Advertisement

ಜಿಲ್ಲೆಯ ಎರಡು ಕಡೆ ಗ್ಯಾಸ್‌ ಇನ್ಸುಲೇಟೆಡ್‌ ಸಬ್‌ಸ್ಟೇಷನ್‌

01:50 AM Feb 21, 2020 | Sriram |

ಉಡುಪಿ: ಕೇಂದ್ರ ಸರಕಾರದ ಸಮಗ್ರ ವಿದ್ಯುತ್‌ ಅಭಿವೃದ್ಧಿ ಯೋಜನೆಯಡಿ ಮೆಸ್ಕಾಂ ಉಡುಪಿ ಜಿಲ್ಲೆಯ ಉದ್ಯಾವರ ಹಾಗೂ ಕೋಟದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಜಿಐಎಸ್‌ (ಗ್ಯಾಸ್‌ ಇನ್ಸುಲೇಟೆಡ್‌ ಸಬ್‌ಸ್ಟೇಷನ್‌) ನಿರ್ಮಾಣಕ್ಕೆ ಮುಂದಾಗಿದೆ.

Advertisement

ಜಿಲ್ಲೆ ಬೆಳೆದಂತೆ ವಿದ್ಯುತ್‌ ಬೇಡಿಕೆಯೂ ಹೆಚ್ಚಾಗುತ್ತಿದೆ. ಇದನ್ನು ಪೂರೈಸಲು ಹೆಚ್ಚುವರಿ ಸಬ್‌ಸ್ಟೇಷನ್‌ಗಳು ಅಗತ್ಯವಿವೆ.

2021ಕ್ಕೆ ಸೇವೆ ಲಭ್ಯ
ಉದ್ಯಾವರದಲ್ಲಿ ಸುಮಾರು 13.5 ಕೋ.ರೂ. ಹಾಗೂ ಕೋಟದಲ್ಲಿ ಸುಮಾರು 19 ಕೋ.ರೂ. ವೆಚ್ಚದಲ್ಲಿ ಈ ಸ್ಟೇಷನ್‌ಗಳು ನಿರ್ಮಾಣವಾಗಲಿವೆ. ಕೋಟಕ್ಕೆ ಕುಂದಾಪುರದಿಂದ ಕೇಬಲ್‌ಗ‌ಳನ್ನು ತೆಗೆದು ಕೊಂಡು ಹೋಗುವ ಕಾರಣ ವೆಚ್ಚ ಅಧಿಕವಾಗಲಿದೆ. ಉದ್ಯಾವರಕ್ಕೆ ನಿಟ್ಟೂರಿನಿಂದ ಕೇಬಲ್‌ಗ‌ಳನ್ನು ಸರಬರಾಜು ಮಾಡಲಾಗುತ್ತದೆ. ಕಾಮಗಾರಿಯ ಟೆಂಡರ್‌ ಪ್ರಕ್ರಿಯೆಗಳು ಈಗಾಗಲೇ ಪೂರ್ಣಗೊಂಡಿವೆ. ಉದ್ಯಾವರದ ಕಾಮಗಾರಿಯನ್ನು ವಿ.ಆರ್‌.ಪಾಟೀಲ್‌ ಹಾಗೂ ಕೋಟದ ಕಾಮಗಾರಿಯನ್ನು ಸ್ಕಿಲ್‌ಟೆಕ್‌ ಸಂಸ್ಥೆಗೆ ಟೆಂಡರ್‌ ಮೂಲಕ ನೀಡಲಾಗಿದೆ. 2021ರ ಪ್ರಾರಂಭಕ್ಕೆ ಜಿಲ್ಲೆಗೆ ಇದರ ಸೇವೆ ಲಭ್ಯವಾಗುವ ನಿರೀಕ್ಷೆಯನ್ನು ಹೊಂದಲಾಗಿದೆ.

ಏನಿದು ಜಿಐಎಸ್‌?
ವಿದ್ಯುತ್‌ ಸಬ್‌ ಸ್ಟೇಷನ್‌ಗಳಲ್ಲಿ ಸಾಮಾನ್ಯವಾಗಿ ಏರ್‌ ಇನ್ಸುಲೇಟೆಡ್‌ ವಿಧಾನ (ಜಿಐಎಸ್‌) ಅಳವಡಿಸಲಾಗುತ್ತದೆ. ಹೈ ವೋಲ್ಟೆàಜ್‌ ವಿದ್ಯುತ್‌ ಪ್ರಸರಣವಾಗುವ ಕಾರಣ ವಿದ್ಯುತ್‌ ತಂತಿಗಳ ಮಧ್ಯೆ ಸಾಕಷ್ಟು ಅಂತರ ಅಗತ್ಯ. ಹಾಗಾಗಿ ಸಬ್‌ ಸ್ಟೇಷನ್‌ಗೆ ಸುಮಾರು ಅರ್ಧ ಎಕರೆಗಿಂತಲೂ ಹೆಚ್ಚು ಜಾಗ ಬೇಕಾಗುತ್ತದೆ. ಇದನ್ನು ನಿವಾರಿಸಲು ಜಪಾನಿನಲ್ಲಿ ಪ್ರಥಮವಾಗಿ ಗ್ಯಾಸ್‌ ಇನ್ಸುಲೇಟೆಡ್‌ ವಿಧಾನ ಅಭಿವೃದ್ಧಿಪಡಿಸಲಾಗಿತ್ತು. ಹೈ ವೋಲ್ಟೆàಜ್‌ ವಿದ್ಯುತ್‌ ಪ್ರಸರಣದ ಪ್ರಮುಖ ರಚನೆಗಳನ್ನು ಕಿರಿದಾಗಿಸಿ, ಸಲ#ರ್‌ ಹೆಕ್ಸಾಫ‌ೂÉರಿಡ್‌ ಗ್ಯಾಸ್‌ ಕವಚದಲ್ಲಿ ಮುಚ್ಚಿಡುವ ವಿಧಾನ ಇದಾಗಿದೆ. ಬ್ರೇಕರ್‌, ಟ್ರಾನ್ಸ್‌ಫಾರ್ಮರ್‌ ಯಾರ್ಡ್‌ ಸಣ್ಣ ಕಂಟ್ರೋಲ್‌ ರೂಂನಿಂದ ನಿಯಂತ್ರಿಸಬಹುದಾಗಿದೆ. ಇದರ ನಿರ್ಮಾಣ ವೆಚ್ಚ ದುಬಾರಿ. ಆದರೆ ನಿರ್ವಹಣೆ ಕಡಿಮೆ. 30×40 ಚದರ ಅಡಿ ಜಾಗದಲ್ಲಿ ಈ ಸಬ್‌ ಸ್ಟೇಷನ್‌ ನಿರ್ಮಿಸಬಹುದಾಗಿದೆ. ಈಗಾಗಲೇ ಸಿಂಗಾಪುರ ಸಹಿತ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ 1 ಅಪಾರ್ಟ್‌ಮೆಂಟ್‌ನಲ್ಲಿ ಇಂತಹ ಜಿಐಎಸ್‌ ಸಬ್‌ಸ್ಟೇಷನ್‌ಗಳನ್ನು ನಿರ್ಮಿಸಲಾಗಿದೆ.

ಜಿಲ್ಲೆಗೆ 13 ಹೊಸ ಗ್ರಿಡ್‌ಗಳು
ಜಿಲ್ಲೆಯ ಕೇಮಾರಿನಲ್ಲಿ ಈಗಾಗಲೇ 220 ಕೆ.ವಿ.ಯ 1 ಗ್ರಿಡ್‌ ಇದ್ದು ಮತ್ತೂಂದು ನಿರ್ಮಾಣ ಹಂತದಲ್ಲಿದೆ. 11ಕಡೆ 110 ಕೆ.ವಿ.ಗ್ರಿಡ್‌ ಇದ್ದು 6 ಕಡೆ ಹೆಚ್ಚುವರಿಯಾಗಿ ನಿರ್ಮಾಣವಾಗಲಿದೆ. 33 ಕೆ.ವಿ.ಯ ಗ್ರಿಡ್‌ಗಳು 7 ಕಡೆಗಳಲ್ಲಿದ್ದು, 6 ಕಡೆಗಳಲ್ಲಿ ನಿರ್ಮಾಣವಾಗುತ್ತಿದೆ. ಹೆಗ್ಗುಂಜೆಯಲ್ಲಿ ನಿರ್ಮಾಣವಾಗು ತ್ತಿರುವ 220 ಕೆ.ವಿ.ಗ್ರಿಡ್‌ಗೆ ಸುಮಾರು 80 ಕೋ.ರೂ.ವೆಚ್ಚವಾಗಲಿದೆ.

Advertisement

ಕಾಮಗಾರಿಯ ಟೆಂಡರ್‌ ಪ್ರಕ್ರಿಯೆಗಳು ಈಗಾಗಲೇ ಪೂರ್ಣ ಗೊಂಡಿವೆ. 2021ರ ಪ್ರಾರಂಭಕ್ಕೆ ಜಿಲ್ಲೆಗೆ ಇದರ ಸೇವೆ ಲಭ್ಯವಾಗುವ ನಿರೀಕ್ಷೆಯನ್ನು ಹೊಂದಲಾಗಿದೆ.

ಟೆಂಡರ್‌ ಪ್ರಕ್ರಿಯೆ ಪೂರ್ಣ
ಜಿಲ್ಲೆಯ ವಿದ್ಯುತ್‌ ಬೇಡಿಕೆಯನ್ನು ಪರಿಗಣಿಸಿ ಉದ್ಯಾವರ ಹಾಗೂ ಕೋಟದಲ್ಲಿ 2 ಹೊಸ ಸಬ್‌ಸ್ಟೇಷನ್‌ಗಳು ನಿರ್ಮಾಣವಾಗಲಿವೆ. ಈಗಾಗಲೇ ಟೆಂಡರ್‌ ಪ್ರಕ್ರಿಯೆಗಳು ಮುಗಿದಿವೆ. ಕಾಮಗಾರಿ ಆರಂಭಿಕ ಹಂತದಲ್ಲಿದೆ. 2021ರ ವೇಳೆಗೆ ಮುಗಿಸುವ ಉದ್ದೇಶವನ್ನು ಹೊಂದಲಾಗಿದೆ.
-ನರಸಿಂಹ ಪಂಡಿತ್‌,
ಮೆಸ್ಕಾಂ ಸುಪರಿಂಟೆಂಡೆಂಟ್‌ ಎಂಜಿನಿಯರ್‌, ಉಡುಪಿ

-ಪುನೀತ್‌ ಸಾಲ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next