ಆಳಂದ್: ಆಳಂದ್ ಪಟ್ಟಣದ ನಿವಾಸಿಗಳು ಇತ್ತೀಚೆಗೆ ಗ್ಯಾಸ್ ಡೆಲಿವರಿ ಸಮಸ್ಯೆಯಿಂದ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಗ್ಯಾಸ್ ಸಿಲಿಂಡರ್‌ಗಳನ್ನು ಬುಕ್ ಮಾಡಿದ ನಂತರ ಡೆಲಿವರಿ ಮೆಸೇಜ್ ಬಂದರೂ, ಗ್ಯಾಸ್ ಸಿಲಿಂಡರ್ ಮನೆಗೆ ತಲುಪದ ಸಮಸ್ಯೆ ಹೆಚ್ಚಾಗಿದೆ.
ಜನರು ಗ್ಯಾಸ್ ಸಿಲಿಂಡರ್ ಪಡೆಯಲು ತಮ್ಮ ಕೆಲಸ ಕಾರ್ಯವನ್ನು ಬಿಟ್ಟು, ಎಲ್ ಪಿಜಿ ಕೇಂದ್ರಗಳಿಗೆ ತೆರಳಿ ಕ್ಯೂನಲ್ಲಿ ನಿಂತು, ನಂಬರ್ ಬಂದ ನಂತರ ಸಂಪೂರ್ಣ ಹಣ ಪಾವತಿಸಿ ಗ್ಯಾಸ್ ತೆಗೆದುಕೊಂಡು ಬರಬೇಕಾದ ಪರಿಸ್ಥಿತಿ ಉಂಟಾಗಿದೆ.
ಈ ಸಮಸ್ಯೆಯ ಕುರಿತು ಇಲ್ಲಿನ ನಿವಾಸಿಗಳು ಅನೇಕ ಬಾರಿ ಸಂಬಂಧಿತ ಅಧಿಕಾರಿಗಳಿಗೆ ತಿಳಿಸಿದರೂ, ಇದುವರೆಗೂ ಸುಧಾರಣೆ ಕಾಣಿಸುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಇದರಿಂದ ನಿವಾಸಿಲಿಗಳು ಗ್ಯಾಸ್ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.
ದಿನಬಳಕೆಯ ವಸ್ತುಗಳಲ್ಲಿ ಗ್ಯಾಸ್ ಅಗತ್ಯವಾಗಿರುವುದರಿಂದ, ಅಧಿಕಾರಿಗಳು ಈ ಸಮಸ್ಯೆಗೆ ಶೀಘ್ರದಲ್ಲಿ ಪರಿಹಾರ ಒದಗಿಸಬೇಕು ಎಂದು ಜನರು ಬೇಡಿಕೆ ಇಟ್ಟಿದ್ದಾರೆ.
ಇದನ್ನೂ ಓದಿ: Rajasthan: ಹಳಿ ಮೇಲೆ ಸಿಮೆಂಟ್ ಬ್ಲಾಕ್ ಇಟ್ಟು ದುಷ್ಕರ್ಮಿಗಳಿಂದ ರೈಲು ಹಳಿ ತಪ್ಪಿಸಲು ಸಂಚು