Advertisement

ಗಂಟುಮೂಟೆ ಟ್ರೇಲರ್ ನೋಡಿ ಫಿದಾ ಆದ ಕಿಚ್ಚ!

09:55 AM Oct 13, 2019 | Naveen |

ರೂಪಾ ರಾವ್ ನಿರ್ದೇಶನದ ಗಂಟುಮೂಟೆ ಚಿತ್ರವೀಗ ಪ್ರೇಕ್ಷಕರ ಆಸಕ್ತಿಯ ಕೇಂದ್ರಬಿಂದುವಾಗಿ ಬಿಟ್ಟಿದೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿರೋ ಟ್ರೇಲರ್ ಮೂಲಕವೇ ಈ ಸಿನಿಮಾ ಬಗ್ಗೆ ವ್ಯಾಪಕ ನಿರೀಕ್ಷೆಗಳೂ ಮೂಡಿಕೊಂಡಿವೆ. ಸದರಿ ಟ್ರೇಲರ್ ಇದೊಂದು ಅಪರೂಪದಲ್ಲಿಯೇ ಅಪರೂಪದ ಕಥಾ ಹಂದರ ಹೊಂದಿರುವ ಚಿತ್ರ ಎಂಬುದನ್ನು ಜಾಹೀರು ಮಾಡಿದೆ. ಮೇಕಿಂಗ್ ಸೇರಿದಂತೆ ಎಲ್ಲದರಲ್ಲಿಯೂ ವಿಶೇಷತೆಗಳನ್ನೇ ಒಳಗೊಂಡಿರುವ ಈ ಟ್ರೇಲರ್ ನೋಡಿ ಕಿಚ್ಚ ಸುದೀಪ್ ಅವರೇ ಫಿದಾ ಆಗಿಬಿಟ್ಟಿದ್ದಾರೆ.

Advertisement

ಸದಾ ಹೊಸಬರ ಚಿತ್ರಗಳತ್ತ, ಹೊಸಾ ಪ್ರಯತ್ನಗಳತ್ತ ಕಣ್ಣಿಟ್ಟು ಅದರಲ್ಲಿ ಕಸುವಿದೆ ಎಂಬ ಸೂಚನೆ ಸಿಕ್ಕರೆ ಮೆಚ್ಚಿಕೊಂಡು ಬೆನ್ತಟ್ಟಿ ಪ್ರೋತ್ಸಾಹಿಸೋದು ಕಿಚ್ಚಾ ಸುದೀಪ್ ಅವರ ವಿಶೇಷತೆ. ಅದರಂತೆಯೇ ಬಿಡುವಿರದ ಕೆಲಸ ಕಾರ್ಯಗಳ ನಡುವೆಯೂ ಅವರು ಗಂಟುಮೂಟೆ ಟ್ರೇಲರ್ ಅನ್ನು ನೋಡಿದ್ದಾರೆ. ಈ ಬಗ್ಗೆ ಟ್ವೀಟ್ ಮೂಲಕ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಒಂದು ಸಣ್ಣ ಟ್ರೇಲರ್ ಸಾವಿರ ಮಾತುಗಳನ್ನಾಡುತ್ತಿದೆ. ಇದು ರೂಪುಗೊಂಡಿದ್ದರ ಹಿಂದೆ ಅದ್ಭುತವಾದ ಚಿಂತನೆಗಳಿವೆ ಎಂಬುದೂ ಈ ಮೂಲಕವೇ ಗೊತ್ತಾಗುತ್ತಿದೆ. ಇಡೀ ಚಿತ್ರ ತಂಡಕ್ಕೆ ಒಳ್ಳೇದಾಗಲಿ ಅಂತ ಕಿಚ್ಚಾ ಸುದೀಪ್ ಶುಭ ಕೋರಿದ್ದಾರೆ.

ಕನ್ನಡದಲ್ಲಿ ಮಹಿಳಾ ನಿರ್ದೇಶಕಿಯರ ಸಂಖ್ಯೆ ತೀರಾ ಕಡಿಮೆ. ಅಂಥಾ ವಿರಳವಾಗಿರೋ ನಿರ್ದೇಶಕಿಯರ ಸಾಲಿಗೆ ಎಲ್ಲರೂ ತಿರುಗಿ ನೋಡುವಂತೆ ರೂಪಾ ರಾವ್ ಎಂಟ್ರಿ ಕೊಟ್ಟಿದ್ದಾರೆ. ಮಡಿವಂತಿಕೆಗಳನ್ನು ಮೀರಿಕೊಂಡು ಭಿನ್ನ ಬಗೆಯ ಕಥೆಯನ್ನವರು ಮುಟ್ಟಿರುವುದಕ್ಕೆ ಈ ಟ್ರೇಲರ್‌ಗಿಂತ ಬೇರೆ ಸಾಕ್ಷಿ ಬೇಕಿಲ್ಲ. ಅಂದಹಾಗೆ ಈ ಚಿತ್ರ ಬಿಡುಗಡೆಗೂ ಮುನ್ನವೇ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಸದ್ದು ಮಾಡಿದೆ. ಈ ಮೂಲಕ ಕನ್ನಡ ಚಿತ್ರರಂಗದ ಘನತೆಯನ್ನು ಎತ್ತಿ ಹಿಡಿದಿದೆ. ಇದೀಗ ಬಿಡುಗಡೆಗೆ ರೆಡಿಯಾಗಿರೋ ಈ ಚಿತ್ರತಂಡಕ್ಕೆ ಕಿಚ್ಚನ ಮೆಚ್ಚುಗೆ ಹೊಸಾ ಹುರುಪು ತುಂಬಿದೆ.

Advertisement

Udayavani is now on Telegram. Click here to join our channel and stay updated with the latest news.

Next