Advertisement

ಮನೆ-ಮನೆಗೆ ಪೈಪ್‌ ಮೂಲಕ ಅಡುಗೆ ಅನಿಲ : ತಿಂಗಳೊಳಗೆ ಪ್ರಾಯೋಗಿಕ ಪೂರೈಕೆ

02:34 PM Feb 21, 2022 | Team Udayavani |

ಮಹಾನಗರ : ಸ್ಮಾರ್ಟ್‌ ಸಿಟಿ ಕನಸಿನಲ್ಲಿರುವ ಮಂಗಳೂರಿನ ಮನೆ – ಮನೆಗೆ ಅಡುಗೆ ಅನಿಲವನ್ನು ಪೈಪ್‌ ಮೂಲಕ ವಿತರಿಸುವ ಮಹತ್ವದ ಯೋಜನೆ ನಗರ ವ್ಯಾಪ್ತಿಯಲ್ಲಿ ಪೂರ್ಣ
ಮಟ್ಟದಲ್ಲಿ ಜಾರಿಯಾಗಲು ಇನ್ನೂ ಹಲವು ಸಮಯ ಅಗತ್ಯವಿದೆ. ಆದರೆ ಪ್ರಾಯೋಗಿಕವಾಗಿ ಪಣಂಬೂ ರಿನ ಎನ್‌ಎಂಪಿಟಿ ಕಾಲನಿಯ ಸುಮಾರು 70 ಮನೆ ಗಳಿಗೆ 1 ತಿಂಗಳ ಒಳಗೆ ಗ್ಯಾಸ್‌ ಪೂರೈಕೆ ಆರಂಭಿಸಲು ಚಿಂತನೆ ನಡೆಯುತ್ತಿದೆ.

Advertisement

ನಗರದಲ್ಲಿ ಸದ್ಯ 1 ಲಕ್ಷ ಮನೆಗಳನ್ನು ಗೈಲ್‌ ಗ್ಯಾಸ್‌ನವರು ನೋಂದಣಿ ಮಾಡಿಕೊಂಡಿದ್ದಾರೆ. ಆದರೆ ಪೈಪ್‌ಲೈನ್‌ ಸಂಪರ್ಕ ಆಗಿರುವುದು ಮಾತ್ರ ಕೇವಲ 17,800 ಮನೆಗಳಿಗೆ ಮಾತ್ರ. ನಗರದಲ್ಲಿ ಇನ್ನೂ ಪೈಪ್‌ಲೈನ್‌ ಕೆಲಸ ಪೂರ್ಣವಾಗದ ಕಾರಣ ಮನೆ ಮನೆಗೆ ಗ್ಯಾಸ್‌ ಪೂರೈಕೆ ಒಂದು ಹಂತ ತಲುಪುವುದಕ್ಕೆ ಕನಿಷ್ಠ 1 ವರ್ಷವಾದರೂ ಬೇಕು!

ಪಣಂಬೂರಿನ ಎನ್‌ಎಂಪಿಟಿ ಕಾಲನಿಯ ಸುಮಾರು 70 ಮನೆಗಳಿಗೆ ಗ್ಯಾಸ್‌ ಸರಬರಾಜು ಮಾಡುವ ನೆಲೆ ಯಲ್ಲಿ ಗೈಲ್‌ ಸಂಸ್ಥೆಯವರು ಸಿದ್ಧತೆ ಮಾಡಿಕೊಂಡಿದ್ದಾರೆ. ಇದಕ್ಕಾಗಿ ಇಲ್ಲಿನ ಕಾಲನಿಯಲ್ಲಿ ಪೈಪ್‌ಲೈನ್‌ ಕಾಮಗಾರಿ ಹಾಗೂ ಇತರ ಜೋಡಣೆ ಕಾಮಗಾ ರಿಗೆ ವೇಗ ನೀಡಲಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ 1 ತಿಂಗಳ ಒಳಗೆ ಇಲ್ಲಿಗೆ ಪ್ರಾಯೋಗಿಕ ಗ್ಯಾಸ್‌ ಪೂರೈಕೆ ಆಗಲಿದೆ. ಮಣ್ಣಗುಡ್ಡೆ, ಲೇಡಿಹಿಲ್‌, ಉರ್ವ ಭಾಗಗಳಲ್ಲಿ ಪೈಪ್‌ಲೈನ್‌ ಸಂಪರ್ಕ ಪೂರ್ಣಗೊಂಡಿದೆ. ಅಲ್ಲಿಗೆ ಪ್ರಾರಂಭಿಕ ಹಂತದಲ್ಲಿ ಗ್ಯಾಸ್‌ ಪೂರೈಕೆ ಮಾಡಲೂಬಹುದು ಎಂಬುದು ಅಧಿಕಾರಿಗಳ ಲೆಕ್ಕಾಚಾರ.

ನಗರದ ಕೆಲವು ಕಡೆಗಳಲ್ಲಿ ರಸ್ತೆಯ ಒಂದು ಬದಿಯ ಕೆಲವು ಮೀಟರ್‌ಗಳ ಅಂತರದಲ್ಲಿ ಕಾಂಕ್ರೀಟ್‌ ರಸ್ತೆ ಕತ್ತರಿಸಿ ಗುಂಡಿ ನಿರ್ಮಿಸಿ, ಅಡ್ಡಲಾಗಿ ಪೈಪ್‌ ಅಳವಡಿಸಲಾಗುತ್ತಿದೆ. ಇದಕ್ಕಾಗಿ ಎಚ್‌ಡಿಡಿ (ಹೊರಿಝಾಂಟಲ್‌ ಡೈರೆಕ್ಷನ್‌ ಡ್ರಿಲ್ಲಿಂಗ್‌) ಯಂತ್ರ ಉಪಯೋಗಿಸಲಾಗುತ್ತಿದೆ. ಒಂದು ಗುಂಡಿ ಮಾಡಿ ನೆಲದ ಅಡಿಯಿಂದಲೇ ನಿರ್ದಿಷ್ಟ ದೂರದವರೆಗೆ ಡ್ರಿಲ್‌ ಮಾಡಿ ಪೈಪ್‌ ಅನ್ನು ದೂಡಲಾಗುತ್ತದೆ. ಮಣ್ಣಿನೊಳಗಿನ ಅಡೆತಡೆ ನಿವಾರಿಸಿ, ಎಚ್‌ಡಿಡಿ ಯಂತ್ರ ಪೈಪ್‌ ಅಳವಡಿಸಲು ಸಹಕರಿಸುತ್ತದೆ.

ಇದನ್ನೂ ಓದಿ : ಕೇಂದ್ರ ಸಚಿವ ರಾಮಚಂದ್ರ ಪ್ರಸಾದ್‌ ಸಿಂಗ್‌ ಎನ್‌ಎಂಪಿಟಿಗೆ ಭೇಟಿ

Advertisement

ಸಿಎನ್‌ಜಿ ಕೊರತೆ ಈಗ ಇಲ್ಲ!
ಕೆಲವು ದಿನಗಳ ಹಿಂದೆ ಪಣಂಬೂರಿನ ಇಂಡಿಯನ್‌ ಆಯಿಲ್‌ ಬಂಕ್‌ ಹತ್ತಿರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸಿಟಿಗ್ಯಾಸ್‌ ಗೈಲ್‌ ಮದರ್‌ ಸ್ಟೇಶನ್‌ ಕಾರ್ಯಾರಂಭಿಸಿದೆ. ಇಲ್ಲಿ ಐದು ಸಿಎನ್‌ಜಿ ಫಿಲ್ಲಿಂಗ್‌ ಲಾರಿಗಳಿವೆ. ಮಂಗಳೂರಿನ ಯಾವುದೇ ಬಂಕ್‌ನಲ್ಲಿ (7 ಬಂಕ್‌ಗಳಲ್ಲಿ ಸಿಎನ್‌ಜಿ ಪೂರೈಕೆ)ಸಿಎನ್‌ಜಿ ಖಾಲಿಯಾದ ಕೂಡಲೇ ಪೂರೈಕೆ ಮಾಡುವುದು ಸಾಧ್ಯವಾಗಿದೆ. ಹೀಗಾಗಿ ಈಗ ಸಿಎನ್‌ಜಿಗಾಗಿ ಬೆಂಗಳೂರಿಗೆ ಹೋಗುವ ಪ್ರಮೇಯವಿಲ್ಲ. ವಾಹನಗಳಿಗೆ ಸಿಎನ್‌ಜಿ ಕೊರತೆ ಆಗುವ ಸಾಧ್ಯತೆಯೂ ಇಲ್ಲ ಎಂಬುದು ಅಧಿಕಾರಿಗಳ ಅಭಿಪ್ರಾಯ.

ಪ್ರಾಯೋಗಿಕ ಪೂರೈಕೆಗೆ ಸಿದ್ಧತೆ
ಪ್ರಾಯೋಗಿಕವಾಗಿ ಪಣಂಬೂರಿನಲ್ಲಿ ಕೆಲವೇ ದಿನದ ಒಳಗೆ ಮನೆ ಮನೆಗೆ ಗ್ಯಾಸ್‌ ಪೂರೈಕೆಯನ್ನು ಪ್ರಾಯೋಗಿಕವಾಗಿ ಪ್ರಾರಂಭಿಸಲಿದ್ದೇವೆ. ನಗರದ ಉಳಿದ ಭಾಗಗಳಲ್ಲಿ ಗ್ಯಾಸ್‌ ಪೂರೈಕೆ ಆರಂಭವಾಗುವಾಗ ಕೆಲವು ಸಮಯ ಆಗಬಹುದು.

-ಯು.ಸಿ.ಸಿಂಗ್‌, ಗೈಲ್‌ ಸಿಜಿಡಿ, ಮಂಗಳೂರು ಮುಖ್ಯಸ್ಥರು

Advertisement

Udayavani is now on Telegram. Click here to join our channel and stay updated with the latest news.

Next