Advertisement
ಕುಮಾರ್ ಠಾಕೂರ್ ಎಂಬ ಪ್ರಾಂಶುಪಾಲ ಕೌನ್ಸಲಿಂಗ್ ನೆಪದಲ್ಲಿ ವಿದ್ಯಾರ್ಥಿನಿಯರನ್ನು ಕೋಣೆಗೆ ಕರೆಸಿಕೊಂಡು ಗಂಟೆಗಳ ಕಾಲ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಕಳೆದ 5 ವರ್ಷಗಳಿಂದ ಈತ ಪ್ರಾಂಶುಪಾಲನಾಗಿದ್ದು, ಹಲವು ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿದ್ದು, ಶಿಕ್ಷಕಿಯರಿಗೂ ವಾಟ್ಸಾಪ್‌ನಲ್ಲಿ ಅಶ್ಲೀಲ ಸಂದೇಶಗಳನ್ನು ಕಳುಹಿಸಿ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ.
Related Articles
Advertisement
ಈತನ ಕಿರುಕುಳದಿಂದ ಬೇಸತ್ತ ಶಿಕ್ಷಕಿಯರು ಮತ್ತು ವಿದ್ಯಾರ್ಥಿನಿಯರು ಜೊತೆಯಾಗಿ ಡಿಸೆಂಬರ್‌ನಲ್ಲಿ ಚೈಲ್ಡ್‌ಲೈನ್‌ಗೆ ದೂರು ನೀಡಿದ್ದು, ನೊಡೇಲ್ ಡೈರೆಕ್ಟರ್ ವಾಸುದೇವ ಶರ್ಮಾ ವಿದ್ಯಾರ್ಥಿನಿಯರ ಹೇಳಿಕೆಗಳನ್ನು ಪಡೆದು ಪೊಲೀಸ್ ಕಮಿಷನರ್ ಪ್ರವೀಣ್ ಸೂದ್ ಅವರನ್ನು ಭೇಟಿ ಮಾಡಿ ಪ್ರಕರಣದ ಬಗ್ಗೆ ವಿವರ ನೀಡಿದ್ದಾರೆ.
ಡಿಸಿಪಿ ಚಂದ್ರಗುಪ್ತ ಅವರ ಬಳಿ ದೂರು ನೀಡಲಾಗಿದ್ದು, POCSO ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಜನವರಿ 31 ರಂದು ಆರೋಪಿ ಕುಮಾರ್ ಠಾಕೂರ್‌ನನ್ನು ಬಂಧಿಸಿ ಒಂದೇ ದಿನಗಳಲ್ಲಿ ಅಂದರೆ ಫೆಬ್ರವರಿ 1 ರಂದು ಬಿಡುಗಡೆ ಮಾಡಲಾಗಿದೆ.
ಕುಮಾರ್ ರಾಜಕಾರಣಿಗಳ ಬಲವಾದ ನಂಟು ಹೊಂದಿದ್ದಾನೆ ಎನ್ನಲಾಗಿದ್ದು ಪೊಲೀಸ್ ಇಲಾಖೆ ಈತನ ವಿರುದ್ಧ ಬಲವಾದ ತನಿಖೆ ನಡೆಸಲು ಹಿಂದೇಟು ಹಾಕುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಗಂಭೀರ ಆರೋಪ ಹೊತ್ತಿದ್ದರೂ ಇದುವರೆಗೆ ಶಿಕ್ಷಣ ಇಲಾಖೆ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.