುಮಾರಿಗೆ ಮುಸುಕು ಧಾರಿ ವ್ಯಕ್ತಿಗಳು ಗ್ಯಾಸ್ ಸ್ಟೇಶನ್ ಬಳಿಗೆ ಹೋಗಿ ಅದನ್ನು ಧ್ವಂಸ ಮಾಡಿ ಜನಾಂಗೀಯ ನಿಂದನೆಯ ಘೋಷಣೆಗಳನ್ನು ಸ್ಪ್ರೆà ಪೇಂಟ್ ಮೂಲಕ ಬರೆದಿರುವುದನ್ನು ತೋರಿಸಿವೆ.