Advertisement
ದಿ| ಕುಟ್ಟಿ ನಾಯ್ಕ ಅವರ ಪುತ್ರ ಬಟ್ಯ ನಾಯ್ಕ ಅವರ ಹೆಂಚು ಹಾಸಿದ ಮನೆಗೆ ಬೆಂಕಿ ಹಿಡಿದು ನಾಶವಾಗಿದೆ. ಬಟ್ಯ ನಾಯ್ಕ ಹಾಗೂ ಇವರ ಪುತ್ರನ ಇಬ್ಬರು ಪುಟಾಣಿ ಮಕ್ಕಳು ಮಾತ್ರವೇ ಮನೆಯೊಳಗಿದ್ದು, ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.
Related Articles
ಸೊತ್ತುಗಳು ಬೆಂಕಿಗಾಹುತಿ
ಬೆಂಕಿಯನ್ನು ನಂದಿಸುವ ಪ್ರಯತ್ನದ ನಡುವೆ ಮನೆಯೊಳಗೆ ಇದ್ದ ನಗ-ನಗದು ಸಹಿತ ಸ್ಥಳದ ರೇಕಾರ್ಡ್, ಗಾದ್ರೆಜ್, ಟಿವಿ, ಫ್ರಿಡ್ಜ್ ಬೆಂಕಿಗೆ ಆಹುತಿಯಾಗಿದೆ. ತುಂಬಿಸಿಟ್ಟಿದ್ದ ಗ್ಯಾಸ್ ಸಿಲಿಂಡರ್ ಬೆಂಕಿ ಹಿಡಿದು ಸುಟ್ಟು ರಟ್ಟಿತ್ತು. ಇದರ ರಭಸಕ್ಕೆ ಮನೆಯ ಗೋಡೆಗಳು ಒಡೆದು ಹೋಗಿದೆ. ಸ್ಥಳೀಯರು ಹರಸಾಹಸ ಪಟ್ಟು ಮನೆಯ ಅಡುಗೆ ಕೋಣೆಯೊಳಗಿದ್ದ ಗ್ಯಾಸ್ ಸಿಲಿಂಡರ್ ಅನ್ನು ಹೊರ ತೆಗೆದು ಬೆಂಕಿ ಆರಿಸುವ ಕಾರ್ಯದಲ್ಲಿ ತೊಡಗಿದ್ದರು.
Advertisement
ತತ್‌ಕ್ಷಣ ಕಾಸರಗೋಡಿನಿಂದ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸಲು ಸಹಕರಿಸಿದ್ದರು. ಮನೆಯೊಳಗಿದ್ದ ಮನೆಯ ರೇಕಾರ್ಡ್, ಐಡೆಂಟಿ ಕಾರ್ಡ್ ಶಾಲಾ ಸರ್ಟಿಫಿಕೇಟ್ ಸಹಿತ ಚಿನ್ನ ಹಣ ಇನ್ನಿತರ ವಸ್ತುಗಳು ಮನೆ ಸಂಪೂರ್ಣ ಹೊತ್ತಿ ನಾಶವಾಗಿದೆ. ಎಣ್ಮಕಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಸೋಮಶೇಖರ್ ಸ್ಥಳಕ್ಕೆ ಆಗಮಿಸಿ ಸ್ಥಳೀಯರೊಂದಿಗೆ ಸೇರಿಕೊಂಡು ಮನೆಯವರಿಗೆ ವಾಸಿಸಲು ತಾತ್ಕಾಲಿಕ ವಸತಿ ವ್ಯವಸ್ಥೆ ಮಾಡಿದ್ದಾರೆ.