Advertisement

ರಸ್ತೆಯಲ್ಲಿ ಕಸ ಬಿಸಾಕಿದವರ ಮನೆಗೆ ಕಸವೇ “ಗಿಫ್ಟ್’!

01:03 AM Nov 09, 2020 | mahesh |

ಹೈದರಾಬಾದ್‌: ರಸ್ತೆ ಬದಿಗಳಲ್ಲಿ ಮನಬಂದಂತೆ ತ್ಯಾಜ್ಯ ಬಿಸಾಕುವ ಮಂದಿಗೆ ಇಲ್ಲಿನ ಕಾಕಿನಾಡ ನಗರದ ಮುನ್ಸಿಪಲ್‌ ಕಮಿಷನರ್‌ ವಿನೂತನ “ಗಿಫ್ಟ್’ ನೀಡಿದ್ದಾರೆ!

Advertisement

ಹಾದಿಯ ಅಕ್ಕಪಕ್ಕ ಕಸ ಸುರಿದು ಕಣ್ಮರೆ ಯಾಗುವವರನ್ನು ಸಿಸಿ ಕೆಮರಾಗಳಲ್ಲಿ ಪತ್ತೆಹಚ್ಚಿ, ಅದೇ ಕಸವನ್ನು ಕೈಚೀಲಗಳಲ್ಲಿ ತುಂಬಿ, ಅವರ ಮನೆಗೆ ನೀಡುವ ಅಭಿಯಾನವನ್ನು ಮುನ್ಸಿಪಲ್‌ ಕಮಿಷನರ್‌ ಸ್ವಪ್ನಿಲ್‌ ದಿನಕರ್‌ ಪುಂಡ್ಕರ್‌ ಆರಂಭಿಸಿದ್ದಾರೆ. ಎಲ್ಲೆಂದರಲ್ಲಿ ಅಸಭ್ಯವಾಗಿ ಸುರಿದ ಕಸಗಳನ್ನು ಪೌರ ಕಾರ್ಮಿಕರು ಕೈಚೀಲಗಳಲ್ಲಿ ಸಂಗ್ರಹಿಸಿ, ಕಸ ಎಸೆದವರ ಮನೆ ಬಾಗಿಲ ಮುಂದೆ ಸುರಿಯುತ್ತಿರುವ ದೃಶ್ಯದ ವೀಡಿಯೋಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಇತ್ತೀಚೆಗೆ ಸುರಿದ ಧಾರಾಕಾರ ಮಳೆಗೆ ಹೈದರಾ ಬಾದ್‌ನ ಬಹುತೇಕ ರಸ್ತೆಗಳು ಜಲಾವೃತ ಗೊಂಡಿದ್ದವು. ಚರಂಡಿಯಲ್ಲಿ ತುಂಬಿದ್ದ ಕಸಗಳೇ ಈ ದುರಂತಕ್ಕೆ ಪ್ರಮುಖ ಕಾರಣವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next