Advertisement

ಮುಗುರುಜಾಗೆ ಶರಣಾದ ಮರಿಯಾ ಶರಪೋವಾ

06:20 AM Jun 07, 2018 | |

ಪ್ಯಾರಿಸ್‌: ಸೆರೆನಾ ವಿಲಿಯಮ್ಸ್‌ ವಿರುದ್ಧ ಆಡದೆಯೇ ಕ್ವಾರ್ಟರ್‌ ಫೈನಲ್‌ಗೆ “ವಾಕ್‌ ಓವರ್‌’ ಪಡೆದ ಮರಿಯಾ ಶರಪೋವಾ ಅವರನ್ನು “ಲಕ್ಕಿ’ ಎಂದೇ ಭಾವಿಸಲಾಗಿತ್ತು. ಆದರೆ ಬುಧವಾರದ ಸೆಣಸಾಟದಲ್ಲಿ ಅವರನ್ನು ಸ್ಪೇನಿನ ಗಾರ್ಬಿನ್‌ ಮುಗುರುಜಾ 6-2, 6-1 ಅಂತರದಿಂದ ಕೆಡವಿ ಸೆಮಿಫೈನಲ್‌ಗೆ ಏರಿಹೋದರು. 

Advertisement

2015ರ ಬಳಿಕ ಫ್ರೆಂಚ್‌ ಓಪನ್‌ನಲ್ಲಿ ಕಾಣಿಸಿಕೊಂಡ ಶರಪೋವಾ ಪಾಲಿಗೆ ಇದು ಗ್ರ್ಯಾನ್‌ಸ್ಲಾಮ್‌ನಲ್ಲಿ ಎದುರಾದ 2ನೇ ದೊಡ್ಡ ಸೋಲಾಗಿದೆ. 2012ರ ಆಸ್ಟ್ರೇಲಿಯನ್‌ ಓಪನ್‌ನಲ್ಲಿ ವಿಕ್ಟೋರಿಯಾ ಅಜರೆಂಕಾ ಕೈಯಲ್ಲಿ 6-3, 6-0 ಅಂತರದಿಂದ ಸೋತದ್ದು ಶರಪೋವಾಗೆ ಎದುರಾದ ದೊಡ್ಡ ಆಘಾತವಾಗಿದೆ.

“ನಾನು ಪ್ಯಾರಿಸ್‌ನಲ್ಲಿ ಮತ್ತೂಂದು ಫೈನಲ್‌ ಕಾಣುವ ನಿರೀಕ್ಷೆಯಲ್ಲಿದ್ದೇನೆ. ಶರಪೋವಾ ಓರ್ವ ಶ್ರೇಷ್ಠ ಆಟಗಾರ್ತಿ. ಹೀಗಾಗಿ ಶ್ರೇಷ್ಠ ಪ್ರದರ್ಶನ ನೀಡುವುದು ಅನಿವಾರ್ಯವಾಗಿತ್ತು. ಇದರಲ್ಲಿ ನಾನು ಯಶಸ್ವಿಯಾದೆ’ ಎಂದು 2016ರ ಚಾಂಪಿಯನ್‌ ಮುಗುರುಜಾ ಪ್ರತಿಕ್ರಿಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next