Advertisement
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆಗಸ್ಟ್‌ನಲ್ಲಿ ಕೊಡಗಿನಲ್ಲಿ 900 ಮಿ.ಮೀ.ಗೂ ಅಧಿಕ ಮಳೆಯಾಗಿದ್ದರೆ, ಪ್ರಕೃತಿ ವಿಕೋಪ ಸಂಭವಿಸಿದ ಒಂದು ವಾರದ ಅವಧಿಯಲ್ಲಿ ದಾಖಲೆಯ 450 ಮಿ.ಮೀ. ಮಳೆಯಾಗಿದೆ. 8,500 ಹೆಕ್ಟೇರ್ ಕರಿಮೆಣಸು, 800ಹೆಕ್ಟೇರ್ ಬಾಳೆ, 600 ಹೆಕ್ಟೇರ್ ಶುಂಠಿ, 1200 ಹೆಕ್ಟೇರ್ ಅಡಿಕೆ, 9,800 ಹೆಕ್ಟೇರ್ ಭತ್ತ, 4,000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಮೆಕ್ಕೆಜೋಳ ಸೇರಿ 35 ಸಾವಿರ ಹೆಕ್ಟೇರ್ ಪ್ರದೇಶದ ಕೃಷಿ ಬೆಳೆ ನಾಶವಾಗಿದೆ. ಕಾμ ಬೆಳೆ ಶೇ.90 ರಷ್ಟು ಭಾಗ ನಷ್ಟವಾಗಿದ್ದು, ಇದರ ಅಂದಾಜು 350 ಕೋಟಿ ರೂ.ಗಳಷ್ಟಾಗಿದೆ. ನೂತನ ತಂತ್ರಜಾnನದ ಆ್ಯಪ್ ಬಳಸಿ ಬೆಳೆ ನಷ್ಟದ ಕುರಿತು ಸರ್ವೇ ಮತ್ತು ಸಮೀಕ್ಷೆ ನಡೆಸಿ ವರದಿ ತಯಾರಿಸಲಾಗುವುದು. ತೋಟಗಾರಿಕಾ ಬೆಳೆಗಳ ನಷ್ಟದ ಸಮೀಕ್ಷೆ ನಡೆಸಲು ಈಗಾಗಲೇ 60 ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಶೇ.30ರಷ್ಟು ಸರ್ವೇ ಕಾರ್ಯ ಪೂರ್ಣಗೊಂಡಿದೆ. ಇನ್ನು 15 ದಿನಗಳಲ್ಲಿ ಸಮೀಕ್ಷೆ ಪೂರ್ಣಗೊಂಡು ಅಧಿಕಾರಿಗಳು ವರದಿ ನೀಡಲಿದ್ದಾರೆ. ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮುಂದಿನ
15 ದಿನಗಳಲ್ಲಿ ಪರಿಹಾರ ವಿತರಿಸುವ ಪ್ರಕ್ರಿಯೆ ನಡೆಯಲಿದೆ ಎಂದರು.