Advertisement

ಗರುಡಾಂಜನೇಯ ಸ್ವಾಮಿ ಕ್ಷೀರಾಭಿಷೇಕ

11:54 AM Nov 06, 2017 | |

ಕೆಂಗೇರಿ: ಬೆಂಗಳೂರು ದಕ್ಷಿಣ ತಾಲೂಕು ನೆಟ್ಟಿಗೆರೆ ಶ್ರೀ ಗುಂಡಾಂಜನೇಯ ಸ್ವಾಮಿ ಕ್ಷೀರಾಭಿಷೇಕ ಮಹೋತ್ಸವ ಭಕ್ತಿ, ಸಡಗರ ಸಂಭ್ರಮ ಹಾಗೂ ವಿಜೃಂಭಣೆಯಿಂದ ನೆರವೇರಿತು. 

Advertisement

ಬೆಂಗಳೂರು ದಕ್ಷಿಣ ತಾಲೂಕು ನೆಟ್ಟಿಗೆರೆ ಗ್ರಾಮದಲ್ಲಿ ನೆಲೆಗೊಂಡಿರುವ ಶ್ರೀ ಗುಂಡಾಂಜನೇಯ ಸ್ವಾಮಿ ದೇವಾಲಯದ ಕಲ್ಯಾಣಿ ಬೃಂದಾವನದಲ್ಲಿ ಶ್ರೀರಾಮ, ಸೀತಾ ಲಕ್ಷ್ಮಣ ಮತ್ತು ಆಂಜನೇಯ ಸ್ವಾಮಿಗೆ ಕ್ಷೀರಾಭಿಷೇಕ ನಡೆಯಿತು. ನಂತರ ಪ್ರಕಾರೋತ್ಸವದೊಂದಿಗೆ ಶ್ರೀ ಭೀಮೇಶ್ವರಿಗೆ ಪೂಜೆ ಸಲ್ಲಿಸಲಾಯಿತು. ಜಾನಪದ ಕಲಾ ತಂಡಗಳೊಂದಿಗೆ ಪಲ್ಲಕ್ಕಿ ಉತ್ಸವ ನೆರವೇರಿತು.

ನೆಟ್ಟಿಗೆರೆ, ಬೋಳಾರೆ, ವೀರಸಂದ್ರ, ಸೋಮನಹಳ್ಳಿ, ರಾವುಗೋಡ್ಲು, ತಿಟ್ಟಹಳ್ಳಿ, ಗಂಟಕರದೊಡಿ, ಮುಕ್ಕೋಡ್ಲು, ಗಿರಿಗೌಡನದೊಡ್ಡಿ, ಗಾಡಿಪಾಳ್ಯ, ತರಳು, ತಟಗುಪ್ಪೆ, ಗುಳಕಮಲೆ, ವಾಸುದೇವಪುರ, ಗೊಟ್ಟಿಗೆಹಳ್ಳಿ, ಕಗ್ಗಲೀಪುರ, ಚೂಡಹಳ್ಳಿ, ನೆಲಗುಳಿ,

-ಹೊಸದೊಡ್ಡಿ, ನಾಗನಾಯಕನಹಳ್ಳಿ, ಕಗ್ಗಲಹಳ್ಳಿ, ಪರವಯ್ಯನಪಾಳ್ಯ ಸುತ್ತಮುತ್ತಲಿನ ಗ್ರಾಮಸ್ಥರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಪೂಜೆ ಸಲ್ಲಿಸುವ ಮೂಲಕ ದೇವರ ಕೃಪೆಗೆ ಪಾತ್ರರಾದರು. 10 ಸಾವಿರಕ್ಕೂ ಹೆಚ್ಚು ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next