Advertisement

ಕಸ ವಿಲೇವಾರಿ ಸರಿಯಾಗಲಿ…

10:12 PM Aug 03, 2019 | mahesh |

ಮಂಗಳೂರು ನಗರ ಬೆಳೆಯುತ್ತಿದ್ದರೂ, ಕಸ ವಿಲೇವಾರಿ ನಗರಕ್ಕೆ ದೊಡ್ಡ ಸವಾಲಾಗಿ ಕಾಡುತ್ತಿದೆ. ಮಳೆಗಾಲದಲ್ಲಂತೂ ಕಸ ವಿಲೇವಾರಿಯದ್ದೇ ಒಂದು ಸಮಸ್ಯೆ. ಕೆಲವು ಓಣಿಗಳಲ್ಲಿರುವ ಮನೆಗಳಿಗೆ ಕಸ ವಿಲೇವಾರಿ ವಾಹನ ಬರುವುದಿಲ್ಲ. ಇದರಿಂದಾಗಿ ಅಲ್ಲಿರುವ ಅಷ್ಟೂ ಮನೆಯವರು ಕಸವನ್ನು ಪ್ಲಾಸ್ಟಿಕ್‌ ಕವರ್‌ನಲ್ಲಿ ಕಟ್ಟಿ ತಂದು ಸನಿಹದ ರಸ್ತೆ ಬದಿಗಳಲ್ಲಿ ಇಟ್ಟು ಹೋಗುತ್ತಾರೆ. ಕೆಲವರು ರಾತ್ರಿ ಹೊತ್ತಿನಲ್ಲಿಯೇ ಹೀಗೆ ಕಸ ತಂದು ಇಡುತ್ತಾರೆ. ಮಿಕ್ಕವರು ಬೆಳಗ್ಗೆ ಬೇಗ ಇರಿಸುತ್ತಾರೆ. ಆದರೆ ಆ ರಸ್ತೆಯಲ್ಲಿ ಓಡಾಡುವ ಬೀದಿ ನಾಯಿಗಳು ಆಹಾರಕ್ಕಾಗಿ ಈ ಕಸ ತುಂಬಿರುವ ಪ್ಲಾಸ್ಟಿಕ್‌ ಕವರನ್ನು ಹರಿದು ಹಾಕುತ್ತವೆ. ಇದರಿಂದ ತ್ಯಾಜ್ಯವು ರಸ್ತೆಯಿಡೀ ಚೆಲ್ಲಿ ವಾಸನೆ ಹುಟ್ಟುತ್ತದೆ. ಮಳೆಗಾಲದಲ್ಲಿ ತ್ಯಾಜ್ಯವು ನೀರಿನೊಂದಿಗೆ ಹರಿದು ಇಡೀ ಪರಿಸರವೇ ಕೊಳಕಾಗುತ್ತದೆ. ಈ ನಿಟ್ಟಿನಲ್ಲಿ ಸರಿಯಾಗಿ ಕಸ ವಿಲೇವಾರಿ ಮಾಡಲು ಅಥವಾ ಕಸವನ್ನು ಗೊಬ್ಬರವನ್ನಾಗಿ ಮಾರ್ಪಡಿಸಲು ಬದಲಿ ವ್ಯವಸ್ಥೆಗಳನ್ನು ಹುಡುಕುವ ಬಗ್ಗೆ ನಗರದ ಜನತೆ ಯೋಚಿಸಬೇಕು. ಪಾಲಿಕೆಯೂ ಈ ಬಗ್ಗೆ ಕೈಜೋಡಿಬೇಕು

Advertisement

-  ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next