Advertisement
ಒಂದು ಕಡೆ ಆಧುನಿಕ ಯಂತ್ರಗಳ ಬಳಕೆ ಮಾಡಿ ಬಿಬಿಎಂಪಿ ಸಿಬ್ಬಂದಿ ಮೇಲ್ಸೇತುವೆಗಳನ್ನು ಪ್ರತಿದಿನ ಸ್ವತ್ಛಗೊಳಿಸುತ್ತಾರೆ. ಆದರೆ, ಅವರು ಸ್ವತ್ಛಗೊಳಿಸಿ ಮುಂದೆ ಸಾಗುತ್ತಿದ್ದಂತೆ ಇತ್ತ ಎಲ್ಲೆಂದರಲ್ಲಿ ಕಸ ರಾಶಿ ರಾಶಿಯಾಗಿ ಬಿದ್ದಿರುತ್ತದೆ. ಈಗಾಗಲೇ ಬೆಂಗಳೂರಿನ ಹಲವು ವಾರ್ಡ್‌ಗಳಲ್ಲಿ ಎಲ್ಲೆಂದರಲ್ಲಿÉ ಬ್ಲಾಕ್ ಸ್ಪಾಟ್‌ಗಳು ಸೃಷ್ಟಿಯಾಗುತ್ತಿದ್ದು, ಅವುಗಳ ಮಧ್ಯೆಯೇ ಈಗ ಜೆಪಿ ನಗರದ ದಾಲಿ¾ಯಾ ಸರ್ಕಲ್ ಮೇಲ್ಸೇತುವೆ ಮತ್ತು ಈಜಿಪುರದ ನಿರ್ಮಾಣ ಹಂತದ ಮೇಲ್ಸೇತುವೆ ಸೇರಿದಂತೆ ರಾಜಧಾನಿ ವ್ಯಾಪ್ತಿಯ ಹಲವು ಫ್ಲೈ ಓವರ್‌ಗಳಲ್ಲಿ ಕಸ ಎಸೆದು ಹೋಗುವ ಪ್ರವೃತ್ತಿ ಮುಂದುವರಿದಿದೆ.
Related Articles
Advertisement
ಸಿಸಿ ಕ್ಯಾಮೆರಾ ಅಳವಡಿಸಲು ಪಾಲಿಕೆ ಚಿಂತನೆ :
ಮಷಿನ್ ಸ್ವೀಪರ್ ಬಳಕೆ ಮಾಡಿ ಮೇಲ್ಸೇತುವೆಗಳನ್ನು ಸ್ವತ್ಛ ಮಾಡಲಾಗುತ್ತದೆ. 25ಕ್ಕೂ ಅಧಿಕ ಮಷಿನ್‌ಗಳನ್ನು ಸ್ವತ್ಛತಾ ಕಾರ್ಯಕ್ಕೆ ಬಳಸಲಾಗುತ್ತಿದೆ. ಆದರೂ ರಾತ್ರಿ ವೇಳೆ ಕೆಲವು ಮೇಲ್ಸೇತುವೆಗಳ ಮೇಲೆ ಮೋಟಾರು ಬೈಕ್‌ನಲ್ಲಿ ಬಂದು ಕಸಹಾಕಿ ಹೋಗುತ್ತಿರುವುದು ಬಿಬಿಎಂಪಿ ಗಮನಕ್ಕೆ ಬಂದಿದೆ ಎಂದು ಹಿರಿಯ ಅಧಿಕಾರಿ ಯೊಬ್ಬರು ಹೇಳಿದ್ದಾರೆ. ಈ ಬಗ್ಗೆ ಪಾಲಿಕೆ ಕೂಡ ಹೆಚ್ಚಿನ ಗಮನ ನೀಡಿದ್ದು, ಫ್ಲೈ ಓವರ್‌ಗಳ ಮೇಲೆ ಸಿಸಿ ಕ್ಯಾಮೆರಾ ಅಳವಡಿಕೆ ಮಾಡುವ ಚಿಂತನೆಯಲ್ಲಿದೆ ಎಂದು ತಿಳಿಸಿದ್ದಾರೆ.
ಮೇಲ್ಸೇತುವೆ ಸೇರಿದಂತೆ ಮತ್ತಿತರ ಕಡೆ ಕಸ ಬಿಸಾಡುವ ಪ್ರವೃತ್ತಿ ಕಂಡು ಬಂದಿದೆ. ಕೆಲವು ದೇಶಗಳಲ್ಲಿ ಪೊಲೀಸರು ಕಸಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಾರೆ. ಆದರೆ, ನಮ್ಮಲ್ಲಿ ಆ ವ್ಯವಸ್ಥೆಯಿಲ್ಲ. ಬಿಬಿಎಂಪಿ ಆ ವ್ಯವಸ್ಥೆಯನ್ನು ಅಳವಡಿಕೆ ಮಾಡಿಕೊಳ್ಳಲು ಮುಂದಾಗಬೇಕು.-ಯಲ್ಲಪ್ಪ ರೆಡ್ಡಿ, ಹಿರಿಯ ಪರಿಸರವಾದಿ
– ದೇವೇಶ ಸೂರಗುಪ್ಪ