Advertisement
ದುರಂತವೆಂದರೆ ಜನರು ಹಿಂಜರಿಯುತ್ತಿದ್ದಾರೆ. ಕಾನೂನುಬದ್ಧ ಹೋರಾಟಕ್ಕಿಳಿಯುವುದು ಎಂದರೆ ಸಮಾಜದಲ್ಲಿ ಸಣ್ಣವರಾಗುತ್ತೇವೆ ಎಂಬ ಹುಸಿ ಆತಂಕದಲ್ಲಿದ್ದೇವೆ. ಹಾಗಾಗಿ ಅವನ್ನು ಬಳಸಿಕೊಳ್ಳುತ್ತಿಲ್ಲ. ಈ ನಿಟ್ಟಿನಲ್ಲಿ, ಈ ಬಾರಿ ಗ್ರಾಹಕನ ಕೈಯಲ್ಲಿರುವ ಆಯುಧದ ಉದಾಹರಣೆ ಇಲ್ಲಿದೆ. ಇದರ ಸ್ಫೂರ್ತಿಯಿಂದ ನೀವು ಮುನ್ನಡೆದರೆ ಮತ್ತು ಈ ಹವಾ ಸಾಮೂಹಿಕವಾದರೆ ಗ್ರಾಹಕ ಚಳವಳಿ ಇನ್ನೊಂದು ಮಗ್ಗುಲಿಗೆ ಹೊರಳಿದಂತಾಗುತ್ತದೆ!
ಗ್ಯಾಸ್ ಸಿಲೆಂಡರ್‌ಅನ್ನು ಮನೆಗೆ ತಂದುಕೊಡುವ ಗ್ಯಾಸ್ ಏಜೆನ್ಸಿ ಹುಡುಗನಿಗೆ ಸಾಗಾಣಿಕೆ ಶುಲ್ಕವನ್ನು ಗ್ರಾಹಕ ಕೊಡಬೇಕಾಗಿಲ್ಲ. ಗ್ಯಾಸ್ ಸಿಲೆಂಡರ್‌ನ ಎಂಆರ್‌ಪಿ ಜೊತೆಯಲ್ಲಿಯೇ ಸಾಗಾಣಿಕೆ ಶುಲ್ಕ 8 ರೂ.ಅನ್ನು ಸೇರಿಸಲಾಗಿತ್ತು. ಅಂದರೆ ಸಿಲೆಂಡರ್ ತಂದುಕೊಟ್ಟವನಿಗೆ ಗ್ಯಾಸ್ ಏಜೆನ್ಸಿಯವರು ಹಣ ಕೊಡಬೇಕೇ ವಿನಃ ಗ್ರಾಹಕ ನಯಾ ಪೈಸೆ ಕೊಡಬೇಕಾಗಿಲ್ಲ! ಮಾಹಿತಿ ಪಡೆದ ರಾಮಸ್ವಾಮಿ ತಮ್ಮ ಮನೆಗೆ ಸಿಲೆಂಡರ್ ತಂದಾತ ಹಣ ಕೇಳಿದಾಗ ಈ ಹೆಚ್ಚುವರಿ ಹಣ ಕೊಡಲು ನ್ಯಾಯಬದ್ಧವಾಗಿ ನಿರಾಕರಿಸಿದರು. ಊಹೂn, ತಂದಾತ ಗಲಾಟೆ ಮಾಡಿ ಹಣ ವಸೂಲಿ ಮಾಡಿದ. ಅವತ್ತೇ ರಾಮಸ್ವಾಮಿ ಅಡುಗೆ ಅನಿಲ ಕಂಪನಿಯ ವೆಬ್‌ಸೈಟ್‌ಗೆ ಭೇಟಿ ಕೊಟ್ಟು, ಈ ಕುರಿತು ದೂರು ದಾಖಲಿಸಿದರು. ಫಲಿತಾಂಶ, ಗ್ಯಾಸ್ ಕಂಪನಿ ಏಜೆನ್ಸಿ ಮಾಲೀಕರು ಕ್ಷಮೆಯಾಚಿಸಿದರು. ಇವರು ಕೊಟ್ಟ ಹೆಚ್ಚುವರಿ 8 ರೂ.ಅನ್ನು ಅದೇ ಗ್ಯಾಸ್ ಸಿಲೆಂಡರ್ ಕೊಟ್ಟಾತ ಮನೆಗೆ ಬಂದು ಮರಳಿಸಿದ. ಮತ್ತದೇ ಬೇಸರವನ್ನು ಹೇಳಲೇಬೇಕು. ಅಂದು ಸಿಲೆಂಡರ್‌ನ ಎಂಆರ್‌ಪಿ ಮಾತ್ರ ಕೊಟ್ಟ ರಾಮಸ್ವಾಮಿ ಇವತ್ತೂ ಒಂದು ಪೈಸೆ ಹೆಚ್ಚಿಗೆ ಕೊಡುತ್ತಿಲ್ಲ. ಆದರೆ ಉಳಿದವರೆಲ್ಲರೂ ತುಟಿ ಪಿಟಿಕ್ ಎನ್ನದೆ ಎಂಆರ್‌ಪಿ ಮೇಲೆ 30-40 ರೂ.ವರೆಗೂ ಕೊಡುತ್ತಲೇ ಇದ್ದಾರೆ.
Related Articles
Advertisement
ಕೆಲವೊಮ್ಮೆ ನೌಕರರ ಮುಷ್ಕರ, ವಾಹನಗಳ ಮುಷ್ಕರ ಇನ್ನಿತರ ಕಾರಣಗಳಿಗಾಗಿ ಮನೆ ಬಾಗಿಲಿಗೆ ಸಿಲೆಂಡರ್ ತರಿಸಲು ಸಾಧ್ಯವಾಗದ ಪಕ್ಷದಲ್ಲಿ ಗ್ರಾಹಕ ಸ್ವಂತ ವ್ಯವಸ್ಥೆಯಲ್ಲಿ ಸಿಲೆಂಡರ್ ಒಯ್ಯಬಹುದು. ಅಂತಹ ಸಂದರ್ಭಗಳಲ್ಲಿ ವಿತರಕರು ಸಾಗಾಣಿಕೆ ವೆಚ್ಚವೆಂದು ಸಿಲೆಂಡರಿನ ದರದಲ್ಲಿ 18 ರೂ. ರಿಯಾಯಿತಿ ನೀಡುವುದು ಕಡ್ಡಾಯ.
ಗ್ಯಾಸ್ ಕಂಪನಿಗಳ ಇನ್ನೊಂದು ಹಗಲು ದರೋಡೆಯನ್ನೂ ನಾವು ವಿವರಿಸಲೇಬೇಕು. ಹೊಸ ಸಂಪರ್ಕ ಪಡೆಯುವಾಗ ಅವರದೇ ಒಲೆ ಪಡೆಯಬೇಕು ಎಂದು ಷರತ್ತು ಹಾಕಲಾಗುತ್ತದೆ. ಈ ವಿಚಾರವಾಗಿ ಮತ್ತೆ ನಿಯಮಗಳನ್ನೇ ಗಮನಿಸಿ, ಹೊಸ ಸಂಪರ್ಕದ ವೆಚ್ಚ, ಒಂದು ಸಿಲೆಂಡರಿಗೆ ವಾಪಸ್ಸು ಪಡೆಯಬಹುದಾದ ಠೇವಣಿ 1,450 ರೂ. ಎರಡು ಸಿಲೆಂಡರಿಗಾದಲ್ಲಿ 2,900 ರೂ. ರೆಗ್ಯುಲೇಟರ್‌ಗೂ ಸಹ ವಾಪಸ್ಸು ಪಡೆಯಬಹುದಾದ ಹಣ 150 ರೂ. ಮಾತ್ರ. ಹೊಸ ಸಂಪರ್ಕ ಪಡೆಯುವಾಗ ಒಮ್ಮೆ ಮಾತ್ರ ತಪಾಸಣಾ ವೆಚ್ಚ, ಮೆಕ್ಯಾನಿಕಲ್ ಚಾರ್ಜು ಎಲ್ಲಾ ಸೇರಿ 550 ರೂ. ಪಡೆಯಲಾಗುತ್ತದೆ. ಸ್ಟೌವ್ ಅನ್ನು ವಿತರಣಾ ಏಜೆನ್ಸಿಯಿಂದಲೇ ಪಡೆಯಬೇಕೆಂಬ ಕಡ್ಡಾಯವೇನಿಲ್ಲ. ಬೇರೆ ಅಂಗಡಿಗಳಲ್ಲಿ ಅದೇ ಸ್ಟೌವ್ ಇನ್ನೂ ಕಡಿಮೆ ದರಕ್ಕೆ ಸಿಗುತ್ತದೆ. ಅಡುಗೆ ಅನಿಲದ ಪರಿಣಾಮಕಾರಿ ಉಳಿತಾಯಕ್ಕೋಸ್ಕರ ಗ್ಯಾಸ್ ಕಂಪನಿಗಳು ಕೆಲವೊಂದು ಗ್ರೀನ್ ಲೇಬಲ್ ಸ್ಟೌವ್ ತಯಾರಿಕಾ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡು ಅಂತಹ ಸ್ಟೌವ್‌ಗಳನ್ನು ಅಡುಗೆ ಅನಿಲ ವಿತರಕರ ಮೂಲಕ ಮಾತ್ರ ಕೊಡಲಾಗುತ್ತದೆ. ಓಪನ್ ಮಾರುಕಟ್ಟೆಯಲ್ಲಿ ಅದು ದೊರೆಯುವುದಿಲ್ಲ ಎಂದು ಕಂಪನಿಗಳು ಹೇಳಿಕೊಳ್ಳುತ್ತವೆ. ಹಾಗಿದ್ದೂ ಅದನ್ನೇ ಪಡೆಯಬೇಕೆಂಬ ಕಡ್ಡಾಯವಿಲ್ಲ. ಇತ್ತೀಚೆಗಿನ ಒಂದು ಪ್ರಕರಣದಲ್ಲಿ ಸಿಲೆಂಡರ್ ಮಾಲೀಕರ ಹೆಸರಿನ ಸಮಸ್ಯೆಯಿಂದಾಗಿ ಆ ಗ್ರಾಹಕ ಅದನ್ನು ವಾಪಾಸು ಮಾಡಿ ತನ್ನ ಹೆಸರಿಗೆ ಹೊಸದಾಗಿ ಖರೀದಿ ಮಾಡಲು ನಿರ್ಧರಿಸುತ್ತಾರೆ. ಕೇವಲ ಒಂದು ವರ್ಷ ಹಿಂದೆ ಏಜೆನ್ಸಿ ಷರತ್ತಿನಂತೆ ಅವರದೇ ಗ್ಯಾಸ್ ಒಲೆ ಖರೀದಿಸಿದ್ದು ಲೆಕ್ಕಕ್ಕಿಲ್ಲ. ಮತ್ತೆ ಅನಿಲ ಸಂಪರ್ಕಕ್ಕೆ ಮತ್ತೂಮ್ಮೆ ಒಲೆ ಖರೀದಿಸಲೇಬೇಕು ಎಂಬುದು ಅವರ ತಾಕೀತು. ಆನ್‌ಲೈನ್ ದೂರು ಕೊಡುವುದನ್ನು ಕಂಪನಿಗಳೇ ಅನಿವಾರ್ಯ ಮಾಡಿದರೆ ಏನು ಮಾಡುವುದು? ವರ್ಷಗಳ ಕೆಳಗೆ ಮೊಬೈಲ್ ನಂಬರ್ ಪೋರ್ಟಬಿಲಿಟಿಯ ಅವಕಾಶವನ್ನು ದೂರವಾಣಿ ನಿಯಂತ್ರಣ ಪ್ರಾಧಿಕಾರ ತಂದಿರುವುದರಿಂದ ಕ್ರಾಂತಿಕಾರಕ ಬದಲಾವಣೆ ಆಗಿರುವುದು ನಿಚ್ಚಳ. ದೂರವಾಣಿ ಸೇವಾದಾತರ ಸೇವಾ ಗುಣಮಟ್ಟ, ಆಫರ್‌ಗಳ ಆಕರ್ಷಣೆ ಹೆಚ್ಚಿದೆ. ಕರೆ ದರ ನಿಯಂತ್ರಣದಲ್ಲಿದೆ. ಇಲ್ಲದಿದ್ದರೆ ಒಂದು ಕಂಪನಿಯ ಇನ್ನೊಂದು ಕಂಪನಿಗೆ ಪûಾಂತರ ಮಾಡುತ್ತಾನೆ. ಇಂತದೇ ನಿಯಮ ಬ್ಯಾಕಿಂಗ್ ಕ್ಷೇತ್ರ, ಡೈರೆಕ್ಟ್ ಟು ಹೋಂ ಸೇವೆಗಳ ಚಾರದಲ್ಲಿಯೂ ಬಂದರೆ ಕ್ಷೇತ್ರದಲ್ಲಿ ಸ್ಪರ್ಧಾತ್ಮಕ ವಾತಾವರಣ ಸೃrಯಾಗುತ್ತದೆ ಎಂಬುದನ್ನು ಎಲ್ಲ ಗ್ರಾಹಕರೂ ವಾದಿಸುತ್ತಾರೆ.
ಆದರೆ ಈಗಾಗಲೇ ಗ್ಯಾಸ್ ಸಿಲೆಂಡರ್ ಕ್ಷೇತ್ರದಲ್ಲಿ ಪೋರ್ಟಬಿಲಿಟಿ ಇದೆ ಎಂಬುದು ಎಷ್ಟು ಜನರಿಗೆ ಗೊತ್ತು? ಈಗ ಬಂದಿದೆ ಎಲ್‌ಪಿಜಿ ಪೊರ್ಟಬಿಲಿಟಿ
ಗ್ಯಾಸ್ ಸಿಲಿಂಡರ್ ಒದಗಿಸುತ್ತಿರುವ ಡಿಸ್ಟ್ರಿಬ್ಯೂಟರ್‌ನ ಸೇವೆ ನಮಗೆ ತೃಪ್ತಿದಾಯಕವಾಗಿಲ್ಲ ಎನ್ನಿಸಿದರೆ ಯೋಚಿಸಬೇಕಿಲ್ಲ. ಈಗ ಇಚ್ಚಿಸಿದ ಆಯಿಲ್ ಕಂಪನಿಯ ಡಿಸ್ಟ್ರಿಬ್ಯೂಟರ್‌ನಿಂದ ಸಿಲೆಂಡರ್ ಪಡೆಯಬಹುದು. ಗ್ಯಾಸ್ ಸಿಲೆಂಡರ್ ಸರಬರಾಜುದಾರರು ಹಾಗೂ ಅವರ ಕಂಪನಿಗಳು ಗ್ರಾಹಕ ಸ್ನೇಹಿಯಾಗಿ ಆರೋಗ್ಯಕರ ಪೈಪೋಟಿ ನಡೆಸಲು ಈ ಕ್ರಮ ಕೈಗೊಳ್ಳಲಾಗಿದೆಯೆಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ. ಕೇಂದ್ರದ ಪೆಟ್ರೋಲಿಯಂ ಇಲಾಖೆ ಜನವರಿ 2014ರ 22ರಂದು ಈ ಒಂದು ಸೇವೆಯನ್ನು ರಾಷ್ಟ್ರಾದ್ಯಂತ ಜಾರಿಗೆ ತಂದಿದ್ದಾರೆ. ಆದರೆ ಇದು ಹೊಸತಲ್ಲ.
ಈ ಯೋಜನೆ ಪ್ರಾಯೋಗಿಕವಾಗಿ 2013ರ ಅಕ್ಟೋಬರಿನಲ್ಲಿ ದೇಶದ 13 ರಾಜ್ಯಗಳ 24 ಜಿಲ್ಲೆಗಳಲ್ಲಿ ಜಾರಿಗೆ ತರಲಾಗಿತ್ತು. ಅಂದರೆ ದೇಶದ 480 ಜಿಲ್ಲೆಗಳ 8.2 ಕೋಟಿ ಎಲ್‌ಪಿಜಿ ಗ್ರಾಹಕರು ಈ ಯೊಜನೆಯನ್ನು ಬೇಕಿದ್ದಲ್ಲಿ ಬಳಸಿಕೊಳ್ಳಬಹುದು. ಪೋರ್ಟಬಿಲಿಟಿ ಮಾಡುವ ಧಾನ:
ತುಂಬಾ ಸರಳ ವಿಧಾನ. ಆದರೆ ಅಂತಜಾìಲ ಅವಶ್ಯಕವಾಗಿ ಬೇಕು. ಸಿಲೆಂಡರ್ ಗ್ಯಾಸ್ ಸರಬರಾಜು ಕಂಪನಿಯ ವೆಬ್‌ಸೈಟಿಗೆ ಲಾಗ್‌ಆನ್ ಆಗಬೇಕು. ವೆಬ್ ವಿಳಾಸಗಳು ಇಂತಿವೆ,
-ಇಂಡಿಯನ್ ಆಯಿಲ್ ಕಾರ್ಪೊರೇಷನ್ [IOCL] -www.indane.co.in,
-ಹಿಂದೂಸ್ಥಾನ್ ಪೆಟ್ರೋಲಿಯಮ್ ಕಾರ್ಪೊàರೇಷನ್ ಲಿ [HPCL] -www.hpgas.com
– ಭಾರತ್ ಪೆಟ್ರೋಲಿಯಮ್ ಕಾರ್ಪೊàರೇಷನ್ ಲಿ [BPCL]- www.ebharatgas.com
-ಮೊದಲನೆಯದಾಗಿ ನಮ್ಮ ಹೆಸರಿನಲ್ಲಿ ಯೂಸರ್ ನೇಮ್ ಮತ್ತು ಪಾಸ್‌ವರ್ಡ್ ಮೂಲಕ ಅಥವಾ ಅಲ್ಲಿಯೇ ಅದನ್ನು ಹೊಸದಾಗಿ ರಿಜಿಸ್ಟರ್ ಮಾಡಿಕೊಂಡು ಲಾಗಿನ್ ಆಗಬೇಕು.
– ಲಾಗಿನ್ ಆದ ನಂತರ ಕ್ಲಸ್ಟರ್‌ನಲ್ಲಿರುವ ಬೇರೆ ಬೇರೆ ಸರಬರಾಜುದಾರರ ವಿವರ ಹಾಗೂ ಅವರು ಸಿಲಿಂಡರ್ ರೀಫಿಲ್ ಸರಬರಾಜು ಮಾಡುವಲ್ಲಿನ ಫರ್‌ಫಾರ್ಮೆನ್ಸ್ ಆಧಾರದ ಮೆಲೆ ಅವರವರ ಸ್ಟಾರ್‌ರೇಟಿಂಗ್‌ನ್ನು ನೀಡಿರುತ್ತಾರೆ. ನಿಮಗೆ ಒಪ್ಪುವ ಗ್ಯಾಸ್ ಸಿಲೆಂಡರ್ ಸರಬರಾಜುದಾರರನ್ನು ಅಲ್ಲಿ ಆಯ್ಕೆ ಮಾಡಿಕೊಳ್ಳಬಹುದು.
– ನಿಮ್ಮ ಆಯ್ಕೆಯ ಬಗ್ಗೆ ಮತ್ತು ಮುಂದಿನ ಹಂತಗಳ ಬಗ್ಗೆ ನೀವು ನೋಂದಾಯಿಸಿದ ಇ- ಮೇಲ್‌ಗೆ ಸೂಚನೆ ಕಳುಹಿಸುತ್ತಾರೆ.
– ಒಂದೊಮ್ಮೆ ನೀವು ಆಯ್ಕೆಮಾಡಿಕೊಂಡ ಸರಬರಾಜುದಾರ ಅದೇ ಕಂಪನಿಯ ಬೇರೊಬ್ಬ ಸರಬರಾಜುದಾರನಾಗಿದ್ದಲ್ಲಿ, ಇ-ಮೇಲ್ ಸೂಚನೆಯ ಪ್ರತಿಯನ್ನು ಹೊಸ ಸರಬರಾಜುದಾರನಿಗೆ ನೀಡಿದರಾಯಿತು.
– ನಿಮ್ಮ ಆಯ್ಕೆಯ ಸರಬರಾಜುದಾರ ಬೇರೊಂದು ಕಂಪನಿಯವನಾಗಿದ್ದಲ್ಲಿ ನಿಮ್ಮಲ್ಲಿರುವ ಗ್ಯಾಸ್ ಸಿಲಿಂಡರಿನ ರೆಗ್ಯುಲೇಟರ್ ಹಾಗೂ ಸಿಲೆಂಡರ್ ಹೊಸ ಕಂಪನಿಯ ಉಪಕರಣಗಳಿಗಿಂತ ಭಿನ್ನವಾಗಿರುವುದರಿಂದ ಅದನ್ನು ಮೊದಲ ಕಂಪನಿಗೆ ಸರೆಂಡರ್ ಮಾಡಿ, ಅವರಿಂದ ಡೆಪಾಸಿಟ್ ಹಣ ಹಾಗೂ ಅದರ ದಾಖಲೆ ಹಿಂಪಡೆದು ಅದನ್ನು ಹೊಸ ಸರಬರಾಜು ಕಂಪನಿಗೆ ನೀಡಿ ಹೊಸ ಉಪಕರಣ ಪಡೆಯಬೇಕು. ಈ ಪ್ರಕ್ರಿಯೆಗೆ ಕಂಪನಿಯು ಗ್ರಾಹಕರಿಂದ ಯಾವ ಶುಲ್ಕವನ್ನು ಪಡೆಯುವಂತಿಲ್ಲ. – ಮಾ.ವೆಂ.ಸ.ಪ್ರಸಾದ್ ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ