Advertisement

ಕಲರ್ ಫುಲ್ ವೇದಿಕೆಯಲ್ಲಿ ‘ಗರಡಿ’ ಟ್ರೇಲರ್

11:52 AM Nov 05, 2023 | Team Udayavani |

ಬಿ.ಸಿ.ಪಾಟೀಲ್‌ ನಿರ್ಮಾಣದ “ಗರಡಿ’ ಚಿತ್ರ ನವೆಂಬರ್‌ 10 ರಂದು ಬಿಡುಗಡೆಯಾಗುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಹಾಡುಗಳು ಕೂಡಾ ಹಿಟ್‌ಲಿಸ್ಟ್‌ ಸೇರಿದೆ. ಇದರ ಬೆನ್ನಿಗೆ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ರಾಣೇಬೆನ್ನೂರಿನಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಚಿತ್ರದ ಟ್ರೇಲರ್‌ ಹೊರಬಂದಿದೆ. ನಟ ದರ್ಶನ್‌ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

Advertisement

ಯಶಸ್‌ ಸೂರ್ಯ ನಾಯಕರಾಗಿರುವ, ಯೋಗರಾಜಭಟ್‌ ನಿರ್ದೇಶನದ ಈ ಚಿತ್ರದಲ್ಲಿ ಸೋನಾಲ್‌ ಮೊಂತೆರೋ ನಾಯಕಿ. ಚಿತ್ರದ “ಹೊಡಿರಲೆ ಹಲಗಿ’ ಹಾಡಿನಲ್ಲಿ ನಟಿ ನಿಶ್ವಿ‌ಕಾ ನಾಯ್ಡು ಸ್ಟೆಪ್‌ ಹಾಕಿದ್ದಾರೆ. ಈಗಾಗಲೇ ಟ್ರೇಲರ್‌ ನೋಡಿದವರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಮಾಜಿ ಸಚಿವ ಬಿ.ಸಿ.ಪಾಟೀಲ್‌ ಅವರು “ಗರಡಿ’ ಚಿತ್ರದ ನಿರ್ಮಾಣದ ಜೊತೆಗೆ ಪ್ರಮುಖ ಪಾತ್ರ ಕೂಡಾ ಮಾಡಿದ್ದಾರೆ. ಇಲ್ಲಿ ಅವರು ಗರಡಿ ಮನೆಯ ಕುಸ್ತಿ ಗುರುವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. “ಇದು ನನ್ನ ಪ್ರೊಡಕ್ಷನ್‌ನ 16ನೇ ಸಿನಿಮಾ. ಈ ಕಥೆ ಚೆನ್ನಾಗಿದೆ. ಮುಂದೆಯೂ ನಮ್ಮ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಿಸಲಿದ್ದೇವೆ’ ಎನ್ನುವುದು ಪಾಟೀಲರ ಮಾತು. ಚಿತ್ರದ ವಿಲನ್‌ ಪಾತ್ರದಲ್ಲಿ ಬಿ.ಸಿ.ಪಾಟೀಲ್‌ ಅಳಿಯ ಸುಜಯ್‌ ಬೇಲೂರು ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next